ಗುಬ್ಬಿ. ರಾಜೇನಹಳ್ಳಿ ಸೇತುವೆ ನಿರ್ಮಾಣ ಕಾಮಗಾರಿ ಮಾಡುವಲ್ಲಿ ಪಿ ಡಬ್ಲೂ ಡಿ ಇಲಾಖೆ ನಿರ್ಲಕ್ಷ್ಯ. ಗ್ರಾಮಸ್ಥರಿಂದ ಪ್ರತಿಭಟನೆ ಎಚ್ಚರಿಕೆ.
ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ವ್ಯಾಪ್ತಿಯ ರಾಜೇನಹಳ್ಳಿ ಸಂಪರ್ಕ ದ ಸೇತುವೆ ಕುಸಿದು ಸಂಪೂರ್ಣ ಸ್ಥಳೀಯ ಹೊಲ ಗದ್ದೆ ಗಳಿಗೆ ನೀರು ಹರಿದು ಲಕ್ಷಾಂತರ ರೂ ಬೆಳೆ ನಷ್ಟ ಸಂಭವಿಸಿದ್ದರು ಸಹ ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರಾಜೇನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಸುರಿದ ಮಳೆಗೆ ಕುಸಿದ ಸೇತುವೆ.ಇತ್ತೀಚೆಗೆ ಸುರಿದ ಮಳೆಯಿಂದ ಸೇತುವೆ ಕುಸಿದು ಸಂಚಾರಕ್ಕೆ ತೊಂದರೆಯಾದ ಹಿನ್ನಲೆಯಲ್ಲಿ ಸ್ವತಃ ಗ್ರಾಮಸ್ಥರು ನೀರು ಪೋಲಾಗುವುದನ್ನು ತಡೆಯವಲ್ಲಿ ಸಾಕಷ್ಟು ಪರಿಶ್ರಮ ವಹಿಸಿದರು ಸಹ ಯಾವುದೇ ಪ್ರಯೋಜನ ವಾಗದ ಹಿನ್ನೆಲೆಯಲ್ಲಿ ತಾತ್ಕಾಲಿಕ ಮಣ್ಣಿನ ತಡೆಗೋಡೆ ನಿರ್ಮಾಣ ಕ್ಕೆ ಮುಂದಾದರು ಇನ್ನೂ ಸ್ಥಳಕ್ಕೆ ಶಾಸಕ ಮಸಾಲೆ ಜಯರಾಂ ಭೇಟಿ ನೀಡಿ ಸೇತುವೆ ಪರಿಶೀಲನೆ ನೆಡೆಸಿ ಕಾಮಗಾರಿ ಪ್ರಾರಂಭ ದ ಬಗ್ಗೆ ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಕಾಮಗಾರಿ ಪ್ರಾರಂಭ ಮಾಡುವ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದರು.
ಶಾಸಕರ ಮಾತಿಗೆ ಕಿಮ್ಮತ್ತು ನೀಡದ ಲೋಕೋಪಯೋಗಿ ಅಧಿಕಾರಿಗಳು.ತುರುವೇಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಸೇತುವೆ ರಾಜೇನಹಳ್ಳಿ ಹಾಗೂ ಚಂಗಾವಿ. ಇತರೆ ಗ್ರಾಮಗಳಿಗೆ ಸಂಪರ್ಕ ದ ರಸ್ತೆ ಹಾಗಿರುವುದರಿಂದ ರಾತ್ರಿ ಸಮಯದಲ್ಲಿ ಸಂಚರಿಸಿ ಸಾರ್ವಜನಿಕರಿಗೆ ತೊಂದರೆ ಯಾಗುವು ಜೋತೆಗೆ ಸೇತುವೆ ಹೊಡೆದು ಹೋಗಿರುವುದರಿಂದ ಈ ಭಾಗದ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ಬೆಳೆಗೆ ಹಾನಿಯಾಗಿ ರೈತರ ಬೆಳೆಗಳು ನಾಶವಾಗುತ್ತದೆ ಆದ್ದರಿಂದ ತುರ್ತಾಗಿ ಸೇತುವೆ ಕಾಮಗಾರಿ ಮಾಡಲು ತಿಳಿಸಿದರು ಸಹ ಅಧಿಕಾರಿಗಳು ಶಾಸಕ ಮಸಾಲೆ ಜಯರಾಂ ಮಾತಿಗೂ ಕಿಮ್ಮತ್ತು ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸೇತುವೆ ಕಾಮಗಾರಿ ಸ್ಥಗೀತ.ಅಪಾಯ ಸಂಭವಿಸಿದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನೇರ ಹೊಣೆ. ಸೇತುವ ಅರ್ಧ ಭಾಗ ಸಂಪೂರ್ಣ ವಾಗಿ ಕುಸಿದು ಸಂಚಾರಕ್ಕೆ ತೊಂದರೆ ಯಾಗುತ್ತಿದ್ದು ಸಂಚಾರದ ಸಮಯದಲ್ಲಿ ಅಪಾಯ ಸಂಭವಿಸಿ ನೇರವಾಗಿ ಪಿ.ಡಬ್ಲೂ.ಡಿ.ಇಲಾಖೆ ಅಧಿಕಾರಿಗಳು ನೇರಹೋಣೆ ಗಾರರಾಗುತ್ತಾರೆ ಕೊಡಲೆ ಎಚ್ಚೇತು ಕೊಂಡು ಸೇತುವೆ ಕಾಮಗಾರಿ ಮುಕ್ತಾಯ ಗೊಳಿಸದಿದ್ದರೆ ಗ್ರಾಮಸ್ಥರುಗಳ ಹಾಗೂ ಸ್ಥಳೀಯ ರೈತ ಮೂಖಂಡರು ಪ್ರತಿಭಟನೆ ಮಾಡಲು ಮುಂದಾಗುತ್ತೆವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸೇತುವೆ ಕುಸಿಯುವ ಸ್ಥಿತಿ ಯಲ್ಲಿ ಗ್ರಾಮಸ್ಥರ ಆಂತಕ.ರಾಜೇನಹಳ್ಳಿ ಸೇತುವ ಈಗಾಗಲೇ ಅರ್ಧದಷ್ಟು ಸಂಪೂರ್ಣ ಶಿಥಲವಸ್ಥೆ ತಲುಪಿದ್ದು ಇನ್ನೂ ಳಿದ ಸೇತುವೆ ಕುಸಿಯುವ ಹಂತ ತಲುಪಿದ್ದು ಯಾವುದೇ ಸಮಯದಲ್ಲಿ ಸಂಪೂರ್ಣ ವಾಗಿ ಜಾಲವೃತವಾಗಲಿದ್ದು ಅಪಾಯ ಸಂಭವಿಸಿದರೆ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಲಿದ್ದು ಜೋತೆಗೆ ರಾಜೇನಹಳ್ಳಿ ಮಾರ್ಗವಾಗಿ ಸುಮಾರು 40ಹಳ್ಳಿಗಳ ಸಂಪರ್ಕ ಸಂಪೂರ್ಣ ಸ್ಥಗೀತ ವಾಗುತ್ತದೆ. ಅಪಾಯ ಎದುರಾಗುವ ಮೊದಲೇ ಲೋಕೋಪಯೋಗಿ ಇಲಾಖೆ ಕಾಮಗಾರಿ ಪ್ರಾರಂಭ ಮಾಡಿ ಮುಕ್ತಾಯ ಮಾಡುವಲ್ಲಿ ಮುಂದಾಗಬೇಕು ಎಂದು ಆಗ್ರಹಿಸಿದರು.