ಗಂಗೆಗೆ ಜನಜೀವನವನ್ನು ಸಮೃದ್ಧಗೊಳಿಸುವ ಶಕ್ತಿಯಿದೆ

ತುಮಕೂರು: ಭಾರತೀಯ ಪರಂಪರೆಯು ಪಂಚಮಹಾಭೂತಗಳಲ್ಲಿ ಒಂದಾದ ನೀರಿಗೆ ವಿಶೇ? ಸ್ಥಾನ ನೀಡಿದೆ. ’ಜಲ’ವೆನ್ನುವುದು ಕೇವಲ ’ನೀರು’ ಅಲ್ಲ; ಅದು ಮನು?ನನ್ನು ಜನನ – ಮರಣಗಳ ಚಕ್ರದಿಂದ ಬಿಡಿಸಿ ಮೋಕ್ಷವನ್ನು ಕರುಣಿಸುವ ’ಗಂಗಾ ಮಾತೆ’. ಗಂಗಾ ತೀರ್ಥ ಮನು?ನ ಮೈ-ಮನಗಳ ಕೊಳೆಯನ್ನು ತೊಳೆದು ಶುದ್ಧೀಕರಿಸುವ ಅಮೃತವಾಹಿನಿ. ಯಾವುದೇ ಪೂಜೆ, ಹೋಮ-ಹವನಾದಿ ಕಾರ್ಯಗಳನ್ನು ಪ್ರಾರಂಭಿಸುವ ಮುನ್ನ ನಾವು ಜಲವನ್ನು ಪ್ರಮಾಣವಾಗಿಟ್ಟುಕೊಂಡು ಸಂಕಲ್ಪವನ್ನು ಮಾಡಿಯೇ ಮುಂದುವರೆಯುತ್ತೇವೆ. ಏಕೆಂದರೆ ನೀರಿಗೆ ಸ್ಮರಣಶಕ್ತಿ ಎಂಬ ವಿಶೇ? ಗುಣವಿದೆ. ಒಟ್ಟಿನಲ್ಲಿ ’ಗಂಗೆ’ ಭಾರತೀಯ ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗು ಸಾಮಾಜಿಕ ಬದುಕಿನ ಕೇಂದ್ರ. ಆದ್ದರಿಂದಲೇ ’ಗಂಗಾ ಪೂಜೆ’ಯನ್ನು ಭಾರತೀಯರು ಅನಾದಿ ಕಾಲದಿಂದಲೂ ವಿಶೇ? ಸಂದರ್ಭಗಳಲ್ಲಿ ನೆರವೇರಿಸುವ ಮೂಲಕ ತಮ್ಮ ಕೃತಜ್ಞತೆಯನ್ನು ಅರ್ಪಿಸುತ್ತಾ ಬಂದಿದ್ದಾರೆ ಎಂದು ತುಮಕೂರು ರಾಮಕೃ?-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತೀಯವರು ಅಭಿಪ್ರಾಯ ಪಟ್ಟರು. ಅವರು ತುಮಕೂರು ರಾಮಕೃ?-ವಿವೇಕಾನಂದ ಆಶ್ರಮದ ವತಿಯಿಂದ ಅಮಾನಿಕೆರೆಯಲ್ಲಿ ಆಯೋಜಿಸಿದ್ದ ’ಗಂಗಾ ಪೂಜೆ’ ಹಾಗು ಗಂಗೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.


