ರಾಶಿ ಭವಿಷ್ಯ: ಹೇಗಿದೆ ನೋಡಿ ನಿಮ್ಮ ಇಂದಿನ ಭವಿಷ್ಯ

ಮೇಷ – ಕಾರ್ಯ ವಿಳಂಬ, ಲಾಭವಿರಲಿದೆ, ತಾಯಿಯ ಆರೋಗ್ಯದಲ್ಲಿ ತೊಡಕು, ಸ್ತ್ರೀಯರ ಮನದಲ್ಲಿ ಭಾವನೆಗಳು ವ್ಯತ್ಯಾಸವಾಗಲಿವೆ, ಕೊಂಚ ಜಾಗೃತೆಯಿಂದಿರಿ. ಬೃತರೆಯವರೊಂದಿಗೆ ವ್ಯವಹರಿಸುವಾಗ ಅಥವಾ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವಾಗ ಗಮನಹರಿಸಿ.

ವೃಷಭ – ಬಂಡವಾಳದ ಸಮಸ್ಯೆಗಳು ದೂರವಾಗಲಿದೆ. ನಿಮ್ಮ ಸಂಗಾತಿಯ ಮನಸ್ಥಿತಿಗೆ ನೀವು ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ ವಾಗಿರುವುದು ಕಂಡುಬರುತ್ತದೆ. ಆರ್ಥಿಕ ವ್ಯವಹಾರದಲ್ಲಿ ಜಾಗೃತೆಯಿರಲಿ. ಕುಟುಂಬಸ್ಥರೊಂದಿಗೆ ಮನಸ್ತಾಪ ಬರಬಹುದಾದ ಸಾಧ್ಯತೆ.

ಮಿಥುನ – ವೇತನದ ಸಮಸ್ಯೆ ಕಾಡಲಿದೆ, ವ್ಯಾಪಾರಸ್ಥರು ಅವಸರವಾಗಿ ನಿರ್ಧಾರ ತೆಗೆದುಕೊಳ್ಳಬೇಡಿ, ತರಕಾರಿ ಸೌಮ್ಯದ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡುವಾಗ ಆರ್ಥಿಕ ತಜ್ಞರ ಸಲಹೆ ಪಡೆದುಕೊಳ್ಳಿ, ಹಿರಿಯ ಅಧಿಕಾರಿಗಳು ತಾಳ್ಮೆ ಮತ್ತು ಸಹನೆಯಿಂದ ಕರ್ತವ್ಯ ನಿರ್ವಹಿಸಿ.

ಕಟಕ – ನೀವು ಅತ್ಯಂತ ನಿರಾಸಕ್ತಿ ಭಾವನೆಯನ್ನು ಹೊಂದಿರುತ್ತೀರಿ. ನಿಮ್ಮ ಚಿಂತೆಗೆ ಮೊದಲ ಕಾರಣ ನಿಮ್ಮ ಸ್ನೇಹಿತರು, ಮಕ್ಕಳು ಅಥವಾ ಎರಡೂ ಆಗಿರಬಹುದು. ನೀವು ಏನು ಮಾತನಾಡುತ್ತಿದ್ದೀರಿ ಮತ್ತು ಹೇಗೆ ಮಾತನಾಡುತ್ತಿದ್ದೀರಿ ಎಂಬುದರ ಬಗ್ಗೆ ಎಚ್ಚರಿಕೆಯಿಂದಿರಿ.

ಸಿಂಹ – ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವ ಬಲವಾದ ಸಾಧ್ಯತೆಯಿದೆ, ವಿಶೇಷವಾಗಿ ಅವರು ವಿದೇಶಕ್ಕೆ ಹೋಗಿ ಉನ್ನತ ಶಿಕ್ಷಣವನ್ನು ಪಡೆಯಲು ಬಯಸಿದರೆ ಇಂದು ಅವರಿಗೆ ಬಹಳ ಮುಖ್ಯವಾಗಿದೆ. ಹಣಕಾಸಿನ ದೃಷ್ಟಿಯಿಂದ ಇಂದು ಮಿಶ್ರ ದಿನವಾಗುವ ಸಾಧ್ಯತೆಯಿದೆ.

ಕನ್ಯಾ – ನಿಮ್ಮ ಕೆಲಸದ ಮೇಲೆ ಸಂಪೂರ್ಣವಾಗಿ ಗಮನಹರಿಸಿದರೆ ಉತ್ತಮ. ಹೋಟೆಲ್ ಅಥವಾ ರೆಸ್ಟೋರೆಂಟ್‌ಗೆ ಸಂಬಂಧಿಸಿದ ಜನರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯ ಪ್ರಬಲ ಸಾಧ್ಯತೆಯಿದೆ. ಇಂದು ನಿಮ್ಮ ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯುವ ಅವಕಾಶ ಪಡೆಯಬಹುದು.

