ರಾಶಿ ಭವಿಷ್ಯ ದಿನಾಂಕ 18/10/2021 ಸೋಮವಾರ

ಮೇಷ: ಕುಟುಂಬದ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬೀಳಲಿದೆ, ಕಚೇರಿಯಲ್ಲಿ ವ್ಯವಹರಿಸುವಾಗ ಜಾಗ್ರತೆವಹಿಸಿ, ಸಹೋದ್ಯೋಗಿಗಳ ಜೊತೆ ಹಾಗೂ ಗ್ರಾಹಕರೊಡನೆ ವಾಗ್ವಾದ ಬೇಡ, ಉದ್ಯೋಗ ಬದಲಾವಣೆ ಮತ್ತು ಮನೆ ಬದಲಾವಣೆ ಸದ್ಯಕ್ಕೆ ಬೇಡ, ವ್ಯಾಪಾರ ಮತ್ತು ವ್ಯವಹಾರದಲ್ಲಿ ಲಾಭ ಇದೆ.

ವೃಷಭ: ಕಂಕಣ ಭಾಗ್ಯ ಕೂಡದೇ ತಲೆಕೆಡಿಸಿಕೊಂಡಿದ್ದ ನಿಮಗೆ ಇಂದು ವೈವಾಹಿಕ ಸಂಬಂಧವೊಂದು ಕೂಡಿಬರಲಿದೆ. ಸಂಗಾತಿಯ ಮೇಲೆ ಅತಿಯಾದ ಸಂದೇಹ ಒಳ್ಳೆಯದಲ್ಲ. ಬದಲಾವಣೆ ಜಗದ ನಿಯಮ ಎಂಬ ಮಾತು ನೆನಪಿನಲ್ಲಿರಲಿ. ಯಾವುದಕ್ಕೂ ಅತಿಯಾಗಿ ಚಿಂತಿಸಬೇಡಿ.

ಮಿಥುನ : ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ವೃತ್ತಿ ಜೀವನದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿ ಬರಲಿದೆ. ಅಂದುಕೊಂಡ ಕಾರ್ಯಗಳು ನೆರವೇರಲಿದೆ. ನಡೆಸುವ ವ್ಯವಹಾರಗಳಲ್ಲಿ ಮಹತ್ವಾಕಾಂಕ್ಷೆ ಇರಲಿ. ಎಲ್ಲಾ ವಿಚಾರದಲ್ಲೂ ಹಠ ಸಾಧನೆ ಬೇಡ.

ಕಟಕ: ಈ ದಿನ ನಿಮಗೆ ಹರ್ಷದಾಯಕವಾಗಿರುತ್ತದೆ. ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಹಣದ ಖರ್ಚು ಹೆಚ್ಚಾಗಿರಲಿದೆ. ಆರೋಗ್ಯ ಸಮಸ್ಯೆ ಕಾಡಲಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ವೈವಾಹಿಕ ಜೀವನ ಉತ್ತಮವಾಗಿರಲಿದೆ.

ಸಿಂಹ: ಇಂದು ಎಷ್ಟೇ ಪ್ರಯತ್ನಪಟ್ಟರೂ , ಕೈಗೆ ಬರುವ ತುತ್ತು ಬಾಯಿಗೆ ಬಾರದಂತೆ ಆಗುತ್ತದೆ. ನವದಂಪತಿಗಳಿಗೆ ಸಂತಾನ ಸಮಸ್ಯೆ ಕಾಡಲಿದೆ. ಮನೆ ಕಟ್ಟುವ ವಿಚಾರ ಅರ್ಧಕ್ಕೆ ನಿಲ್ಲುವುದು. ಬಂಧು ಬಳಗದಿಂದ ಸಹಾಯ ಸಿಗಲಾರದು. ಅಳಿಯನ ನಡವಳಿಕೆ ಬಗ್ಗೆ ಚಿಂತನೆ ಮಾಡುವಿರಿ.

ಕನ್ಯಾ: ಮಕ್ಕಳ ವಿದ್ಯಾಭ್ಯಾಸ ವಿಚಾರವಾಗಿ ಸ್ವಲ್ಪ ಹಿನ್ನಡೆಯಾದೀತು, ಆತಂಕ ಬೇಡ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಈ ದಿನ ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಬಹುದು. ಆತುರದ ನಿರ್ಧಾರ ಕೈಗೊಳ್ಳಬೇಡಿ. ಹಿರಿಯರ ಸಲಹೆ ಪಡೆಯುವುದು ಉತ್ತಮ.

