ವಜ್ರಖಚಿತ ಕರ್ನಾಟಕ ದಿವ್ಯ ರತ್ನ ಸಿಂಹಾಸನ

ಪ್ರಸ್ತುತ ಮೈಸೂರು ಅರಮನೆಯಲ್ಲಿರುವ ಸಿಂಹಾಸನವು ಭಾರತ ದೇಶದ ಧರ್ಮ ಸಂಸ್ಥಾಪನೆಯ ಸಿಂಹಾಸನ ಎಂಬುದು ಹಲವರಿಗೆ ತಿಳಿದಿಲ್ಲ .ಈ ಸಿಂಹಾಸನವನ್ನು ದ್ವಾಪರಯುಗದಲ್ಲಿ ಶ್ರೀಕೃಷ್ಣನು ಪಾಂಡವರಿಗೆ ಬಳುವಳಿಯಾಗಿ ನೀಡಿದ್ದರು. ಈ ಸಿಂಹಾಸನದ ಮೇಲೆ ಪಾಂಡವಾಗ್ರಜ ಧರ್ಮರಾಯನು ಸುಭಿಕ್ಷವಾಗಿ ರಾಜ್ಯಭಾರ ಮಾಡಿದ್ದನು. ಪಾಂಡವರ ನಂತರ ಈ ಸಿಂಹಾಸನವು ಅಪ್ರತಿಮವೀರ , ಶೌರ್ಯ ಪರಾಕ್ರಮ ಗಳಿಗೆ ಹೆಸರುವಾಸಿಯಾಗಿದ್ದ ವಿಕ್ರಮಾದಿತ್ಯರು ಈ ಸಿಂಹಾಸನದಲ್ಲಿ ಕುಳಿತು ರಾಜ್ಯಭಾರ ಮಾಡಿದ್ದರು. ಭೋಜರಾಜನು ಸಹ ಈ ರತ್ನ ಸಿಂಹಾಸನದ ಮೇಲೆ ಕುಳಿತು ಸುಭಿಕ್ಷವಾಗಿ ರಾಜ್ಯಭಾರ ಮಾಡಿದ್ದರು. ಇಷ್ಟೆಲ್ಲಾ ಐತಿಹ್ಯಗಳನ್ನೊಳಗೊಂಡ ಸಿಂಹಾಸನವನ್ನು ಕೊನೆಗೆ ಆಂಧ್ರಪ್ರದೇಶದ ಪೆನುಗೊಂಡ ಬಳಿ ಭೂಮಿಯಲ್ಲಿ ಹೂತು ಇಟ್ಟಿದ್ದರು. ವಿದ್ಯಾರಣ್ಯರ ದಿವ್ಯದೃಷ್ಟಿ ಗೆ ಗೋಚರವಾದ ಈ ಸಿಂಹಾಸನವನ್ನು ಹಿಂದೂ ರಾಜ್ಯ ಪರಿಪಾಲಕರಾದ ಹರಿಹರ ,ಬುಕ್ಕರಿಗೆ ವಿದ್ಯಾರಣ್ಯರು ಈ ಬಂಗಾರದ ಸಿಂಹಾಸನಾರೋಹಣ ಮಾಡಿಸಿ, ಸತ್ಯಧರ್ಮ ಸಂಸ್ಕೃತಿಯನ್ನು ಉಳಿಸಲು ಸಿಂಹಾಸನಕ್ಕೆ ತಮ್ಮ ತಪೋಶಕ್ತಿಯಿಂದ ವಿಶೇಷ ತೇಜಸ್ಸನ್ನು ನೀಡಿದರು.

