ತುಮಕೂರು:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ತುಮಕೂರು ಗ್ರಾಮಾಂತರ ಶಾಸಕರ ಆರ್ಥಿಕ ಸಹಕಾರದೊಂದಿಗೆ ಅನುಷ್ಠಾನಗೊಂಡಿರುವ ಹೆತ್ತೇನಹಳ್ಳಿ ಗ್ರಾಮ ಪಂಚಾಯಿತಿಯ ಕಂಭತ್ತನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಶುದ್ಧಗಂಗಾ ಘಟಕದ ಉದ್ಘಾಟನೆಯನ್ನು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಡಿ.ಸಿ.ಗೌರಿಶಂಕರ್ ರವರು ನೆರವೇರಿಸಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಶ್ಲಾಘನೀಯ,ಧರ್ಮಸ್ಥಳ ಸಂಸ್ಥೆಯಿಂದ ೫ ಲಕ್ಷ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 5 ಲಕ್ಷ ಒಟ್ಟು 10 ಲಕ್ಷ ರೂ ವೆಚ್ಚದಲ್ಲಿ ಶುದ್ಧಗಂಗಾ ಘಟಕ ನಿರ್ಮಾಣಗೊಂಡಿದ್ದು ಜನರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಶುಭ ಹಾರೈಸಿ ಶುದ್ಧ ನೀರಿನ ಕುಡಿಯುವ ನೀರಿನ ಕ್ಯಾನ್ ಗಳನ್ನು ಸಾರ್ವಜನಿಕರಿಗೆ ವಿತರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೋಕು ಯೋಜನಾಧಿಕಾರಿಗಳಾದ ಶ್ರೀಮತಿ ಸುನಿತಾಪ್ರಭು ರವರು ಮಾತನಾಡಿ ತುಮಕೂರು ತಾಲ್ಲೋಕಿನಲ್ಲಿ ಒಟ್ಟು 12 ಶುದ್ಧಗಂಗಾ ಘಟಕ ರಚನೆ ಮಾಡಿದ್ದು ಎಲ್ಲಾ ಘಟಕಗಳು ಜನರಿಗೆ ತುಂಬಾ ಅನುಕೂಲವಾಗುವಂತೆ ಉತ್ತಮವಾಗಿ ನಿರ್ವಹಣೆ ಆಗುತ್ತಿರುವ ಕುರಿತು ಮಾಹಿತಿ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರೂ ಮತ್ತು ಸಮಾಜ ಸೇವಕರೂ ಆದ ಜಿ.ಪಾಲನೇತ್ರಯ್ಯ,ಕೆರೆ ಅಭಿಯಂತರಾದ ಅರುಣ್, ಶುದ್ಧಗಂಗಾ ಮೇಲ್ವಿಚಾರಕರಾದ ಶಿವರಾಮ್,ವಲಯ ಮೇಲ್ವಿಚಾರಕರಾದ ಹೇಮಂತ್ ಕುಮಾರ್,ಜೆವಿಕೆ ಸಮನ್ವಯಾಧಿಕಾರಿ ಸಿಂಧೂ, ಕೈದಾಳ ರಮೇಶ್, ದೇವರಾಜು, ಶಿವಕುಮಾರಸ್ವಾಮಿ, ನರಸಿಂಹಮೂರ್ತಿ, ರಾದಾರಾಜಣ್ಣ,ಸ್ವಾಮಿಗೌಡ,ಮಂಜಣ್ಣ,ಲೋಕೇಶ್,ಗಂಗಣ್ಣ ಹಾಗೂ ಗ್ರಾಮದ ಮುಖಂಡರು ಸಂಘದ ಸದಸ್ಯರುಗಳು ಒಕ್ಕೂಟದವರು ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.