ತುಮಕೂರು: ನಗರದ ವಿಂಗ್ಸ್ ಫ್ಯಾಷನ್ ಈವೆಂಟ್ಸ್ ವತಿಯಿಂದ ಅ.10 ರಂದು ಸಂಜೆ 4 ಕ್ಕೆ ಮಿಸ್, ಮಿಸ್ಟರ್, ಮಿಸಸ್, ಟೀನ್ ಮತ್ತು ಕಿಡ್ಸ್ ಫ್ಯಾಷನ್ ಶೋ-2021 ‘ಗ್ರಾಂಡ್ ಫಿನಾಲೆ’ ಸ್ಪರ್ಧೆಯನ್ನು ನಗರದ ಹೊರವಲಯದ ರಿಂಗ್ ರಸ್ತೆಯಲ್ಲಿರುವ ಶ್ರೀ ಗವಿರಂಗ ಕನ್ವೆಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಿಇಒ ಪಿ.ಕೆ. ಅರುಂಧತಿ ಲಾಲ್ ತಿಳಿಸಿದರು.
ನಗರದ ಗಣೇಶ್ ಪಾರ್ಟಿಹಾಲ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸ್ಪರ್ಧೆಗೆ ಸಂಬಂಧಿಸಿದಂತೆ ಆಡಿಷನ್ ಮುಗಿದಿದ್ದು, ಅ.10 ರಂದು ‘ಗ್ರಾಂಡ್ ಫಿನಾಲೆ’ (ಅಂತಿಮ ಸ್ಪರ್ಧೆ)ಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ತುಮಕೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯಮಟ್ಟದ ಫ್ಯಾಷನ್ ಷೋ ನಡೆಯುತ್ತಿದ್ದು, ನಗರದ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಫ್ಯಾಷನ್ ಶೋ ಹಮ್ಮಿಕೊಳ್ಳಲಾಗಿದ್ದು, ರಾಜ್ಯದಾದ್ಯಂತ ಸುಮಾರು 80ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ, ತುಮಕೂರು ಜಿಲ್ಲೆಯ 40ಕ್ಕೂ ಹೆಚ್ಚು ಸ್ಪರ್ಧಿಗಳು ಈ ಫ್ಯಾಷನ್ ಶೋ ನಲ್ಲಿ ಭಾಗವಹಿಸಲಿದ್ದಾರೆ ಎಂದರು.
ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳಿಗೆ 1 ಸಾವಿರ ರೂ., ದೊಡ್ಡವರಿಗೆ 3 ಸಾವಿರ ರೂ. ಪ್ರವೇಶ ಶುಲ್ಕ ನಿಗಧಿಪಡಿಸಿದ್ದು, ಅವರಿಗೆ ಅಗತ್ಯ ಡ್ರಸ್ ಅನ್ನು ಫ್ಯಾಷನ್ ಡಿಸೈನರ್ ಅಮೃತಶೆಟ್ಟಿ ಡಿಸೈನ್ ಮಾಡಲಿದ್ದಾರೆ ಎಂದು ತಿಳಿಸಿದರು.
ಗ್ರಾಂಡ್ ಫಿನಾಲೆಯಲ್ಲಿ ಮುಖ್ಯ ಅತಿಥಿಗಳಾಗಿ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್, ಮಾಜಿ ಶಾಸಕರಾದ ಶಿವಮೂರ್ತಿನಾಯ್ಕ್, ಸುಧಾಕರ್‌ಲಾಲ್, ಮಹಾನಗರಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ರಾಷ್ಟಿçÃಯ ಕ್ರಿಬ್ಕೋ ಸಂಸ್ಥೆ ನಿರ್ದೇಶಕ ಆರ್.ರಾಜೇಂದ್ರ, ಅಶ್ವಿನಿ ಆಸ್ಪತ್ರೆಯ ರಾಜೇಶ್, ವಿಶ್ವಾಸ್ ಜ್ಯುವೆಲ್ರ‍್ಸ್ನ ಮಾಲೀಕರು ಸೇರಿದಂತೆ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಪೊರೇಟರ್‌ಗಳು, ವಿವಿಧ ಅಂಗಡಿಗಳ ಮಾಲೀಕರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಚಲನಚಿತ್ರ ನಿರ್ದೇಶಕ ನಂದಕಿಶೋರ್, ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್, ನಟಿಯರಾದ ಅಧ್ವಿತಿ ಶೆಟ್ಟಿ, ಅಶ್ವಿತಿಶೆಟ್ಟಿ, ನಿರ್ದೇಶಕರಾದ ಎ.ಆರ್.ಸಾಯಿರಾಮ್, ಯುವಿನ್, ರಮೇಶ್ ರಾಮಯ್ಯ, ಶ್ರೀಹರಿ ಆನಂದ್, ಕತೃ ಗಿರೀಶ್, ನಟರಾದ ದುಶ್ಯಂತ್ ಶ್ರೀನಿವಾಸ್, ಶ್ರೇಯಸ್ ಕೆ.ಮಂಜು, ನಿಶ್ಚಿತ್ ಕೊರಡಿ, ವರ್ಧನ್ ತೀರ್ಥಹಳ್ಳಿ, ಅರ್ಜುನ್ ಯೋಗೇಶ್, ಅರ್ಜುನ್, ಪ್ರತೀಕ್ ಸುಬ್ರಹ್ಮಣ್ಯ, ವಿವಾನ್ ಸೇರಿದಂತೆ ಅನೇಕ ನಟರು, ನಿರ್ದೇಶಕರು, ನಿರ್ಮಾಪಕರು ಭಾಗವಹಿಸುವರು ಎಂದು ತಿಳಿಸಿದರು.
ಫಿಟ್ ಇನ್ ಜಿಮ್‌ನ ಮಾಲೀಕ ಅರ್ಜುನ್ ಪಾಳೇಗಾರ್ ಮಾತನಾಡಿ, ಈ ಸ್ಪರ್ಧೆಗೆ ಮುನ್ನಾದಿನವಾದ ಅ.9 ರಂದು ನಗರದಲ್ಲಿ ರ‍್ಯಾಲಿ ನಡೆಸಲು ಉದ್ದೇಶಿಸಿದ್ದು, ಇದರಲ್ಲಿ ಕೊರೊನಾ ವಾರಿಯ್ಸ್ ಮತ್ತು ಮಾಡೆಲ್‌ಗಳು ಭಾಗವಹಿಸಲಿದ್ದಾರೆ. ನಗರದ ಕೋಡಿ ಆಂಜನೇಯಸ್ವಾಮಿ ವೃತ್ತದಿಂದ ಡಾ. ಶ್ರೀ ಶಿವಕುಮಾರಸ್ವಾಮಿ ವೃತ್ತದವರೆಗೆ ಸಾರ್ವಜನಿಕ ಅರಿವು ಮೂಡಿಸುವ ಜಾಥಾ ನಡೆಯಲಿದ್ದು, ಇದಕ್ಕಾಗಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು ರ‍್ಯಾಲಿ ನಡೆಸಲು ಉದ್ಧೇಶಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅರ್ಜುನ್ ಪಾಳೆಗಾರ್, ಅಮೃತಾಶೆಟ್ಟಿ, ಕಿರಣ್, ವಿ.ಜೆ.ಷರತ್ ಮುಂತಾದವರು ಉಪಸ್ಥಿತರಿದ್ದರು.