ಅಂಕಣ Archives - Vidyaranjaka

ಸನಾತನ ರಾಷ್ಟ್ರ ಶಂಖನಾದ : ಒಂದು ಹೆಜ್ಜೆ ರಾಮರಾಜ್ಯದ ಕಡೆಗೆ !

ಪ್ರಸ್ತಾವನೆ : ವಿಶ್ವದ ಇತಿಹಾಸದಲ್ಲಿ ಅನೇಕ ಸಂಸ್ಕೃತಿಗಳ ಉದಯವಾಯಿತು  ಮತ್ತು ನಾಶವೂ ಆಯಿತು. ಉದಾ. ಈಜಿಪ್ಟಿಯನ್, ಗ್ರೀಕ್, ರೋಮನ್, ಸಂಸ್ಕೃತಿ ಮುಂತಾದವು; ಆದರೆ ರಾಜಕೀಯ ಸಂಘರ್ಷ, ವಿದೇಶಿ ದಾಳಿಗಳು, ನೈಸರ್ಗಿಕ ಆಪತ್ತುಗಳು ಮುಂತಾದ ಕಷ್ಟಗಳನ್ನು ಎದುರಿಸುತ್ತಾ ಉಳಿದಿದ್ದು ಒಂದೇ ಸಂಸ್ಕೃತಿ, ಅದೇ ‘ಸನಾತನ ಸಂಸ್ಕೃತಿ’. ಸನಾತನ ಎಂದರೆ ಶಾಶ್ವತ, ಚಿರಕಾಲ ಉಳಿಯುವ ಹಾಗೂ ನಿತ್ಯ ನೂತನವಾಗಿರುವ ತತ್ವ ! ಸನಾತನ ಧರ್ಮವು ಯಾವಾಗಲೂ ವಿಶ್ವ ಕಲ್ಯಾಣದ ಪರಿಕಲ್ಪನೆ ಮಂಡಿಸಿದೆ. ಸನಾತನ ಧರ್ಮ ಭಾರತದ ಪ್ರಾಣವಾಗಿದೆ. ಎಲ್ಲಿಯವರೆಗೆ ಸನಾತನ ಧರ್ಮದ ಅನುಕರಣೆ ಆಗುತ್ತಿತ್ತು, ಅಲ್ಲಿಯವರೆಗೆ ಭಾರತ ವೈಭವದ ಶಿಖರದಲ್ಲಿತ್ತು; ಆದರೆ ಕಳೆದ ಕೆಲವು ದಶಕಗಳಲ್ಲಿ ಸನಾತನ ಧರ್ಮದ ಕಡೆಗೆ ಉದ್ದೇಶಪೂರ್ವಕ ತಿರಸ್ಕಾರದಿಂದ  ನೋಡಲಾಯಿತು. ಪರಿಣಾಮವಾಗಿ ಅನೇಕ ಕೌಟುಂಬಿಕ, ಮಾನಸಿಕ, ಸಾಮಾಜಿಕ, ಧಾರ್ಮಿಕ ಹಾಗೂ ರಾಷ್ಟ್ರೀಯ ಸಂಕಷ್ಟಗಳು ನಿರ್ಮಾಣವಾದವು. ಇಂದು ಅಂತರಾಷ್ಟ್ರೀಯ ಅನುದಾನದಿಂದ ಪೋಷಿಸಲಾಗುತ್ತಿರುವ ಅನೇಕ ವ್ಯಕ್ತಿಗಳು, ಹಾಗೂ ಸಂಘಟನೆಗಳು ಸನಾತನ ಧರ್ಮ ಮುಗಿಸುವ ಪಣತೊಟ್ಟು ಕಾರ್ಯನಿರತವಾಗಿದ್ದಾರೆ. ಇದರ ಹಿನ್ನೆಲೆಯಲ್ಲಿ ಸನಾತನ ಧರ್ಮದ ರಕ್ಷಣೆಗಾಗಿ ದೇವರು, ದೇಶ, ಧರ್ಮ ಇವುಗಳ ಸೇವೆ ಮಾಡುವ ವ್ಯಕ್ತಿಗಳು, ಸಂಸ್ಥೆಗಳು ಹಾಗೂ ಸಂಘಟನೆಗಳು ಇವುಗಳ ಸಂಘಟನೆ ಮತ್ತು ಜಾಗೃತಿ ಆಗುವುದು ಅಗತ್ಯವಾಗಿದೆ. ಸನಾತನ ಧರ್ಮದ ಸಶಕ್ತಿಕರಣದಿಂದಲೇ ರಾಮರಾಜ್ಯದ ಸಮಾನ ತೇಜಸ್ವಿ ರಾಷ್ಟ್ರದ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಅದಕ್ಕಾಗಿ ಗೋವಾದಲ್ಲಿ ಮೇ 17 ರಿಂದ 19 ವರೆಗೆ ‘ಸನಾತನ ರಾಷ್ಟ್ರಶಂಖನಾದ ಮಹೋತ್ಸವ’ದ ಆಯೋಜನೆ ಮಾಡಲಾಗಿದೆ.         ಸನಾತನ ರಾಷ್ಟ್ರದ ಪರಿಕಲ್ಪನೆ : ಸನಾತನ ಸಿದ್ಧಾಂತ ಇದು ಮೂಲತಃ ಕಲ್ಯಾಣಕಾರಿ, ವ್ಯಕ್ತಿಯ ಐಹಿಕ, ಪಾರಮಾರ್ಥಿಕ ಪ್ರಗತಿ ಹೊಂದುವ, ಹಾಗೂ ಸಮಗ್ರವಾಗಿದೆ. ಅದು ಯಾವುದೇ ವ್ಯಕ್ತಿ ಸಮೂಹಕ್ಕಷ್ಟೇ ಸಂಕುಚಿತವಾಗದೆ ಅಖಿಲ ಮಾನವಜಾತಿಗಾಗಿ ಅನ್ವಯಿಸುತ್ತದೆ. ಸನಾತನ ತತ್ವಗಳು ನ್ಯಾಯ, ಸಮಾನತೆ, ನೀತಿ, ಯೋಗ, ಸಾಧನೆ, ಮುಂತಾದವುಗಳ ಮೇಲೆ ಆಧಾರಿತವಾಗಿದೆ. ವೇದ, ಉಪನಿಷತ್ತುಗಳು, ಗೀತೆ, ರಾಮಾಯಣ, ಮಹಾಭಾರತ, ಜ್ಞಾನೇಶ್ವರಿ, ಮುಂತಾದ ಸನಾತನ ಧರ್ಮಗ್ರಂಥಗಳಲ್ಲಿ ಇದರ ಬಗ್ಗೆ ತತ್ವಜ್ಞಾನವಿದೆ. ಸನಾತನ ರಾಷ್ಟ್ರವು ಈ  ತತ್ವಗಳ ಆಧಾರವಾಗಿ ನಡೆಯಲಿದೆ. ಒಂದು ಆದರ್ಶ ಕಲ್ಯಾಣಕಾರಿ ರಾಷ್ಟ್ರವಾಗಿರಲಿದೆ. ಸಂಕ್ಷಿಪ್ತವಾಗಿ, ತ್ರೇತಾಯುಗದ ರಾಮರಾಜ್ಯದ ಕಲಿಯುಗದ ಸ್ವರೂಪವೇ ಸನಾತನ ರಾಷ್ಟ್ರ ಎಂದು ಹೇಳಬಹುದು.       ಪ್ರಸ್ತುತ ಸ್ಥಿತಿ ಮತ್ತು ಧರ್ಮದ ಅಧಿಷ್ಠಾನ ಇರುವುದರ ಮಹತ್ವ : ಪ್ರಸ್ತುತ ಜಾತ್ಯಾತೀತ ವ್ಯವಸ್ಥೆಯಲ್ಲಿ ಗೋವು, ಗಂಗೆ,…

