ಶುಭ ಶುಕ್ರವಾರದ ನಿಮ್ಮ ಭವಿಷ್ಯ ಹೇಗಿದೆ ಎಂದು ನೋಡಿ.

ಮೇಷ: ಇಂದು‌ ಈ ರಾಶಿಯ ರಿಯಲ್ ಎಸ್ಟೇಟ್ ಮತ್ತು ಗುತ್ತಿಗೆದಾರ ಉದ್ಯಮದಾರರಿಗೆ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ, ಜನಪ್ರತಿನಿಧಿಗಳು ಸಾರ್ವಜನಿಕರೊಡನೆ ಸಹಬಾಳ್ವೆ ಮತ್ತು ಕೀರ್ತಿವಂತರಾಗುತ್ತಾರೆ, ಪ್ರಯತ್ನಿಸಿದ ಎಲ್ಲಾ ಕೆಲಸ ಕಾರ್ಯಗಳು ಸಫಲ

ವೃಷಭ: ವೃತ್ತಿ ಕ್ಷೇತ್ರದಲ್ಲಿ ಹಿಂಬಡ್ತಿ ಸಾಧ್ಯತೆ. ನಿಮ್ಮ ಒಡಹುಟ್ಟಿದವರ ಸಹಾಯದಿಂದಾಗಿ ನೀವು ಕುಟುಂಬ ಸೌಕರ್ಯದ ಆನಂದವನ್ನು ಮತ್ತು ಸುರಕ್ಷಿತ ಯಶಸ್ಸನ್ನು ಅನುಭವಿಸುವಿರಿ. ಇಂದು ದೇವಸ್ಥಾನಕ್ಕೆ ಭೇಟಿ ನೀಡಲಿದ್ದೀರಿ.

ಮಿಥುನ: ಅಂದುಕೊಂಡಿದ್ದನ್ನು ಸಾಧಿಸಲೇಬೇಕು ಎಂಬ ನಿಮ್ಮ ಛಲ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲಿದೆ. ಸಾದ್ಯವಾದಷ್ಟು ಇನ್ನೊಬ್ಬರ ಬಗ್ಗೆ ಟೀಕೆ ಮಾಡುವುದನ್ನು ನಿಲ್ಲಿಸಿ. ನಿಮ್ಮ ಕೈಯಲ್ಲಿ ಆದಷ್ಟು ದಾನ ಧರ್ಮ ಮಾಡಿ.

ಕಟಕ: ಆರ್ಥಿಕ ಜೀವನ ಸಮೃದ್ಧಿಯಾಗಿರಲಿದೆ. ಸಾಲಗಳಿಂದ ಮುಕ್ತಿ ಹೊಂದುವಿರಿ. ಆದಾಯದ ಹೊಸ ಮೂಲಗಳು ಸಿಗಲಿದೆ. ಹೊಸ ಹೊಸ ವ್ಯಕ್ತಿಗಳ ಭೇಟಿಯಾಗುವಿರಿ. ಸಾಮಾಜಿಕ ಸಭೆ, ಸಮಾರಂಭಗಳಲ್ಲಿ ತೊಡಗಿಕೊಳ್ಳುವಿರಿ.

ಸಿಂಹ: ಕೆಲಸ ಕಾರ್ಯಗಳು ಸುಲಭವಾಗಿ ನೆರವೇರುವುದರಿಂದ ಸಂತಸ. ಲೇವಾದೇವಿ ಹಣಕಾಸು ವ್ಯವಹಾರಸ್ಥರಿಗೆ ಅಧಿಕ ಲಾಭ. ಉದ್ಯೋಗ ನಿಮಿತ್ತ ವಿದೇಶ ಯಾನದ ಸಾಧ್ಯತೆ. ಹಿರಿಯರ ಆರೋಗ್ಯದ ಬಗ್ಗೆ ಗಮನ ಅಗತ್ಯ.

ಕನ್ಯಾ: ಶತ್ರುಗಳ ಮುಂದೆ ಆತ್ಮಾಭಿಮಾನದಿಂದ ವರ್ತಿಸಿ. ಕೀಳರಿಮೆ ಸಲ್ಲ. ಉದ್ಯೋಗದ ನಿಮಿತ್ತ ದೂರಪ್ರಯಾಣ ಸಾಧ್ಯತೆ. ಶರೀರದಲ್ಲಿ ವ್ಯತ್ಯಾಸ, ಸಹೋದರ ಸಂಬಂಧಿಗಳಿಂದ ಕಿರಿಕಿರಿ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.

