ತುಮಕೂರು_ದಕ್ಷಿಣ ಕನ್ನಡದ ಪ್ರವೀಣ್ ನೆಟ್ಟರ್ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಹೇಳಿಕೆ ನೀಡುವ ಸಮಯದಲ್ಲಿ ಸಮಾಜದ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತರುವಂತ ಹೇಳಿಕೆಗಳನ್ನು ನೀಡಿರುವ ಕಡೂರಿನ ಕಾಳಿ ಮಠದ ಋಶಿಕುಮಾರ ಸ್ವಾಮೀಜಿ (ಕಾಳಿ ಸ್ವಾಮಿ)ವಿರುದ್ಧ ಸುಮೋಟೋ ಕೇಸ್ ದಾಖಲು ಮಾಡಲು ತುಮಕೂರಿನ ಪ್ರಗತಿಪರ ವೇದಿಕೆ ಒತ್ತಾಯಿಸಿದೆ.
ಶನಿವಾರ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿದ ಪ್ರಗತಿಪರರ ವೇದಿಕೆಯ ಮುಖಂಡರುಗಳು ತುಮಕೂರು ಶಾಂತಿಯ ತವರೂರು ಶ್ರೀ ಶಿವಕುಮಾರ ಸ್ವಾಮಿಗಳಂತ ಮಹನೀಯರು ಇದ್ದ ಶಾಂತಿಯ ನೆಲದಲಿ ಅಶಾಂತಿ ಕದಡುವ ಕೆಲಸವನ್ನು ಕಾಳಿ ಸ್ವಾಮಿ ಮಾಡಿದ್ದು ಕೂಡಲೇ ಕಾಳಿ ಸ್ವಾಮಿಯ ವಿರುದ್ಧ ಸುಮಟೊ ಕೆಸ್ ದಾಖಲು ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಪಿಯುಸಿಎಲ್ ಮುಖಂಡರಾದ ಕೆಂಪರಾಜು ಮಾತನಾಡಿದ್ದು ಹಿಂದೂಪರ ಸಂಘಟನೆಗಳ ಪ್ರತಿಭಟನೆ ವೇಳೆ ಜೀವ ವಿರೋಧಿ, ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡಿದ್ದು ಹಿಂದೂ ಕಾರ್ಯಕರ್ತರ ಹತ್ಯೆ ಸಂಬಂಧ ಇನ್ನು 9 ತಲೆಗಳು ಬೇಕು, ಫಾಝಿಲ್ ನನ್ನ ಹಿಂದುಗಳು ಹತ್ಯೆ ಮಾಡಿದ್ದರೆ ಅವರನ್ನು ಅಭಿನಂದಿಸುತ್ತೇವೆ ಎಂದು ಹೇಳಿಕೆಗಳನ್ನು ನೀಡುವ ಮೂಲಕ ತುಮಕೂರು ಜಿಲ್ಲೆಯನ್ನು ಮತ್ತೊಂದು ಉಡುಪಿ, ಮಂಗಳೂರನ್ನಾಗಿ ಮಾಡಲು ಹೊರಟಿದ್ದಾರೆ ಹಾಗಾಗಿ ಕೂಡಲೇ ಇವರ ಮೇಲೆ ಸುಮೋಟೋ ಕೇಸ್ ದಾಖಲು ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮತ್ತೊಬ್ಬ ಮುಖಂಡ ಉಮೇಶ್ ಮಾತನಾಡಿದ್ದು ಶಾಂತಿಯ ತವರೂರಾದ ತುಮಕೂರು ಜಿಲ್ಲೆಯನ್ನು ರಕ್ತದ ಮಡುವಿಗೆ ತಳ್ಳಲು ಹಾಗೂ ರಾಜಕೀಯ ಲಾಭವನ್ನು ಪಡೆಯಲು ಮುಂದಾಗಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಸಯ್ಯದ್ ಮುಜೀಬ್, ರಾಮಯ್ಯ, ಸುಬ್ರಹ್ಮಣ್ಯ ಕೊಟ್ಟ ಶಂಕರ್, ಕೇಬಲ್ ರಘು, ತಾಜುದ್ದೀನ್ ಷರೀಫ್ , ನರಸಿಂಹಮೂರ್ತಿ, ಅರುಣ್ ಸೇರಿದಂತೆ ಹಲವು ಪ್ರಗತಿಪರ ಮುಖಂಡರು ಹಾಜರಿದ್ದರು.