
ತುಮಕೂರು ತಾಲ್ಲೂಕು ಕೋರಾ ಹೋಬಳಿ ದೇವಲಾಪುರ ಗ್ರಾಮ ಪಂಚಾಯಿತಿ ಪಕ್ಕಾ ಕಾಡು ಸಿದ್ದಯ್ಯನ ಪಾಳ್ಯ ದೇವಸ್ಥಾನದ ಹತ್ತಿರ ಆಹಾರವನ್ನು ಹುಡುಕಿಕೂಂಡು ಕರಡಿ (ಜಾಂಬವಂತ) ಬಂದಿತ್ತು, ಆದರೆ ಯಾರಿಗೂ ತೊಂದರೆ ಮಾಡದೇ ಜನರನ್ನು ನೋಡಿ ಗಾಬರಿಗೊಂಡು ಕಸದ ತೊಟ್ಟಿಯೊಳಗೆ ಅಡಗಿಕೊಂಡಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕರಡಿಯನ್ನು ಸುರಕ್ಷಿತವಾಗಿ ಕಾಡಿಗೆ ಕಳುಹಿಸಿದರು.