ತುಮಕೂರು: ಕರೋನಾ ನಂತರದಲ್ಲಿ ಜನರ ಆರೋಗ್ಯ ರಕ್ಷಣೆಗೆ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರ ತಂಡ ಮತ್ತೆ ಹಳ್ಳಿಗಳತ್ತ ತೆರಳಿಗೆ ಆರೋಗ್ಯ ಸೇವೆ ನೀಡಲು ಮುಂದಾಗಿದೆ.
ತುಮಕೂರು ತಾಲ್ಲೂಕಿನ ತೋವಿನಕರೆಯಲ್ಲಿ ಏರ್ಪಟ್ಟ ಉಚಿತ ದಂತ ವೈದ್ಯಕೀಯ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿದ ಎಸ್‌ಡಿಎಂಸಿ ಅಧ್ಯಕ್ಷರಾದ ರೇವಣ್ಣಮೂರ್ತಿ ಮಾತನಾಡಿ, ಉಚಿತಆರೋಗ್ಯ ಶಿಬಿರಗಳಿಂದ ಗ್ರಾಮಾಂತರ ಪ್ರದೇಶದ ಬಡಜನತೆ ಅಷ್ಟೆ ಅಲ್ಲದೆ ಓಡಾಡಲು ಆಗದ ನಿಶಸ್ತಕ ಜನವರ್ಗಕ್ಕೆ ಹೆಚ್ಚು ಅನುಕೂಲವಾಗುತ್ತದೆ. ಕರೋನ ಅಬ್ಬರದಿಂದ ಹಣವಿಲ್ಲದೆ ಜನರು ತತ್ತರಗೊಂಡಿರುವ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಔ?ಧಿ ನೀಡುತ್ತಿರುವುದರಿಂದ ಮಾನವೀಯತೆಯ ಕೆಲಸವಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ಮಾತನಾಡಿ, ಸ್ಥಳದಲ್ಲಿಯೇ ಅನೇಕ ಸಣ್ಣಪುಟ್ಟ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನಡೆಸಿ, ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತಿರುವ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ವೈದ್ಯರ ತಂಡ ಕೆಲಸ ಜನುಪಯೋಗಿಯಾಗಿದೆ.
ಹಳ್ಳಿಗಳತ್ತ ವೈದ್ಯರು ಬರುತ್ತಿದ್ದು, ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ದಂತ ಆರೋಗ್ಯ ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ|| ಭರತೇಶ, ಡಾ|| ದರ್ಶನ್ ಬಿ., ಡಾ||ಅನುಸೂಯ, ಡಾ|| ಸ್ನೇಹಾ, ಡಾ|| ಹರಿಪ್ರಿಯಾ, ಡಾ|| ರಿಕಿ, ಡಾ|| ಹರ್ಷಿತಾ, ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಹಾಜರಿದ್ದರು. ಈ ಶಿಬಿರದಲ್ಲಿ 229 ಮಂದಿಗೆ ದಂತ ರೋಗ, ಮಕ್ಕಳ ಕಿವಿ-ಮೂಗು ಮತ್ತು ಗಂಟಲು ಕಾಯಿಲೆಗಳ ಬಗ್ಗೆ ತಪಾಸಣೆ ನಡೆಸಿ, ಔಷಧಿ ವಿತರಿಸಲಾಯಿತು.