ಸವಿತಾ ಸಮಾಜದವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ವೀರೇಶಾನಂದ ಸರಸ್ವತಿ ಸಾಮೀಜಿ ಕರೆ

ತುಮಕೂರು : ತುಮಕೂರು ಜಿಲ್ಲಾ ಸವಿತಾ ಸಮಾಜ ಹಾಗೂ ತುಮಕೂರು ತಾಲ್ಲೂಕು ಮತ್ತು ನಗರ ಸವಿತಾ ಸಮಾಜದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ರಾಮಕೃಷ್ಣ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ವಹಿಸಿ ಮಾತನಾಡಿದ ಶ್ರೀಗಳು ಸವಿತಾ ಸಮಾಜವು ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಈ ಸಮಾಜದ ಯುವ ಪೀಳಿಗೆಯು ವಿದ್ಯಾಭ್ಯಾಸ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ತಾವುಗಳು ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಮುಂದಿನ ದಿನಗಳಲ್ಲಿ ಅಲಂಕರಿಸಬೇಕು ಎಂದು ಕಿವಿಮಾತು ಹೇಳಿದರು.

ಇನ್ನು ಕಾರ್ಯಕ್ರಮದ ಉದ್ಘಾಟನೆಯನ್ನು ನಗರ ಶಾಸಕರಾದ ಜ್ಯೋತಿಗಣೇಶ್‌ರವರು ನೆರವೇರಿಸಿ, ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ನಿಮ್ಮಂತಹ ಸವಿತಾ ಸಾಮಜದವರು ಶಿಕ್ಷಣದಿಂದ ದೂರ ಉಳಿದಿದ್ದು ಕಂಡು ಬರುತ್ತಿದೆ, ನಿಮ್ಮಂತಹ ಯುವ ಪಡೆಯವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುವುದರೊಂದಿಗೆ ನಿಮ್ಮ ಕುಲ ಕಸುಬಿನಲ್ಲಿ ಆಧುನಿಕ ತಂತ್ರಜ್ನಾನಗಳನ್ನು ಅಳವಡಿಸಿ, ಹೊಸ ಹೊಸ ಆವಿಷ್ಕಾರಗಳನ್ನು ತಮ್ಮಗಳಿಂದ ಆಗಬೇಕಾಗಿದೆಂದರು. ಅಲ್ಲದೇ ತಮ್ಮ ಸಮಾಜದಿಂದ ನಿರ್ಮಿಸುತ್ತಿರುವ ಕಟ್ಟಡವು ಅಚ್ಚುಕಟ್ಟಾಗಿ ಮೂಡಿಬಂದಿದು, ಮುಂದಿನ ದಿನಗಳಲ್ಲಿ ನಮ್ಮ ಶಾಸಕರ ನಿಧಿಯಿಂದಲೂ ತಮಗೆ ಅನುದಾನವನ್ನು ಬಿಡುಗಡೆ ಮಾಡಿಕೊಡಲು ಕ್ರಮ ವಹಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ಸುಮಾರು ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ತುಮಕೂರು ತಾಲ್ಲೂಕು ಮತ್ತು ನಗರ ಸವಿತಾ ಸಮಾಜದ ಅಧ್ಯಕ್ಷರಾದ ಕಟ್‌ವೆಲ್ ರಂಗನಾಥ್‌ರವರು ಮಾತನಾಡುತ್ತಾ ಸವಿತಾ ಸಮಾಜದ ಬಂಧುಗಳು ತಮ್ಮ ಕಸುಬಿನಲ್ಲಿ ಆಧುನಿಕ ಸ್ಪರ್ಶವನ್ನು ನೀಡಿ, ಜನರಿಗೆ ವಿನೂತನ ಮಾದರಿಯ ವಿನ್ಯಾಸಗಳನ್ನು ರೂಪಿಸಿಕೊಟ್ಟು ತಮ್ಮ ಕಾರ್ಯಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಬಹುದಾದ ಅನೇಕ ಅವಕಾಶಗಳು ನಮ್ಮಲ್ಲಿವೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಬಂಧುಗಳಿಗೆ ಅನುಕೂಲವಾಗುವಂತೆ ವಿಶೇಷ ಕಾರ್ಯಗಾರಗಳನ್ನು ಜಿಲ್ಲಾ ಸಂಘದ ಸಹಯೋಗದೊಂದಿಗೆ ನೆರವೇರಿಸಲಾಗುವುದೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಮಂಜೇಶ್ ಒಲಂಪಿಕ್ಸ್, ತುಮಕೂರು ನಗರ ಶಾಸಕರಾದ ಜ್ಯೋತಿಗಣೇಶ್, ಸವಿತಾ ಸಮಾಜದ ಬಂಧುಗಳಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ವಸಂತ, ಹಾಗೂ ಸವಿತಾ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!