ರಾಶಿ ಭವಿಷ್ಯ: ದಿನಾಂಕ 08/10/2021 ಶುಕ್ರವಾರ

ಮೇಷ: ನಿಮಗೆ ಉದ್ಯೋಗ ತೊಂದರೆಗಳಿಂದ ಆರ್ಥಿಕ ಸಂಕಷ್ಟಗಳು ಎದುರಾಗುವವು. ನವ ದಂಪತಿಗಳಿಗೆ ಶುಭ. ಸಮಾಧಾನ ಚಿತ್ತದಿಂದ ಕಾರ್ಯ ನಿರ್ವಹಿಸಿರಿ. ಬಹಳ ಹಿತೈಷಿಗಳಂತೆ ವರ್ತಿಸುವವರಿಂದ ದೂರವಿರಿ. ಮಾತಿನಂತೆಯೇ ಎಲ್ಲವೂ ನಡೆಯುವದಿಲ್ಲ.

ವೃಷಭ: ಮನೆಯಲ್ಲಿ ಮಂಗಳಕಾರ್ಯದ ಸಡಗರ. ಇಂದು ನಿಮಗೆ ಅನಿರೀಕ್ಷಿತ ಮೂಲದಿಂದ ಧನಾಗಮನವಾಗಲಿದೆ. ಮನೆ ನಿರ್ಮಾಣ ಮಾಡುವತ್ತ ಮನಸ್ಸು ಮಾಡಲಿದ್ದೀರಿ. ಸಂಗಾತಿಯು ನಿಮ್ಮೆಲ್ಲ ಪ್ರಯತ್ನಗಳಿಗೆ ಹೆಗಲಾಗಲಿದ್ದಾರೆ. ಶುಭ ಕಾರ್ಯಗಳಿಗೆ ಅನುಕೂಲ ವಾತಾವರಣ ಇರಲಿದೆ.

ಮಿಥುನ: ಶ್ರಮಕ್ಕೆ ತಕ್ಕ ಫಲ, ಕುಟುಂಬಸ್ಥರಿಂದ ಸಹಕಾರ, ನೂತನ ಉದ್ಯೋಗ ಪ್ರಾಪ್ತಿ, ಅಧಿಕವಾದ ಖರ್ಚು, ಚಂಚಲ ಮನಸ್ಸು, ಕೃಷಿಯಲ್ಲಿ ಲಾಭ, ನಂಬಿದ ಜನರಿಂದ ಅಶಾಂತಿ,
ಆತ್ಮೀಯರೊಂದಿಗೆ ಮನಸ್ತಾಪ ವಾಗುವ ಯೋಗವಿದೆ. ಸ್ವಂತ ಉದ್ಯಮಿಗಳು ಹಾನಿ ತಪ್ಪಿಸುವ ಉಪಾಯ ಮಾಡಿ.

ಕಟಕ: ಮಾತಾ ಪಿತೃ ಸೇವಾ ಮಾಡುವಿರಿ, ಯತ್ನ ಕಾರ್ಯಗಳಲ್ಲಿ ವಿಳಂಬ,ರೋಗ ಬಾಧೆ, ವ್ಯಾಪಾರ-ವ್ಯವಹಾರಗಳಲ್ಲಿ ಅಪರಿಚಿತರಿಂದ ತೊಂದರೆ ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ಹಾನಿ ತಪ್ಪಿಸಲು ಪ್ರಯತ್ನಿಸುವಿರಿ.

ಸಿಂಹ: ವಿರೋಧಿಗಳಿಂದ ತೊಂದರೆ, ಪತ್ನಿಗೆ ಅನಾರೋಗ್ಯ, ಸಾಲ ಮಾಡುವ ಸಾಧ್ಯತೆ, ದುಷ್ಟ ಜನರಿಂದ ದೂರ, ಸರಕಾರಿ ಕಾರ್ಯಗಳಲ್ಲಿ ಮುನ್ನಡೆ, ಧನಲಾಭ, ಲೇವಾದೇವಿಗಾರರಿಗೆ ಹಣಕಾಸಿನಲ್ಲಿ ತೊಂದರೆ,
ಮುಲಾಜಿಲ್ಲದ ಧೋರಣೆಯಿಂದ ವ್ಯವಹಾರದಲ್ಲಿ ನಷ್ಟ.

ಕನ್ಯಾ: ಅಧಿಕಾರಿಗಳೊಡನೆ ಕಲಹ, ಮಿತ್ರರಲ್ಲಿ ಮನಸ್ತಾಪ, ವಿಪರೀತ ಖರ್ಚು, ಹಣಕಾಸು ತೊಂದರೆ,ಪರರಿಗೆ ಸಹಾಯ ಮಾಡುವಿರಿ,ಉದ್ಯೋಗದ ಸ್ಥಳ ಬದಲಾವಣೆ, ಶತ್ರುಗಳ ಬಾದೆ ಎದುರಿಸುವಿರಿ, ಅಭದ್ರತೆ ಕಾಡುವ ಸಂಭವವಿದೆ. ಸಹೋದರರಲ್ಲಿ ಕಲಹ.

