ಹಿಂದೂ ಗ್ರಾಹಕರಿಗೆ ಒತ್ತಾಯದಿಂದ ಹಲಾಲ್ ಹೇರದೆ ಹಲಾಲ್ ರಹಿತ ವಸ್ತುಗಳನ್ನು ಒದಗಿಸಿಕೊಡಬೇಕೆಂದು ಹಿಂದೂರಾಷ್ಟ್ರ ಜಾಗೃತಿ ಆಂದೋಲನದಲ್ಲಿ ಒತ್ತಾಯ!

 

ಸದ್ಯ ಭಾರತದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂತರ್ಗತ ‘ಆಹಾರ ಸುರಕ್ಷೆ ಮತ್ತು ಗುಣಮಟ್ಟದ ಪ್ರಾಧಿಕಾರ (FSSAI) ಹಾಗೂ ಪ್ರತಿಯೊಂದು ರಾಜ್ಯದಲ್ಲಿ ಸ್ವತಂತ್ರವಾದಂತಹ ‘ಆಹಾರ ಮತ್ತು ಔಷಧಿ ಆಡಳಿತ’ ವಿಭಾಗ (FDA) ಅಸ್ತಿತ್ವದಲ್ಲಿರುವಾಗಲೂ ಇಂದು ಮಾಂಸ ಮತ್ತು ಧಾನ್ಯ, ಹಣ್ಣು, ಸೌಂದರ್ಯಪ್ರಸಾಧನಗಳು, ಔಷಧಿಗಳು ಮುಂತಾದ ದಿನ ಬಳಕೆಯ ಉತ್ಪಾದನೆಗಳು ಸಹ ಹಲಾಲ್ ಪ್ರಮಾಣಿಕೃತ ಮಾಡಿ ಮಾರಾಟ ಮಾಡಲಾಗುತ್ತಿದೆ. ಜಾತ್ಯತೀತ ಭಾರತದಲ್ಲಿ ಧರ್ಮದ ಆಧಾರದಲ್ಲಿ ಸರ್ಟಿಫಿಕೇಶನ್ ಇದು ಕಾನೂನುಬಾಹಿರವಾಗಿದೆ. ಹೀಗಾಗಿ ಸಂವಿಧಾನ ವಿರೋಧಿಯಾಗಿರುವ ಹಲಾಲ್ ಪ್ರಮಾಣ ಪತ್ರವನ್ನು ಕೇಂದ್ರ ಸರ್ಕಾರ ಕೂಡಲೇ ನಿಷೇಧಿಸಬೇಕೆಂದು ತುಮಕೂರಿನಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ ಮಾಡಲಾಯಿತು. ಈ ಆಂದೋಲನದಲ್ಲಿ ಬಜರಂಗದಳ ಮತ್ತು ರಾಷ್ಟ್ರೀಯ ಹಿಂದು ಪರಿಷತ್ ಸಂಘಟನೆಗಳು ಸಹಭಾಗಿಯಾಗಿದ್ದವು. ಕೊನೆಗೆ ಈ ಕುರಿತು ತುಮಕೂರಿನ ಜಿಲ್ಲಾಧಿಕಾರಿಗಳಾದ ವೈ.ಎನ್ ಪಾಟೀಲ್ ಇವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಹ ಸಲ್ಲಿಸಲಾಯಿತು.

 

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶಶಿಧರ್ ಆಚಾರ್ ಇವರು ಮಾತನಾಡಿ, ದೇಶದ ಕೇವಲ ೧೫ ಶೇ. ದಷ್ಟಿರುವ ಮುಸಲ್ಮಾನ ಸಮಾಜಕ್ಕೆ ಇಸ್ಲಾಂ ಮಾನ್ಯ ‘ಹಲಾಲ್’ ತಿನ್ನಲಿಕ್ಕಿದೆ ಎಂದು ೮೫% ಸಮಾಜದ ಮೇಲೆ ‘ಹಲಾಲ್’ಅನ್ನು ಹೇರಲಾಗುತ್ತಿದೆ. ಹಿಂದೂ ಜನಜಾಗೃತಿ ಸಮಿತಿಯು ಇದನ್ನು ಕಠೋರ ಶಬ್ದಗಳಲ್ಲಿ ನಿಷೇಧಿಸುತ್ತಿದೆ. ಹಿಂದೂಗಳಿಗೆ ಒತ್ತಾಯಪೂರ್ವಕ ‘ಹಲಾಲ್’ ಪದಾರ್ಥಗಳನ್ನು ತಿನ್ನಿಸಿ ನೀವು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆ ಮಾಡಿದ್ದಲ್ಲದೆ ಸ್ವಾತಂತ್ರ್ಯದ ಅಧಿಕಾರಕ್ಕೆ ಗದಾ ಪ್ರಹಾರ ಮಾಡುತ್ತಿದ್ದೀರಿ. ಹಲಾಲ್ ಪ್ರಮಾಣೀಕೃತವಾಗಿರಬೇಕು ಎಂದು ಹಿಂದೂ ವ್ಯಾಪಾರಿಗಳಿಗೆ ಕಡ್ಡಾಯ ಮಾಡಲಾಗುತ್ತಿದೆ, ಹಲಾಲ್ ಪ್ರಮಾಣಪತ್ರದ ಹೆಸರಿನಲ್ಲಿ ದೇಶಾದ್ಯಂತ ಹಿಂದೂ ವ್ಯಾಪರಿಗಳಿಂದ ಸಾವಿರಾರು ಕೋಟಿರುಪಾಯಿ ಲೂಟಿಮಾಡಲಾಗುತ್ತಿದೆ,

 

ಹೀಗಾಗಿ ಇದು ಕೇವಲ ಧರ್ಮಕ್ಕೆ ಸಂಬಂಧಿಸಿರದೇ ಇಸ್ಲಾಮೀ ಆರ್ಥಿಕ ವ್ಯವಸ್ಥೆಯಾಗುತ್ತಿದೆ, ಇದರ ಮೂಲಕ ಸಂಗ್ರಹವಾಗುತ್ತಿರುವ ಹಣ ಭಯೋತ್ಪಾದನಾ ಚಟುವಟಿಕೆಗಳಿಗೆ ಉಪಯೋಗ ಮಾಡಲಾಗುತ್ತಿದೆ, ಇದು ಹಿಂದೂಗಳ ಮೇಲೆ ಮಾಡಿದ ಜಿಜಿಯಾ ತಲೆದಂಡವಾಗಿದೆ. ಹೀಗಾಗಿ ಸಂವಿಧಾನ ವಿರೋಧಿಯಾಗಿರುವ ಹಲಾಲ್ ಪ್ರಮಾಣ ಪತ್ರವನ್ನು ಕೇಂದ್ರ ಸರ್ಕಾರ ಕೂಡಲೇ ನಿಷೇಧಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.

 

 

ಈ ಸಂದರ್ಭದಲ್ಲಿ ರಾಷ್ಟ್ರೀಯ ಹಿಂದೂ ಪರಿಷತ್ ಸಂಚಾಲಕರಾದ ಅನಿಲ್ ಯಾದವ್, ಭಜರಂಗದಳದ ಸಂಚಾಲಕರಾದ ಮಂಜು ಭಾರ್ಗವ್ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!