ಘನ ಸರ್ಕಾರದ ಯೋಜನೆ ಅಡಿಯಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಿಸಿದ ಶಾಸಕ ಚಿದಾನಂದ್ ಎಂ. ಗೌಡ

ಕರ್ನಾಟಕ ರಾಜ್ಯದ ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಕಲ್ಯಾಣ ಶ್ರೇಯೋಭಿವೃದ್ಧಿ ದೃಷ್ಟಿಯಿಂದ ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಕಟ್ಟಡ ಕಾರ್ಮಿಕರ ಬದುಕನ್ನು ಹಸನಾಗಿಸಲು ಮತ್ತು ದಿನವಿಡಿ ಬೆವರು ಹರಿಸಿ ದುಡಿಯುವ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ಟನ್ನು ಮಾನ್ಯ *ಚಿದಾನಂದಗೌಡರು* ಹಾಗೂ ಕರ್ನಾಟಕ ರಾಜ್ಯ ರೇಷ್ಮೆ ಉದ್ಯಮಗಳ ನಿಗಮ ಮಂಡಳಿ ಅಧ್ಯಕ್ಷರಾದ ಎಸ್ ಆರ್ ಗೌಡರು ವಿತರಿಸಿದರು.

.
ಈ ಸಂದರ್ಭದಲ್ಲಿ ಮಾತನಾಡಿದ ಚಿದಾನಂದಗೌಡರು ನಿಮಗೆಯ ಗೊತ್ತಿಲ್ಲದ ಉಪಯುಕ್ತ ಮಾಹಿತಿಗಳಿವೆ ನೀವು ಮೊದಲು ಕಾರ್ಮಿಕರ ಇಲಾಖೆಗೆ ಭೇಟಿ ನೀಡಿ ಸರ್ಕಾರದಿಂದ ಸಿಗುವ ಸೌಲಭ್ಯ ಪಡೆಯಲು ನಿಮಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡು ನಿಮ್ಮ ಜೀವನದ ರಥ ಚಲಾಯಿಸಿರಿ ಎಂದರು ಕಾರ್ಮಿಕ ವರ್ಗದ ಶ್ರಮಜೀವಿಗಳ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಅವರಿಗೆ ಸರ್ಕಾರ ಸೌಲಭ್ಯ ನೀಡುವ ಕಾರ್ಯ ಮಾಡಲಾಗಿದೆ ಎಂದರು ಕಳ್ಳಂಬೆಳ್ಳ ಹೋಬಳಿಯ ತಾಳಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 10 ರಿಂದ 12 ಗ್ರಾಮಗಳ ಸುಮಾರು 300 ಜನ, ಕಟ್ಟಡ ನಿರ್ಮಾಣ ಮತ್ತು ಕೂಲಿ ಕಾರ್ಮಿಕರಿಗೆ ನಿರ್ಗತಿಕ ಅಂಗವಿಕಲರಿಗೆ, ದಿನಸಿ ಕಿಟ್ ಗಳನ್ನು ಕುನ್ನಾಲ ಕರಿಯಮ್ಮದೇವಿ ದೇವಸ್ಥಾನದ ಸಮುದಾಯ ಭವನದಲ್ಲಿ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ರಂಗನಾಥ್ ಗೌಡ್ರು ರವರು ತಾಳಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಪುಷ್ಪಲತಾ ಗೋವಿಂದರಾಜುರವರು ಸಿರಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಈರಣ್ಣನವರು ಸಿರಾ ತಾಲ್ಲೂಕು ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರಾದ ಎಸ್ ಎಲ್ ಗೌಡ ರವರು ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಣ್ಣನವರು ನಂಜುಂಡಪ್ಪ ಗಂಗಾಧರ ರವರು ಜ್ಯೋತಿರಾಜಣ್ಣ ರವರು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ ಸಿರಾ ನಗರಾಭಿವೃದ್ಧಿ ಸದಸ್ಯರಾದ ತರೂರು ಸುರೇಶ್ ಬಾಬು ಮುಖಂಡರುಗಳಾದ ತಾಳಗುಂದಮಂಜುನಾಥ್ ಕಾಳಾಪುರ ರಂಗನಾಥ್ ಭೀಮಣ್ಣ ಗ್ರಾಮ ಪಂಚಾಯಿತಿ ಸದಸ್ಯರಾದ ಉಗಣೇಕಟ್ಟೆ ಎಂ. ಶಿವಲಿಂಗಯ್ಯ ಗೋಪಿಕುಂಟೆ ಮೂರ್ತಿ ರವರು ಮತ್ತು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಮಾಜಿ ಸದಸ್ಯರುಗಳು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!