ರಾಶಿ ಭವಿಷ್ಯ: ದಿನಾಂಕ 15/10/2021

ಮೇಷ : ಇಂದು ವ್ಯಾಪಾರಸ್ಥರು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಪ್ರೀತಿಪಾತ್ರರ ಪ್ರೀತಿ ಮತ್ತು ಬೆಂಬಲದೊಂದಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮ ದಿನವಾಗಲಿದೆ.

ವೃಷಭ : ಪ್ರೇಮಿಗಳಲ್ಲಿ ಲವಲವಿಕೆ ತುಂಬಿರುತ್ತದೆ. ಕುಟುಂಬದವರ ಬಗ್ಗೆ ಕಾಳಜಿ ವಹಿಸಿ. ವ್ಯಾಪಾರದಲ್ಲಿ ಶುಭಫಲಗಳು ಕಾಣಬಹುದು. ನಿಮ್ಮ ಕೆಲಸವನ್ನು ಕಂಡು ಮೇಲಾಧಿಕಾರಿಗಳು ಪ್ರಶಂಸೆ ನೀಡಲಿದ್ದಾರೆ. ವೃತ್ತಿ ರಂಗದಲ್ಲಿ ಅಭಿವೃದ್ಧಿ ಇದೆ.

ಮಿಥುನ : ನೀವು ಮುಟ್ಟಿದ್ದೆಲ್ಲವೂ ಚಿನ್ನವಾಗುವಂತಹ ದಿನಗಳು ಸನ್ನಿಹಿತವಾಗಲಿದೆ. ಹೀಗಾಗಿ ಹೊಸ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಮುಂದಾಗಿ. ಕುಟುಂಬದಲ್ಲಿ ಸಂಭ್ರಮವಿರಲಿದೆ. ಮಂಗಳ ಕಾರ್ಯಗಳು ಯಾವುದೇ ವಿಘ್ನಗಳಿಲ್ಲದೇ ನೆರವೇರಲಿದೆ.

ಕಟಕ : ಹೊಸ ಆಸ್ತಿ ಖರೀದಿ ಮಾಡುವವರಿಗೆ ಇದು ಶುಭ ದಿನವಾಗಿದೆ. ಉದ್ಯಮವನ್ನು ಮುಂದುವರಿಸುವ ಬಗ್ಗೆ ಹಿರಿಯರೊಂದಿಗೆ ಚರ್ಚೆ ಮಾಡಲಿದ್ದೀರಿ. ವೃತ್ತಿ ಜೀವನದಲ್ಲಿ ಯಶಸ್ಸಿನ ಘಟ್ಟವನ್ನು ಏರುವಿರಿ. ತಂದೆಯ ಆರೋಗ್ಯದಲ್ಲಿ ಏರುಪೇರು ಉಂಟಾದೀತು.

ಸಿಂಹ : ಆಸ್ತಿ ವಿಚಾರಕ್ಕಾಗಿ ದಾಯಾದಿಗಳಿಂದ ಕಿರಿಕಿರಿ, ಉದ್ಯೋಗದಲ್ಲಿ ತೊಂದರೆ, ಮಕ್ಕಳ ಸ್ವಯಂಕೃತ ಅಪರಾಧದಿಂದ ತೊಂದರೆ, ಪೊಲೀಸ್ ಸ್ಟೇಷನ್ ಕೋರ್ಟು ಅಲೆದಾಟ, ಮೋಜು ಮಸ್ತಿಯಿಂದ ಧನಹಾನಿ, ಸ್ಥಿರಾಸ್ತಿ ಕಳೆದುಕೊಳ್ಳುವ ಭೀತಿ, ಅತ್ತೆ ಮನೆ ಕಡೆಯಿಂದ ಆಸ್ತಿ ಭಾಗ್ಯ, ಮದುವೆ ಚರ್ಚೆ ಸಂಭವ.

ಕನ್ಯಾ : ಸ್ತ್ರೀಯರಿಗೆ ಇಂದು ಧನಲಾಭವಿದೆ. ವ್ಯವಹಾರಗಳು ಲಾಭದಾಯಕವಾಗಿ ಇರಲಿದೆ. ಮಹತ್ವದ ಕೆಲಸಗಳಿಗೆ ವಿಘ್ನ ಉಂಟಾಗುವ ಸಾಧ್ಯತೆ ಇದೆ. ಎಚ್ಚರಿಕೆ ಇರಲಿ. ದೂರ ಪ್ರಯಾಣ ಮಾಡುವ ಅವಕಾಶ ಕೂಡಿ ಬರಬಹುದು. ವಿದ್ಯಾರ್ಥಿಗಳು ತಮ್ಮ ಪ್ರಯತ್ನವನ್ನು ಮುಂದುವರಿಸಿ.