ಮುಂದುವರೆದು ಮಾತನಾಡುತ್ತಾ ದಕ್ಷಿಣೇಶ್ವರದ ಗಂಗಾ ತೀರದಲ್ಲಿ ತಮ್ಮ ಸಾಧನಾ ಜೀವನವನ್ನು ನಡೆಸಿದ ಶ್ರೀರಾಮಕೃ? ಪರಮಹಂಸರು ಹಾಗು ಜಗನ್ಮಾತೆ ಶ್ರೀಶಾರದಾದೇವಿಯವರು ಪ್ರತಿತಿಂಗಳು ಗಂಗಾಪೂಜೆಯನ್ನು ತಪ್ಪದೆ ನೆರವೇರಿಸಿಕೊಂಡು ಬರುತ್ತಿದ್ದರು. ಈಗಲೂ ರಾಮಕೃ?-ವಿವೇಕಾನಂದ ಆಶ್ರಮಗಳು ಈ ಸಂಪ್ರದಾಯವನ್ನು ಮುಂದುವರೆಸುತ್ತಾ ಬಂದಿದೆ ಎಂದರು.
ಆಶ್ರಮದ ಸ್ವಾಮಿ ಧೀರಾನಂದಜೀ ಮಾತನಾಡಿ ಜಗತ್ತಿನ ಬಹುತೇಕ ನಾಗರಿಕತೆಗಳು ಹುಟ್ಟಿ ಪ್ರವರ್ಧಮಾನಕ್ಕೆ ಬಂದದ್ದು ನದಿಗಳ ದಡಗಳಲ್ಲಿಯೇ. ಸುಮಾರು ೨೫ ವ?ಗಳ ನಂತರ ಅಮಾನಿಕೆರೆಯು ಸಂಪೂರ್ಣ ತುಂಬಿ ಕೋಡಿ ಒಡೆದಿರುವ ದೃಶ್ಯ ಅವಿಸ್ಮರಣೀಯ. ಗಂಗಾಮಾತೆಯು ಜನಜೀವನವನ್ನು ಸಮೃದ್ಧಗೊಳಿಸಿ ಅವರುಗಳಿಗೆ ಸುಖ, ಶಾಂತಿ ಮತ್ತು ನೆಮ್ಮದಿಯನ್ನು ದಯಪಾಲಿಸುವುದರಿಂದ ಅವಳನ್ನು ಪೂಜಿಸಿ ತನ್ಮೂಲಕ ಕೃತಜ್ಞತೆಯನ್ನು ಅರ್ಪಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದರು.


ಆಶ್ರಮದ ಸ್ವಾಮಿ ಪರಮಾನಂದಜೀ ಮಾತನಾಡುತ್ತ ನೀರಿಗೆ ಖಾಯಿಲೆಗಳನ್ನು ಗುಣಪಡಿಸುವ, ಮನಶುದ್ಧಿಯನ್ನು ಪರಿಣಾಮಕಾರಿಯಾಗಿ ಮಾಡುವ ವಿಶೇ? ಶಕ್ತಿಯಿದೆ. ಮನು?ನ ಭಾವನೆಗಳಿಗೆ ತಕ್ಕಂತೆ ನೀರು ಕೂಡ ಪ್ರತಿಸ್ಪಂದಿಸುತ್ತದೆ ಎಂದು ಆಧುನಿಕ ವಿಜ್ಞಾನವು ಇತ್ತೀಚೆಗೆ ಕಂಡುಕೊಂಡಿದೆ. ಆದ್ದರಿಂದಲೇ ನೀರನ್ನು ಮಲಿನಗೊಳಿಸದೇ ಅದರ ಪಾವಿತ್ರ್ಯವನ್ನು ಕಾಪಾಡುವ ಹೊಣೆ ನಮ್ಮೆಲರ ಮೇಲಿದೆ ಎಂದರು.
ಕೋಟೆ ಆಂಜನೇಯ ಸ್ವಾಮಿ ಪಂಚಮುಖಿ ಗಣಪತಿ ದೇವಸ್ಥಾನದ ಅರ್ಚಕರಾದ ಪ್ರಸನ್ನಾಚಾರ್ ಗಂಗಾ ಪೂಜೆಯನ್ನು ನೆರವೇರಿಸಿಕೊಟ್ಟರು. ಯತಿತ್ರಯರ ನೇತೃತ್ವದಲ್ಲಿ ಹಾಗು ನೂರಾರು ಭಕ್ತರ ಸಮ್ಮುಖದಲ್ಲಿ ಹ?ದ್ಗಾರದೊಂದಿಗೆ ಗಂಗೆಗೆ ಬಾಗಿನವನ್ನು ಅರ್ಪಿಸಲಾಯಿತು. ಕೆಲವು ತಾಯಂದಿರನ್ನು ಸಾಂಕೇತಿಕವಾಗಿ ಸಾಕ್ಷಾತ್ ’ಗಂಗಾಮಾತೆ’ಯರೆಂದೇ ಪೂಜಿಸಿ ಅಕ್ಕಿ, ಸೀರೆ, ರವಿಕೆ ಖಣ ಮುಂತಾದವುಗಳಿಂದ ಉಡಿ ತುಂಬಿದರು. ಭಕ್ತರಿಗೆ ಗಂಗಾಪ್ರಸಾದವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ರಮಾನಂದ ಹೆಬ್ಬಾರ್, ಜಂಟಿ ಕಾರ್ಯದರ್ಶಿ ಎನ್ ಕೃ?ಮೂರ್ತಿ, ಶಿಕ್ಷಣ ತಜ್ಞ ವಿದ್ಯಾಶಂಕರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!