ಈ ಸಿಂಹಾಸನವನ್ನೇರಿ ವಿಜಯನಗರದ ಅರಸರು ಭಾರತದ ಸುವರ್ಣಯುಗಕ್ಕೆ ನಾಂದಿ ಹಾಡಿದರು ಅಲ್ಲದೆ ವೈಭವದಿಂದ ರಾಜ್ಯಭಾರ ಮಾಡಿದ್ದರು .ವಿಜಯನಗರ ಸಾಮ್ರಾಜ್ಯ ಪತನಾನಂತರ ಈ ಸಿಂಹಾಸನವು ಶ್ರೀರಂಗಪಟ್ಟಣದ ಅವರ ರಾಯಭಾರಿಯಾಗಿದ್ದ ತಿರುಮಲರಾಯನ ಬಳಿ ಇದ್ದಿತು ಮೈಸೂರಿನ ಅರಸರಾದ ರಾಜ ಒಡೆಯರು ತಿರುಮಲರಾಯನನ್ನು ಸೋಲಿಸಿದ ನಂತರ ಈ ಸಿಂಹಾಸನವನ್ನು ತಿರುಮಲರಾಯನು ರಾಜ ಒಡೆಯರಿಗೆ ನೀಡುತ್ತಾನೆ 1610 ರಿಂದ ರಾಜ ಒಡೆಯರು ಮಹಾರಾಜರಾಗಿ ಕರ್ನಾಟಕ ರತ್ನ ದಿವ್ಯ ಸಿಂಹಾಸನವನ್ನು ಅಲಂಕರಿಸಿ ಸುಭಿಕ್ಷ ವಾಗಿ ರಾಜ್ಯಭಾರ ಮಾಡಿ ತಮ್ಮ ಸಾಮ್ರಾಜ್ಯದಲ್ಲಿ ನವರಾತ್ರಿ ಆಚರಣೆಯನ್ನು, ವಿಜಯದಶಮಿ ಆಚರಣೆಯನ್ನು ಜಾರಿಗೆ ತರುತ್ತಾರೆ. ಇಂದಿಗೂ ಸಹ ಈ ಬಂಗಾರದ ಸಿಂಹಾಸನ ಮೈಸೂರು ರಾಜವಂಶಸ್ಥರ ಸುಪರ್ದಿಯಲ್ಲಿದ್ದು, ಪಟ್ಟಕ್ಕೇರುವ ಮೈಸೂರು ಒಡೆಯರು, ಕರ್ನಾಟಕ ರತ್ನ ಸಿಂಹಾಸನಕ್ಕೆ ದಾಸ ರಾಗಿರುತ್ತಾರೆ ಹಾಗೂ ನಮ್ಮ ಕರ್ನಾಟಕದ ಚಕ್ರವರ್ತಿಗಳಾಗಿ ನಾಡನ್ನು ಸುಬೀಕ್ಷವಾಗಿಡಲು ಈ ಸಿಂಹಾಸನವೇ ಪ್ರಮುಖ ಕಾರಣ. ಪ್ರಸ್ತುತ ಮೈಸೂರಿನ ಮಹಾರಾಜರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಈ ಸಿಂಹಾಸನವನ್ನೇರಿ ಖಾಸ ದರ್ಬಾರ್ ನಡೆಸಿ ನಾಡಿನ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುತ್ತಾರೆ .ನವರಾತ್ರಿ ಉತ್ಸವ ಮುಗಿದ ನಂತರ ಸಿಂಹಾಸನವನ್ನು ಕಳಚಿ ಭದ್ರವಾಗಿ ಇಡಲಾಗುತ್ತದೆ. ಇಂದಿಗೂ ಸಹ ಕರ್ನಾಟಕದ ಜನತೆ
ಈ ಸಿಂಹಾಸನ ಹಾಗೂ ಸಿಂಹಾಸನವನ್ನೇರುವ ಮಹಾರಾಜರೇ ಪ್ರತ್ಯಕ್ಷ ದೇವರೆಂದು ಪೂಜಿಸುತ್ತಾರೆ..

Leave a Reply

Your email address will not be published. Required fields are marked *

error: Content is protected !!