ತುಲಾ: ತೀರ್ಥಯಾತ್ರೆಗೆ ನಿರ್ಧಾರ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಸರ್ಕಾರಿ ನೌಕರಿ ಸಂದರ್ಶನ ಮಾಡುವವರಿಗೆ ಸಿಹಿಸುದ್ದಿ ಕೇಳಲಿದ್ದೀರಿ. ಹೆಣ್ಣುಮಕ್ಕಳಿಗೆ ಪರಪುರುಷ ನಿಂದ ಮನಸ್ತಾಪ. ಮದುವೆ ವಿಳಂಬ ಕಾಣಲಿದೆ. ಹಣಕಾಸಿನಲ್ಲಿ ಅಡಚಣೆ ಯಾಗಲಿದೆ. ನಿಮ್ಮ ದುಡ್ಡು ನಿಮ್ಮ ಕೈ ಸೇರಲು ಹರಸಾಹಸ ಪಡುವಿರಿ.

ವೃಶ್ಚಿಕ: ಇಂದು ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ತರಲು ಯೋಚಿಸಬಹುದು. ನಿಮ್ಮ ಜೀವನ ಶೈಲಿಯಲ್ಲಿ ದೊಡ್ಡ ಬದಲಾವಣೆ ಮಾಡಬಹುದು. ನಿಮ್ಮ ಹಳೆಯ ಅಂಟಿಕೊಂಡಿರುವ ಕೆಲಸಗಳನ್ನು ಮುಗಿಸಲು ಇಂದು ದಿನವನ್ನು ಕಳೆಯಬಹುದು.

ಧನುಸ್ಸು: ಮನಸ್ಸಿನಂತೆಯೇ ಎಲ್ಲ ಕೆಲಸಗಳೂ ಪೂರ್ಣವಾಗುವವು. ಉದ್ಯೋಗಸ್ಥಾನದಲ್ಲಿ ಕಾರ್ಯಭಾರ ಹೆಚ್ಚುವದು. ಆಸ್ತಿ ಸಂಬಂಧಿತ ವಿಷಯದಲ್ಲಿ ವಂಚನೆಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷದ ಕಾರ್ಯಗಳು ನೆರವೇರುವವು.

ಮಕರ: ಈ ದಿನ ಸಮತೋಲಿತ ಜೀವನವಿರುವದು. ಆಸಕ್ತಿದಾಯಕ ಧೋರಣೆಯಿಂದ ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಇರುವದು. ಗಂಭೀರವಾದ ಪ್ರಮಾದವನ್ನು ಸಮರ್ಥಿಸುವುದರಿಂದ ಅಪವಾದಕ್ಕೆ ಗುರಿಯಾಗುವ ಸಂಭವವಿದೆ. ಹಿರಿಯರ ಸಲಹೆ ಪಡೆಯಿರಿ.

ಕುಂಭ: ಸ್ಥಿರಾಸ್ಥಿಯಿಂದ ಲಾಭವಿದೆ. ಕುಟುಂಬದ ಜೊತೆ ಉತ್ತಮ ಸಮಯ ಕಳೆಯುವಿರಿ. ಪುತ್ರಿಗೆ ವೈವಾಹಿಕ ಸಂಬಂಧ ಕೂಡಿ ಬರಲಿದೆ. ಅಂದುಕೊಂಡ ಕಾರ್ಯಗಳು ನೆರವೇರಲಿದೆ. ಮಹಿಳಾ ಮಿತ್ರರು ಸಹಾಯ ಮಾಡಲಿದ್ದಾರೆ. ಮನೆಯಲ್ಲಿ ಸಂತೋಷದ ವಾತಾವರಣ ಇರುವದು.

ಮೀನ: ಮಾನಸಿಕ ವೇದನೆ, ವ್ಯಾಪಾರಿಗಳಿಗೆ ಧನ ಲಾಭ, ಮಿತ್ರರಿಂದ ಧನಸಹಾಯ, ಮನಸ್ಸಿನಲ್ಲಿ ತಳಮಳ, ಸಂತೃಪ್ತಿ ಭೋಜನ, ಅಪೇಕ್ಷಿಸಿದ ಕಾರ್ಯಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳುವವು ಆಸ್ತಿ ವಿವಾದ ಸೃಜನರ ಅತೃಪ್ತಿ ಮುಂತಾದ ಕಲಹಗಳು ಪರಿಹಾರವಾಗಿ ಸುಖ.

Leave a Reply

Your email address will not be published. Required fields are marked *

error: Content is protected !!