ರಾಶಿ ಭವಿಷ್ಯ: ಈ ದಿನ ನಿಮ್ಮ ರಾಶಿಗೆ ಅನುಗುಣವಾಗಿ ಭವಿಷ್ಯ ಹೇಗಿದೆ ನೋಡಿ.

ಮೇಷ – ಈ ದಿನ ನಿಮ್ಮ ಪಾಲಿಗೆ ಶುಭಕರವಾಗಲಿದೆ. ಉದ್ಯೋಗಕ್ಕಾಗಿ ಅರಸುತ್ತಿರುವವರು ಇಂದು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಪಡೆಯುವಲ್ಲಿ ಯಶಸ್ವಿಯಾಗಲಿದ್ದಾರೆ. ಸಂಗಾತಿಯಿಂದ ಸಂಪೂರ್ಣ ಬೆಂಬಲ ಪಡೆಯಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.

ವೃಷಭ – ಪತಿ ಪತ್ನಿ ಮಕ್ಕಳೊಂದಿಗೆ ವಿರಸ ಮನಸ್ತಾಪ ಕಂಡುಬರಲಿದೆ. ಅತಿಯಾದ ಚಿಂತನೆ ಆರೋಗ್ಯದಲ್ಲಿ ತೊಂದರೆ ಸಂಭವ. ಬಂದು ಬಳಗ ದಿಂದ ಸಹಕಾರ ಸಿಗಲಾರದು, ಎಂದು ಕೇಳಬೇಡಿ. ಬೇರೆ ಊರಿಗೆ ಪ್ರಯಾಣ ಬೆಳೆಸುವಿರಿ.

ಮಿಥುನ – ನವದಂಪತಿಗೆ ಪದೇಪದೇ ಮುಟ್ಟಿನಲ್ಲಿ ಸಮಸ್ಯೆ. ಗುರಿ ಸಾಧನೆಗೆ ಪರಿಶ್ರಮ, ಸ್ತ್ರೀಯರಿಗೆ ಲಾಭ, ರಾಜ ಸನ್ಮಾನ, ಉತ್ತಮ ಫಲ, ಪ್ರಭಾವಿ ವ್ಯಕ್ತಿಗಳ ಭೇಟಿ, ನೂತನ ವ್ಯವಹಾರಗಳಲ್ಲಿ ಆಸಕ್ತಿ, ಮಕ್ಕಳಿಗಾಗಿ ಅಧಿಕ ಖರ್ಚು.

ಕಟಕ – ಆರ್ಥಿಕವಾಗಿ ಮುಂದುವರಿಯುವ ಎಲ್ಲ ಲಕ್ಷಣಗಳು ಕಂಡು ಬರುತ್ತದೆ. ಕೆಲಸವನ್ನು ಬೇಗನೆ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುವ ಮನೋಭಾವನೆಯಲ್ಲಿ ಇರುವಿರಿ. ಹೂಡಿಕೆಗಳ ಬಗ್ಗೆ ಹೆಚ್ಚಿನ ಗಮನ ಅಗತ್ಯವಿದೆ.

ಸಿಂಹ – ಈ ರಾಶಿಯ ವಿದ್ಯಾರ್ಥಿಗಳಿಗೆ ಇಂದು ತುಂಬಾ ಒಳ್ಳೆಯ ದಿನ. ನೀವು ಪರೀಕ್ಷೆಯಲ್ಲಿ ಅದ್ಭುತ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಈ ರೀತಿ ಶ್ರಮಿಸುತ್ತಿರಿ, ಶೀಘ್ರದಲ್ಲೇ ನಿಮ್ಮ ಉಜ್ವಲ ಭವಿಷ್ಯದ ಕನಸು ಈಡೇರುತ್ತದೆ.

ಕನ್ಯಾ – ನಿರೀಕ್ಷೆಗೆ ತಕ್ಕಂತೆ ಕೆಲಸ ಆಗದೇ ಮಾನಸಿಕ ಅಶಾಂತಿ ಕಂಡುಬರುವುದು. ವ್ಯವಹಾರಗಳಲ್ಲಿ ಹಾನಿಯಾಗುವ ಭಯ ಇರುವುದು. ಪರಿಣಿತರ ಅಥವಾ ಹಿರಿಯರ ಸಲಹೆಯಂತೆ ಮುಂದುವರೆಯಿರಿ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲವಿದೆ.

