ಹೆಬ್ಬಾಕ ಕೆರೆಗೆ ಹರಿದ ಹೇಮಾವತಿ

ತುಮಕೂರು: ತಾಲ್ಲೂಕಿನ ಹೆಬ್ಬಾಕ ಕೆರೆಗೆ ಹೇಮಾವತಿ ನೀರು ಹರಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು.
ತಾಲ್ಲೂಕಿನ ಊರುಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಬ್ಬಾಕ ಕೆರೆಗೆ ಹೇಮಾವತಿ ನೀರು ಹರಿಸಲು ಗ್ರಾಮಸ್ಥರುಗಳು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಸೇರಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.


ಈ ಭಾಗದ ಹಳ್ಳಿಗಳ ಜನರ ಒತ್ತಾಯದ ಮೇರೆಗೆ ಇಂದು ಹೆಬ್ಬಾಕ ಕೆರೆಗೆ ಹೇಮಾವತಿ ನೀರು ಹರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಊರುಕೆರೆ ಗ್ರಾ.ಪಂ. ಅಧ್ಯಕ್ಷ ಉಮಾಮಹೇಶ್ವರ್, ಹೆಬ್ಬಾಕ ಕೆರೆಗೆ ಹೇಮಾವತಿ ನೀರು ಹರಿಸುತ್ತಿರುವುದು ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗುವುದರೊಂದಿಗೆ ತುಮಕೂರು ನಗರಕ್ಕೂ ಕುಡಿಯುವ ನೀರಿನ ವ್ಯವಸ್ಥೆ ಅನುಕೂಲವಾಗಲಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಈ ಕೆರೆಯನ್ನು ಹೇಮಾವತಿ ನೀರಿನಿಂದ ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹೆಬ್ಬಾಕ ಕೆರೆ ತುಂಬಿದರೆ ಈ ಭಾಗದ ನರಸಾಪುರ, ಕಳಸೇಗೌಡನಪಾಳ್ಯ, ಹೆಬ್ಬಾಕ, ಮಲ್ಲೇನಹಳ್ಳಿ, ಅಂಚಿಹಳ್ಳಿ, ಮೆಳೇಹಳ್ಳಿ, ಅಣ್ಣೇನಹಳ್ಳಿ ಸೇರಿದಂತೆ ಸುಮಾರು 15 ರಿಂದ 20 ಹಳ್ಳಿಗಳ ಜನರಿಗೆ ಅನುಕೂಲವಾಗಲಿದೆ. ಇದರಿಂದ ಅಂತರ್ಜಲ ಮಟ್ಟವೂ ಹೆಚ್ಚಾಗಲಿದೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ರವಿಶಂಕರ್, ಟೂಡಾ ಸದಸ್ಯ ಶಿವಕುಮಾರ್, ತಾ.ಪಂ. ಮಾಜಿ ಸದಸ್ಯ ವಿಜಯಕುಮಾರ್, ಗ್ರಾ.ಪಂ. ಸದಸ್ಯರಾದ ಶ್ರೀನಿವಾಸ್, ಗಿರೀಶ್, ಸ್ವಾಮಿ, ಸುರೇಶ್, ಲಿಂಗರಾಜು, ಕುಮಾರ್ (ಮಿಲ್ಕ್), ಜಗದೀಶ್, ನಟರಾಜು ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!