ತುಲಾ: ಕೆಲಸದ ಸ್ಥಳದಲ್ಲಿ ಕೆಲವು ಹೊಸ ಬದಲಾವಣೆಗಳು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ಇತರ ಜನರನ್ನು ಸಂಪರ್ಕಿಸುವುದು ನಿಮಗೆ ಪ್ರಯೋಜನಕಾರಿಯಾಗಿದೆ. ವೈವಾಹಿಕ ಚರ್ಚೆಗಳಲ್ಲಿ ಯಶಸ್ಸು ಇರುತ್ತದೆ. ತುಂಬಾ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ.

ವೃಶ್ಚಿಕ: ನಿಮ್ಮ ವ್ಯಾಪಾರ ವಿಸ್ತರಣೆಯಾಗಲಿದೆ, ಇದರಿಂದ ಲಾಭ ಸಿಗಲಿದೆ, ಸ್ನೇಹಿತರ ಸಹಾಯ ದೊರೆಯಲಿದೆ, ಮುನಿಸಿಕೊಂಡಿರುವ ಸಂಗಾತಿಯ ಭೇಟಿಯಾಗುವ ಸಂಭವ, ಹೊಸ ಒಪ್ಪಂದಕ್ಕೆ ಸಹಿ ಮಾಡುವಿರಿ, ಆಕಸ್ಮಿಕ ಆರೋಗ್ಯದಲ್ಲಿ ತೊಂದರೆ ಸಂಭವ.

ಧನುಸ್ಸು: ದೀರ್ಘ‌ ಪ್ರಯಾಣ. ಉದ್ಯೋಗ ವ್ಯವಹಾರ ದಲ್ಲಿ ಪ್ರಗತಿ. ಆದರೆ ದೇಹಾಯಾಸ ಸಂಭವ. ಸಹೋದ್ಯೋಗಿಗಳ ಸಹಕಾರ ಪರಿಶ್ರಮದಿಂದ ಕಾರ್ಯ ಸಫ‌ಲತೆ. ಗೃಹೋಪವಸ್ತುಗಳ ಸಂಗ್ರಹಕ್ಕೆ ಅಧಿಕ ಧನವ್ಯಯ ಸಂಭವ. ಅಧಿಕ ಧನಾಗಮನದಿಂದ ಮನಸ್ಸಿಗೆ ನೆಮ್ಮದಿ

ಮಕರ: ಮದುವೆ ಕಾರ್ಯ ನಿರಾಶ ಮನೋಭಾವ ಕಾಡಲಿದೆ, ನಿಮಗೆ ಶತ್ರುಗಳ ಸಂಖ್ಯೆ ಹೆಚ್ಚಾಗಿದ್ದು ಭದ್ರತೆ ಅವಶ್ಯಕತೆ ಇದೆ, ವೃತ್ತಿ ಕ್ಷೇತ್ರದಲ್ಲಿ ವೈಫಲ್ಯ ಕಂಡು ಬರುವುದು, ಸಂಬಳಕ್ಕಾಗಿ ಮೆನೇಜರ್ ಜೊತೆ ಕಿರಿಕಿರಿ ಸಂಭವ, ವೃತ್ತಿ ಕ್ಷೇತ್ರದಲ್ಲಿ ಏರುಪೇರು, ದೇಹದಲ್ಲಿ ನಿಶ್ಯಕ್ತಿ ಕಾಡಲಿದೆ.

ಕುಂಭ: ತಪ್ಪುಗಳನ್ನು ಸಮರ್ಥಿಸಿಕೊಳ್ಳುವ ನಿಮ್ಮ ಗುಣದಿಂದಾಗಿ ಕಚೇರಿಯಲ್ಲಿ ನಿಂದನೆಗೆ ಒಳಗಾಗುವಿರಿ. ಧಾರ್ಮಿಕ ಸಮಾರಂಭಗಳಲ್ಲಿ ಭಾಗಿಯಾಗಲಿದ್ದೀರಿ. ವ್ಯಾಪಾರ ವ್ಯವಹಾರ ವಿಚಾರದಲ್ಲಿ ಹಿರಿಯರಿಂದ ಸಲಹೆ ಪಡೆಯಲಿದ್ದೀರಿ.

ಮೀನ: ಇಂದು ನಿಮಗೆ ಬಹಳ ಫಲದಾಯಕವಾಗಿರುತ್ತದೆ. ಇಂದು ನೀವು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೀರಿ ಮತ್ತು ಅದರಲ್ಲಿ ಸ್ವಲ್ಪ ಹಣವನ್ನು ಖರ್ಚು ಮಾಡುತ್ತೀರಿ, ಈ ಕಾರಣದಿಂದಾಗಿ ನಿಮ್ಮ ಖ್ಯಾತಿ ಮತ್ತು ಕೀರ್ತಿ ಎಲ್ಲೆಡೆ ಹರಡುತ್ತದೆ.

Leave a Reply

Your email address will not be published. Required fields are marked *

error: Content is protected !!