ಇತಿಹಾಸ ಪ್ರಸಿದ್ದ ಗೂಳೂರು ಕೆರೆ 23 ವರ್ಷಗಳ ನಂತರ ಕೋಡಿ : ಶಾಸಕರಾದ ಡಿ ಸಿ ಗೌರಿಶಂಕರ್ ರವರು ಗೂಳೂರು ಕೆರೆಗೆ ಬಾಗಿನ

ತುಮಕೂರು- ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ಗೂಳೂರು ಕೆರೆ 23 ವರ್ಷಗಳ ನಂತರ ಕೋಡಿ ಬಿದ್ದಿದ್ದು ವಿವಿಧ ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಶಾಸಕರಾದ ಡಿ ಸಿ ಗೌರಿಶಂಕರ್ ರವರು ಗೂಳೂರು ಕೆರೆಗೆ ಬಾಗಿನ ಅರ್ಪಿಸಿದರು.


ಗೂಳೂರು ಹೋಬಳಿ ಜಿಲ್ಲಾಪಂಚಾಯ್ತಿ ಉಸ್ತುವಾರಿ ಪಾಲನೇತ್ರಯ್ಯ ಹಾಗೂ ಇತರೆ ಮುಖಂಡರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 5000 ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು,ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 4000 ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಶಾಸಕರಾದ ಡಿ ಸಿ ಗೌರಿಶಂಕರ್ ಬಾಗಿನ ನೀಡುವ
ಈ ಭಾಗದಲ್ಲಿ ನಾನು ಅಧಿಕಾರದಲ್ಲಿ ಇರುವವರೆಗೂ ಈ ಭಾಂಧವ್ಯ ಶಾಶ್ವತವಾಗಿ ಇರುವಂತೆ ನೋಡಿಕೊಳ್ಳುತ್ತೇನೆ ಎಂದರು.


ಇದೇ ವೇಳೆ ಶಾಸಕ ಡಿ ಸಿ ಗೌರಿಶಂಕರ್ ಮಾತನಾಡಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ ಅವರು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಜನತಾ ಜಲದಾರೆ ಆರಂಭಿಸಿದ ಬಳಿಕ ನಾಡಿನಲ್ಲಿ ಸಮೃದ್ದ ಮಳೆಯಾಗುತ್ತಿದೆ,ಕೆರೆಗಳು ಕೋಡಿ ಬೀಳುತ್ತಿವೆ, ನಾಡಿನ ರೈತರ ಕಷ್ಟದ ದಿನಗಳು ದೂರವಾಗುತ್ತಿವೆ,2023 ರಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ರಾಜ್ಯದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದರು.

ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಜನತಾ ಜಲಧಾರೆ ಕಾರ್ಯಕ್ರಮ ಆರಂಭಿಸಿದ ಬಳಿಕ ರಾಜ್ಯದಲ್ಲಿ ಎಲ್ಲಾ ಕೆರೆಗಳೂ ಕೋಡಿ ಬಿದ್ದಿವೆ,ತುಮಕೂರು ಗ್ರಾಮಾಂತರದಲ್ಲಿ ಇತಿಹಾಸ ಪ್ರಸಿದ್ದ ಗೂಳೂರು ಕೆರೆಯೂ ಸೇರಿದಂತೆ ಕ್ಷೇತ್ರದ ಬಹುತೇಕ ಎಲ್ಲಾ ಕೆರೆಗಳೂ ಎರಡೆರಡು ಸಾರಿ ಕೋಡಿ ಬಿದ್ದಿವೆ,ಈ ಬೆಳವಣಿಗೆ ಜೆಡಿಎಸ್ ಪಕ್ಷದ ಪಾಲಿಗೆ ಶುಭಸೂಚನೆ,ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿದರೆ ಮಾತ್ರ ಈ ನಾಡಿನ ರೈತರು ಹಾಗೂ ಜನಸಾಮಾನ್ಯರು ನೆಮ್ಮದಿ ಜೀವನ ಮಾಡಲು ಸಾಧ್ಯವಾಗುತ್ತದೆ,ಜನರ ನಾಡಿ ಮಿಡಿತ ಅರಿತಿರುವ ಕುಮಾರಣ್ಣನನ್ನು ಮುಂದಿನ ಮುಖ್ಯಮಂತ್ರಿಯಾಗಿ ಮಾಡಲು ಎಲ್ಲರೂ ಪಣ ತೊಡಬೇಕೆಂದರು.
ವಿರೋಧಿಗಳ ಠೀಕೆಗಳಿಗೆ ಅಭಿವೃದ್ದಿ ಮೂಲಕ ಉತ್ತರ ಕೊಟ್ಟಿದ್ದೇನೆ,ಕೊಡುತ್ತಿದ್ದೇನೆ ಮುಂದಿನ 25 ವರ್ಷಗಳ ಕಾಲ ತುಮಕೂರು ಗ್ರಾಮಾಂತರ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಲಿದೆ, ನಾನು ಜನನಾಯಕನಲ್ಲ ಜನಸೇವಕ ನಿಮ್ಮಮನೆ ಮಗ ನಿಮ್ಮಗಳ ಸೇವೆಗೆ ಸದಾ ಸಿದ್ದ ಎಂದರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಜನರಿಗೂ ಹೋಳಿಗೆ ಊಟದ ವ್ಯವಸ್ತೆ ಮಾಡಲಾಗಿತ್ತು, ಗೂಳೂರು ಕೆರೆ ಬಳಿ ಹರಗುರುಚರಮೂರ್ತಿಗಳ
ಮೃತ್ಯುಂಜಯ ಹೋಮಾದಿ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನಡೆದವು. ರಾಮೇನಹಳ್ಳಿ ಮಠಧ ಶ್ರೀ ಶಿವಪಂಚಾಕ್ಷರಿ ಸ್ವಾಮೀಜಿ,ತಮ್ಮಡಿಹಳ್ಳಿ ವಿರಕ್ತಮಠದ ಶ್ರೀ ಸಿದ್ದಲಿಂಗ ದೇಶಿಕೇಂದ್ರ ಸ್ವಾಮೀಜಿ,ಪಾಲನಹಳ್ಳಿ ಮಠದ ಶ್ರೀ ಸಿದ್ದರಾಜು ಸ್ವಾಮೀಜಿ,ಶಿಡ್ಲೆಕೊಣದ ಶ್ರೀ ವಾಲ್ಮೀಕಿ ಸಂಜಯ ಕುಮಾರ ಸ್ವಾಮೀಜಿ,ಹರಳೂರು ಜಂಗಮ ಮಠದ ಶ್ರೀ ಚನ್ನಬಸವ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಗೂಳೂರು ಜಿಲ್ಲಾ ಪಂಚಾಯ್ತಿ ಉಸ್ತುವಾರಿ ಜಿ ಪಾಲನೇತ್ರಯ್ಯ, ಮಾಜಿ ಎಪಿಎಂಸಿ ಉಪಾಧ್ಯಕ್ಷೆ ಹಾಗೂ ಗ್ರಾಮಪಂಚಾಯ್ತಿ ಸದಸ್ಯೆ ವಿಜಯಕುಮಾರಿ, ಗೂಳೂರು ಗ್ರಾಮಪಂಚಾಯ್ತಿ ಅಧ್ಯಕ್ಷ ಕೃಷ್ಣೇಗೌಡ, ಜೆಡಿಎಸ್ ಹಿರಿಯ ಮುಖಂಡ ರಾಮಚಂದ್ರಪ್ಪ, ಜೆಡಿಎಸ್ ಮುಖಂಡರಾದ ಹಾಲನೂರು ಅನಂತಕುಮಾರ್,ಹರಳೂರು ಸುರೇಶ್,ಪ್ರಕಾಶ್,ಕೆ.ವಿ ಮಂಜುನಾಥ್ ಕಂಬತ್ತನಹಳ್ಳಿ,ಬೆಳಗುಂಬ ವೆಂಕಟೇಶ್,ರಂಗಯ್ಯನಪಾಳ್ಯ ರಮೇಶ್,ಕೈದಾಳ ರಮೇಶ್, ಜೆಡಿಎಸ್ಚಯುವಮುಖಂಡ ನರಸಾಪುರ ಹರೀಶ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ,ಗೂಳೂರು,ಪಾಲಸಂದ್ರ ಗ್ರಾಮಪಂಚಾಯ್ತಿ ಅಧ್ಯಕ್ಷರು,ಸದಸ್ಯರು,ಜೆಡಿಎಸ್ ಯುವ ಮುಖಂಡರು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!