ತುಲಾ – ಆಹಾರ ಅದರಲ್ಲೂ ಪ್ರಧಾನವಾಗಿ ನೀರಿನ ವ್ಯತ್ಯಾಸ ಕಮಡುಬರಲಿದೆ, ಎಚ್ಚರದಿಂದಿರಿ. ನಿಮ್ಮ ರಾಶಿಯಿಂದ ಪಂಚಮದಲ್ಲಿರುವ ಮಾಂದಿ, ಮನಸ್ಸಿನ ಸ್ಥಾನವದು ಹೀಗಾಗಿ ಯಾವುದೋ ಒಂದು ಕಾರಣದಿಂದ ಮನೋವ್ಯಥೆ ಕಾಡಲಿದೆ.

ವೃಶ್ಚಿಕ – ಈ ರಾಶಿಯವರಿಗೆ ಸ್ವಲ್ಪ ಆರೋಗ್ಯದಲ್ಲಿ ಏರುಪೇರಾಗಲಿದೆ. ದೈವಾನುಕೂಲವೂ ಕಡಿಮೆ, ಶುಕ್ರ ಇಲ್ಲಿ ಸೇರಿರುವುದರಿಂದ ಕೊಂಚ ತೊಡಕಾಗಲಿದೆ. ಪ್ರಯಾಣ ಮಾಡುವಾಗ ಎಚ್ಚರದಿಂದಿರಿ, ಕಟ್ಟಡ ನಿರ್ಮಾಣ ಮಾಡುವವರುಗಮನಹರಿಸಿ. ವಿಷಜಂತುಗಳ ಭಯಕಾಡುವ ಸೂಚನೆಗಳಿವೆ.

ಧನುಸ್ಸು – ಬೆಳಿಗ್ಗೆ ನಿಮ್ಮ ಸಂಗಾತಿಯೊಂದಿಗಿನ ಜಗಳದಿಂದಾಗಿ ನೀವು ತುಂಬಾ ದುಃಖಿತರಾಗುತ್ತೀರಿ. ಇದಲ್ಲದೇ ನಿಮ್ಮ ಮಾನಸಿಕ ಒತ್ತಡ ಕೂಡ ಹೆಚ್ಚಾಗಬಹುದು. ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳುವುದು ಮತ್ತು ನಿಮ್ಮ ಮಾನಸಿಕ ನೆಮ್ಮದಿಗೆ ಭಂಗ ತರದಿರುವುದು ಉತ್ತಮ.

ಮಕರ – ಮದುವೆ ಕಾರ್ಯ ನಿರಾಶ ಮನೋಭಾವ ಕಾಡಲಿದೆ, ನಿಮಗೆ ಶತ್ರುಗಳ ಸಂಖ್ಯೆ ಹೆಚ್ಚಾಗಿದ್ದು ಭದ್ರತೆ ಅವಶ್ಯಕತೆ ಇದೆ, ವೃತ್ತಿ ಕ್ಷೇತ್ರದಲ್ಲಿ ವೈಫಲ್ಯ ಕಂಡು ಬರುವುದು, ಸಂಬಳಕ್ಕಾಗಿ ಮೆನೇಜರ್ ಜೊತೆ ಕಿರಿಕಿರಿ ಸಂಭವ, ವೃತ್ತಿ ಕ್ಷೇತ್ರದಲ್ಲಿ ಏರುಪೇರು.

ಕುಂಭ – ಆರ್ಥಿಕ ವ್ಯವಹಾರವು ನಿಮ್ಮ ಇಚ್ಛೆ ಪ್ರಕಾರ ನಡೆಯುವ ಸಾಧ್ಯತೆ ಕಂಡುಬರುತ್ತದೆ. ಹಿರಿಯರ ಸಮ್ಮುಖದಲ್ಲಿ ನಿಮ್ಮ ಯೋಜನೆಯನ್ನು ಪ್ರಸ್ತಾಪ ಮಾಡುವಿರಿ ಅದಕ್ಕೆ ಸೂಕ್ತ ಬಂಡವಾಳವು ಸಹ ಈ ದಿನ ದೊರೆಯಲಿದೆ. ಕಚೇರಿ, ಬ್ಯಾಂಕುಗಳ ವ್ಯವಹಾರದಲ್ಲಿ ನಿಮ್ಮ ಕೆಲಸ ನಿಶ್ಚಿತವಾಗಿ ಜಯ ಕಾಣಲಿದೆ.

ಮೀನ – ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಿದ್ದು ಅಂದು ಕೊಂಡ ಕಾರ್ಯಗಳು ನೆರವೇರಲಿವೆ, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯ ಪ್ರಬಲ ಸಾಧ್ಯತೆಯಿದೆ, ಇತರರ ಮನಸ್ಥಿತಿಗೆ ನೀವು ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ ವಾಗಿರುವುದು ಕಂಡುಬರುತ್ತದೆ.

Leave a Reply

Your email address will not be published. Required fields are marked *

error: Content is protected !!