ತುಲಾ – ವೈವಾಹಿಕ ಜೀವನದಲ್ಲಿ ಇದ್ದ ಮನಸ್ತಾಪಗಳೆಲ್ಲ ದೂರಾಗಿ ನೆಮ್ಮದಿ ನೆಲೆಸಲಿದೆ. ಇದರಿಂದ ನಿಮ್ಮ ಮಾನಸಿಕ ಚಿಂತೆಗಳೆಲ್ಲ ದೂರಾಗಲಿದೆ. ಕುಟುಂಬಸ್ಥರ ನಡುವೆ ಉಂಟಾಗುವ ಸಮಸ್ಯೆಯನ್ನು ತಾಳ್ಮೆಯಿಂದ ನಿಭಾಯಿಸಿ.

ವೃಶ್ಚಿಕ – ಕೌಟುಂಬಿಕ ಸಮಸ್ಯೆಗಳು ನಿಮಗೆ ಬಾದೆ ನೀಡಬಹುದು. ನಿಂತಿರುವ ಕಾರ್ಯಗಳಿಗೆ ಚಾಲನೆ ಸಿಗಲಿದೆ. ನಿಮ್ಮ ಕಾರ್ಯಗಳಲ್ಲಿ ಉತ್ತಮ ಫಲಿತಾಂಶ ಕಂಡು ಬರಲಿದೆ. ಕ್ಷಮಿಸುವ ಗುಣಗಳಿಂದ ನಿಮ್ಮ ವ್ಯಕ್ತಿತ್ವವನ್ನು ದೊಡ್ಡಮಟ್ಟದಲ್ಲಿ ಬೆಳೆಸಿಕೊಳ್ಳುತ್ತೀರಿ.

ಧನುಸ್ಸು – ನೀವು ಇಂದು ಕಚೇರಿಯಲ್ಲಿ ಹೆಚ್ಚಿನ ಗೌರವವನ್ನು ಪಡೆಯಬಹುದು. ವ್ಯಾಪಾರ ಮಾಡುವವರು ಇಂದು ಹೂಡಿಕೆ ಮಾಡುವುದನ್ನು ತಪ್ಪಿಸಿ. ನೀವು ಇಂದು ಯಾವುದೇ ಅಪಾಯವನ್ನು ತೆಗೆದುಕೊಂಡರೆ ತಪ್ಪು ಫಲಿತಾಂಶವನ್ನು ಎದುರಿಸಬೇಕಾಗಬಹುದು.

ಮಕರ – ಮೇಲಧಿಕಾರಿಗಳ ಅವಕೃಪೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳಲು ಸಂಯಮದಿಂದ ವರ್ತಿಸಿ. ದೇವಿ ದರ್ಶನ ಭಾಗ್ಯ. ನಿಮ್ಮ ಬೇಡಿಕೆಗಳಿಗೆ ಸ್ಪಷ್ಟ ರೂಪವನ್ನು ಕೊಟ್ಟು ಮುಂದಿಟ್ಟಲ್ಲಿ ಈಡೇರುವ ಸಾಧ್ಯತೆ.

ಕುಂಭ – ಸಮಸ್ಯೆಯನ್ನು ಅತ್ಯಂತ ನಾಜೂಕಿನಿಂದ ಪರಿಹರಿಸುವ ಅವಕಾಶ. ರಾಜಕೀಯ ವ್ಯಕ್ತಿಗಳಾಗಿದ್ದರೆ ದಿನದ ಮಟ್ಟಿಗೆ ರಾಜಕೀಯದಿಂದ ದೂರ ಉಳಿಯುವುದು ಉತ್ತಮ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ.

ಮೀನ – ಸಣ್ಣ ಕೈಗಾರಿಕೆ ಪ್ರಾರಂಭದ ಚಿಂತನೆ.
ರಿಯಲ್ ಎಸ್ಟೇಟ್ ಉದ್ಯಮದಾರರು, ಕೈಗಾರಿಕಾ ಮಾಲೀಕರುಹೆಚ್ಚಿನ ಪ್ರಮಾಣದ ಆರ್ಥಿಕ ಲಾಭ ಪಡೆಯುತ್ತೀರಿ. ಹೊಸ ರೂಪರೇಷಗಳು ರಚಿಸಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!