ತುಲಾ : ಈ ದಿನ ನೆಮ್ಮದಿ ಜೀವನ ಪಡೆಯುತ್ತೀರಿ. ಈ ದಿನ ಮನೆ ಜನರ ಆರೋಗ್ಯದ ಕಾಳಜಿ ಸಹ ಮಾಡುವುದು ಸೂಕ್ತ. ಈ ದಿನ ವ್ಯಾಪಾರ ಮತ್ತು ವ್ಯವಹಾರದಲ್ಲಿ ಜಾಗ್ರತೆ ಇರುವುದು ಒಳ್ಳೆಯದು. ಈ ದಿನ ಹೊಸ ವ್ಯಕ್ತಿ ಭೇಟಿ ಮಾಡುವಿರಿ.

ವೃಶ್ಚಿಕ : ಆರೋಗ್ಯದ ದೃಷ್ಟಿಕೋನದಿಂದ ಒಳ್ಳೆಯ ಆಹಾರ ಹಾಗೂ ನಿಯಮಿತ ವ್ಯಾಯಾಮವನ್ನು ಮಾಡಿ. ಆರ್ಥಿಕ ವಿಷಯವಾಗಿ ನಿಧಾನಗತಿಯ ಪ್ರಗತಿ ಕಂಡು ಬರುವುದು. ಕೆಲವು ಹೂಡಿಕೆಗಳು ನಿಮ್ಮ ವ್ಯವಸ್ಥೆಗೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕುಟುಂಬಸ್ಥರ ನೆರವಿನಿಂದ ಸಮಸ್ಯೆಗಳನ್ನು ಪರಿಹಾರ ಮಾಡಲು ಮುಂದಾಗಿ.

ಧನು : ಕೆಲವು ಸಕಾರಾತ್ಮಕ ಬದಲಾವಣೆಗಳು ಸಾಧ್ಯ. ನೀವು ಕಚೇರಿಯಲ್ಲಿ ಸಾಕಷ್ಟು ಗೌರವವನ್ನು ಪಡೆಯಬಹುದು, ಜೊತೆಗೆ ನಿಮ್ಮ ಆದಾಯವೂ ಹೆಚ್ಚಾಗುವ ಸಾಧ್ಯತೆಯಿದೆ. ಇಂದು ಹೆಚ್ಚು ಜಾಗರೂಕರಾಗಿರಲು ಸೂಚಿಸಲಾಗಿದೆ. ಹಣವು ಉತ್ತಮ ಸ್ಥಿತಿಯಲ್ಲಿರುತ್ತದೆ.

ಮಕರ : ಅತಿಯಾದ ಆತ್ಮವಿಶ್ವಾಸ, ಆಲಸ್ಯದಿಂದ ಬಹುವಿಧವಾದ ಕಷ್ಟನಷ್ಟಗಳ ಅನುಭವವಾಗುವುದು. ಸಹನೆಯಿಂದ ವ್ಯವಹರಿಸಿರಿ. ಗುರುಬಲ ವೃದ್ಧಿಸುವುದು. ಮದುವೆಯ ಸಂಭ್ರಮದ ವಾತಾವರಣ ಕಂಡುಬರುವುದು. ಹಿರಿಯರ ಮಾತಿನಂತೆ ನಡೆಯುವುದು ಉತ್ತಮ.

ಕುಂಭ : ಮಕ್ಕಳು ಓದಿನ ಕಡೆಗೆ ಗಮನ ನೀಡದೇ ಇರುವುದೇ ನಿಮಗೆ ದೊಡ್ಡ ಚಿಂತೆಯಾಗಿದೆ. ಮಕ್ಕಳ ಓದುವ ಕೋಣೆಯಲ್ಲಿ ವಾಸ್ತು ದೋಷವನ್ನು ಸರಿಪಡಿಸಿ. ಮಿತ್ರರ ಸಲಹೆ ನಿಮ್ಮ ಕಷ್ಟಗಳಿಗೆ ನೆರವಾಗಲಿದೆ. ಸಂಗಾತಿಯ ಆರೋಗ್ಯ ಹದಗೆಡುವುದರಿಂದ ನೀವು ಆತಂಕಕ್ಕೊಳಗಾಗುವಿರಿ.

ಮೀನ : ಮನಸ್ತಾಪ ಆಗಿ ದೂರ ಹೋದ ದಾಂಪತ್ಯ ಮತ್ತೆ ಹತ್ತಿರ ಆಗಲಿದ್ದಾರೆ, ವಿದೇಶ ಪ್ರಯಾಣ ಯೋಗ ಯಶಸ್ಸು, ಪ್ರೇಮಿಗಳಿಬ್ಬರ ಕುಟುಂಬದಲ್ಲಿ ಶಾಂತಿ ಸೌಹಾರ್ದ ಹೆಚ್ಚಾಗುತ್ತದೆ, ವಿವಾಹ ಯೋಗ ಕೂಡಿ ಬರಲಿದೆ, ಶತ್ರುಗಳ ಉಪಟಳ ಕಡಿಮೆಯಾಗಲಿದೆ, ಆಕಸ್ಮಿಕ ಧನಾಗಮನ.

Leave a Reply

Your email address will not be published. Required fields are marked *

error: Content is protected !!