ತುಲಾ: ಸಂಗಾತಿಯೊಂದಿಗೆ ಪದೇ ಪದೇ ಕೋಪ ಮಾಡಿಕೊಳ್ಳಬೇಡಿ. ಇದರಿಂದ ಮುಂದೊಂದು ದಿನ ನಿಮ್ಮ ದಾಂಪತ್ಯದಲ್ಲಿ ವಾಸಿ ಆಗದಂತಹ ಬಿರುಕು ಮೂಡುವ ಸಾಧ್ಯತೆ ಇದೆ. ರಾಜಕೀಯ ರಂಗದವರಿಗೆ ಸಾರ್ವಜನಿಕ ಜೀವನದಲ್ಲಿ ಮನ್ನಣೆ ಸಿಗಲಿದೆ.

ವೃಶ್ಚಿಕ: ಕುಟುಂಬ ಸದಸ್ಯರೊಂದಿಗೆ ಸಂತಸದಿಂದ ದಿನ ಕಳೆಯುವಿರಿ. ಉದ್ಯಮ ಸ್ಥಾಪನೆ ವಿಚಾರದಲ್ಲಿ ಹೊಸ ಆಲೋಚನೆಗಳು ಬರಲಿವೆ. ವ್ಯಾಪಾರ, ವ್ಯವಹಾರದಲ್ಲಿ ಬಾಳ ಸಂಗಾತಿ ನೆರವಾಗಲಿದ್ದಾರೆ. ಆರೋಗ್ಯ ಸಮಸ್ಯೆ ದೂರವಾಗಲಿದೆ.

ಧನುಸ್ಸು: ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷೆ ಮೀರಿದ ಲಾಭ. ಆಪ್ತೇಷ್ಟರ ಆಗಮನ. ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಸಮಾಚಾರ ಕೇಳಿ ದುಗುಡ ನಿವಾರಣೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯ.

ಮಕರ: ಆರ್ಥಿಕ ಪರಿಸ್ಥಿತಿಯಲ್ಲಿ ಮಿಶ್ರ ಫಲ, ವ್ಯಾಪಾರದಲ್ಲಿ ಆರ್ಥಿಕ ಸುಧಾರಣೆ, ಕುಟುಂಬದಲ್ಲಿ ಸೌಖ್ಯ, ಪ್ರಯತ್ನಿಸಿದ ಎಲ್ಲಾ ಕಾರ್ಯಗಳು ಪ್ರಗತಿ, ಜನಪ್ರತಿನಿಧಿಗಳಿಗೆ ಕ್ಷೇತ್ರದಲ್ಲಿ ಗೌರವ ಪ್ರಾಪ್ತಿ, ಸರಕಾರಿ ಉದ್ಯೋಗಿಗಳಿಗೆ ಧನಪ್ರಾಪ್ತಿ.

ಕುಂಭ: ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಲಿದ್ದೀರಿ. ಇದರಿಂದ ಇಂದು ನಿಮ್ಮ ಇಡೀ ದಿನ ಆಯಾಸ ಅನುಭವಿಸಲಿದ್ದೀರಿ. ಸ್ನೇಹಿತರೊಬ್ಬರು ಪರ ಊರಿನಿಂದ ನಿಮ್ಮನ್ನು ಕಾಣಲೆಂದೇ ಬರಲಿದ್ದಾರೆ. ಇದರಿಂದ ನಿಮ್ಮ ಸಂತಸ ಇಮ್ಮಡಿಯಾಗಲಿದೆ.

ಮೀನ: ಇಂದು ಸ್ನೇಹಿತರು ಸಾಲ ಕೇಳಲಿದ್ದಾರೆ. ಹಣದ ವಿಚಾರದಲ್ಲಿ ಎಚ್ಚರ ವಹಿಸುವುದು ಉತ್ತಮ. ವಿದ್ಯಾರ್ಥಿಗಳಿಗೆ ಯಶಸ್ಸಿನ ದಿನ. ವ್ಯಾಪಾರ, ವ್ಯವಹಾರಗಳಲ್ಲಿ ಹಿನ್ನಡೆ ಉಂಟಾಗಲಿದೆ. ಕುಟುಂಬದಲ್ಲಿ ಒತ್ತಡ ಉಂಟಾಗಲಿದೆ.

Leave a Reply

Your email address will not be published. Required fields are marked *

error: Content is protected !!