ಲೋಕಕಲ್ಯಾಣಾರ್ಥವಾಗಿ ತುಮಕೂರು ಜಿಲ್ಲೆಯ ಇತಿಹಾಸ ಪ್ರಸಿದ್ಧ ಗೂಳೂರು ಗಣಪತಿ ದೇವಾಲಯದ ಆವರಣದಲ್ಲಿ ಗೂಳೂರಿನ ಶ್ರೀನಿಕೇತನ ಭಕ್ತ ಮಂಡಳಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ 32 ವಿವಿಧ ಗಣ ಹೋಮವನ್ನು ಮಹಾಗಣಪತಿ ದೇವಾಲಯದಲ್ಲಿ ನೆರವೇರಿಸಲಾಯಿತು.
1008 ಮೋದಕ ಅಷ್ಟ ದ್ರವ್ಯಗಳಿಂದ ಅಷ್ಟಮಂದಿ ಋತ್ವಿಜರು ಸಮೂಹದಲ್ಲಿ ಭಕ್ತ ಮಂಡಳಿಯ ಮುಖ್ಯಸ್ಥರಾದ ಬಿ.ಕೆ .ಭೀಮರಾವ್. ರವರ ದಿವ್ಯ ಸಾನಿಧ್ಯದಲ್ಲಿ ಷೋಡ ಶೋಪಚಾರದೊಂದಿಗೆ ನೆರವೇರಿತು.
ಈ ಸಂದರ್ಭದಲ್ಲಿ ಗೂಳೂರು ಮಹಾಗಣಪತಿಯ ಅಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ ಶಿವಕುಮಾರ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಸುಮಾರು ಸಹಸ್ತ್ರ ಭಕ್ತಾದಿಗಳು ಹೋಮ ಪೂರ್ಣಾವತಿಯಲ್ಲಿ ಭಾಗವಹಿಸಿ ಗಣಪತಿಯ ಕೃಪೆಗೆ ಪಾತ್ರರಾದರು ಬಂದಂತಹ ಭಕ್ತರಿಗೆ ದೇವಾಲಯದಲ್ಲಿ ಪ್ರಸಾದದ ವ್ಯವಸ್ಥೆಯನ್ನು ನೆರವೇರಿಸಲಾಯಿತು