ಬೆಂಗಳೂರು : ನಮ್ಮ ಸುತ್ತಮುತ್ತ ಇರುವ ವ್ಯಕ್ತಿಗಳಿಗೆ ಹಠಾತ್ತಾಗಿ ಹೃದಯಾಘಾತ, ಅಫಫಾತ ಅಥವಾ ಇನ್ನು ಯಾವುದಾದರೂ ಅವಘಡಗಳಾಗಿ ಆಘಾತಕ್ಕೀಡಾದಾಗ ಏನು ಮಾಡುವುದು ಎನ್ನುವುದು ತೋಚುವುದೇ ಇಲ್ಲ. ಪ್ರಾಥಮಿಕ ಚಿಕಿತ್ಸೆಯಿಂದ ದೊಡ್ಡ ತೊಂದರೆ ಉಂಟಾಗದಂತೆ ತಡೆಯುವ ನಿಟ್ಟಿನಲ್ಲಿ ಹಲವಾರು ಜನರಿಗೆ ಸರಿಯಾದ ತಿಳುವಳಿಕೆಯೇ ಇರುವುದಿಲ್ಲ. ವೈದ್ಯಕೀಯ ಚಿಕಿತ್ಸೆಗೆ ಅವರನ್ನು ಕೊಂಡೊಯ್ಯುವ ವರೆಗಿನ ಅಮೂಲ್ಯ ಸಮಯ ಉಳಿಸುವ ನಿಟ್ಟಿನಲ್ಲಿ ಸಾಮಾನ್ಯವಾದ ತುರ್ತು ಜೀವರಕ್ಷಕ ಚಿಕಿತ್ಸೆಗಳ ತರಬೇತಿ ಪಡೆದುಕೊಳ್ಳುವುದು ಅತ್ಯವಶ್ಯ.
ತುರ್ತು ಸಂಧರ್ಭಗಳಲ್ಲಿ ಜೀವಗಳನ್ನು ಉಳಿಸುವ ಮಹತ್ವವನ್ನು ತಿಳಿಸುವ ಹಾಗೂ ಆಫಾತಗಳನ್ನು ಹೇಗೆ ನಿಭಾಯಿಸಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದ ಯುನೈಟೆಡ್ ಆಸ್ಪತ್ರೆ ವಿಶ್ವ ಟ್ರಾಮಾ ದಿನದ ಅಂಗವಾಗಿ ಅಕ್ಟೋಬರ್ 18 ಮತ್ತು 19 ರಂದು ಜೀವರಕ್ಷಕ ಪ್ರಾಥಮಿಕ ಚಿಕಿತ್ಸೆಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.
*ಬೇಸಿಕ್ ಲೈಫ್ ಸಪೋರ್ಟ್ ತರಬೇತಿ*: ಈ ತರಬೇತಿಯಲ್ಲಿ ಫಸ್ಟ್ ರೆಸ್ಪಾಂಡರ್ ಸಿಪಿಆರ್, ವಯಸ್ಕರಿಗೆ ಸಿಪಿಆರ್, ಮಕ್ಕಳು ಹಾಗೂ ಶಿಶುಗಳಿಗೆ ಸಿಪಿಆರ್, ಆಟೋಮೇಟೆಡ್ ಎಕ್ಟ್ರನಲ್ ಡೀಫ್ರಿಬ್ಲಿಏಟರ್ (ಏಇಡಿ) ಬಳಕೆ ಹಾಗೂ ಹೆಐಮಕ್ಲಿಚ್ ಮನ್ಯೂಯರ್ ಗಳ ಬಗ್ಗೆ ತರಬೇತಿಯನ್ನು ನೀಡಲಾಗುವುದು.
*ಫಸ್ಟ್ ಏಡ್ ಟ್ರಾಮಾ ಟ್ರೈನಿಂಗ್*: ಈ ತರಬೇತಿಯಲ್ಲಿ ಅಪಘಾತಗಳು ಮತ್ತು ಬಿದ್ದಾಗ, ಬೆಂಕಿಯ ಅವಘಢಗಳ ಸಂಧರ್ಭದಲ್ಲಿ, ಪ್ರಾಣಿಗಳು ಕಚ್ಚಿದ ಸಂಧರ್ಭದಲ್ಲಿ, ಹೃದಯಾಘಾತ ಮತ್ತು ಸ್ಟ್ರೋಕ್ ಗಳಾದಾಗ ನೀಡಬೇಕಾದಂತ ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿಯನ್ನು ನೀಡಲಾಗುವುದು.
ಈ ರೀತಿಯ ತರಬೇತಿಯನ್ನು ನೀಡುವ ನಿಟ್ಟಿನಲ್ಲಿ ಅಮೇರಿಕನ್ ಹಾರ್ಟ್ ಅಸೋಸಿಯೇಷನ್ – ಅಡ್ವಾನ್ಸ್ಡ್ ಕಾರ್ಡಿಯಾಕ್ ಲೈಪ್ ಸಪೋರ್ಟ್ ನಿಂದ ತರಬೇತಿಯನ್ನು ಪಡೆದುಕೊಂಡಿರುವ ಡಾ. ಲೋರಿಯಾ ರಹಮಾನ್ ಅವರು ಈ ತರಬೇತಿಯನ್ನು ನಡೆಸಿಕೊಡಲಿದ್ದಾರೆ.
ತುರ್ತು ಸಂಧರ್ಭಗಳಲ್ಲಿ ರೋಗಿಗಳಿಗೆ ನೀಡುವ ಪ್ರಾಥಮಿಕ ಚಿಕಿತ್ಸೆ ಅವರ ಜೀವವನ್ನು ಉಳಿಸುವ ನಿಟ್ಟಿನಲ್ಲಿ ಬಹಳ ಸಹಕಾರಿ. ಅದರಲ್ಲೂ ವೈದ್ಯಕೀಯ ಸೌಲಭ್ಯಕ್ಕೆ ಅವರನ್ನು ಸಾಗಿಸುವ ಮುನ್ನ ಅಮೂಲ್ಯ ಸಮಯದಲ್ಲಿ ನೀಡುವ ಚಿಕಿತ್ಸೆ ಬಹಳಷ್ಟು ಪರಿಣಾಮಕಾರಿಯಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು ಹಾಗೂ ಅವರಿಗೆ ಜೀವರಕ್ಷಕ ಪ್ರಾಥಮಿಕ ಚಿತ್ಸೆಯ ಬಗ್ಗೆ ಸುಲಭವಾಗಿ ತರಬೇತಿಯನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ಈ ತರಬೇತಿಯನ್ನು ಪಡೆದುಕೊಂಡವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು ಎಂದು ಯುನೈಟೆಡ್ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ವಿಕ್ರಮ್ ಸಿದ್ದಾರೆಡ್ಡಿ ತಿಳಿಸಿದರು.
*ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನೊಂದಣಿಗಾಗಿ ವಾಟ್ಸ್ಆಪ್ +91 70223 16664 ಅಥವಾ ದೂರವಾಣಿ ಸಂಖ್ಯೆ 08045666666 / 080 69333333 ಗೆ ಸಂಪರ್ಕಿಸಬಹುದಾಗಿದೆ*.