ಭಕ್ತ ಶಿರೋಮಣಿ ಸಂಕಟಮೋಚನ ಹನುಮಂತನ ವಿವಿಧ ಗುಣವೈಶಿಷ್ಟ್ಯಗಳು

ಜಿತೇಂದ್ರೀಯ : ಮಾರುತಿ ಎಂದರೆ ಮೂರನೇ ನೇತ್ರವನ್ನು ತೆರೆದು ಕಾಮದೇವನನ್ನು ಭಸ್ಮಗೊಳಿಸಿದ ಶಿವಶಂಕರನ ಅಂಶಾವತಾರವಾಗಿದ್ದಾನೆ. ಆದ್ದರಿಂದ ಅವನು ಕಾಮವಾಸನೆ ಸಹಿತ ಷಡ್ರಿಪುಗಳನ್ನು ಜಯಿಸಿದ್ದಾನೆ.…

ಶ್ರೀರಾಮನವಮಿ ನಿಮಿತ್ತ ವಿಶೇಷ ಲೇಖನ !

ರಾಮಾಯಣದ ಉತ್ಪತ್ತಿ ಉತ್ಪತ್ತಿ ಮತ್ತು ಅರ್ಥ : ರಾಮಾಯಣ ಶಬ್ದವು ರಂ + ಅಯನ ಈ ಎರಡು ಶಬ್ದಗಳಿಂದ ನಿರ್ಮಾಣವಾಗಿದೆ. ರಮ್…

ಆರ್ ಬಿ ಐ ಅಕ್ಷರಶಃ *ಬಾಬಾಸಾಹೇಬ್ ಅಂಬೇಡ್ಕರರ ಮೆದುಳಿನ ಕೂಸು*.. (Brain child of Babasaheb)…

ಅಂಬೇಡ್ಕರರು 1923ರಲ್ಲಿ ” ರೂಪಾಯಿಯ ಸಮಸ್ಯೆ: ಅದರ ಮೂಲ ಮತ್ತು ಪರಿಹಾರ. ಭಾರತೀಯ ಕರೆನ್ಸಿ ಮತ್ತು ಬ್ಯಾಂಕಿಂಗ್ ನ ಇತಿಹಾಸ ”…

ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ – ಮಹಾಶಿವರಾತ್ರಿ ನಿಮಿತ್ತ ವಿಶೇಷ ಲೇಖನ

ಶಿವನ ದರ್ಶನ ಪಡೆಯುವ ಮುನ್ನ ನಂದಿಯ ದರ್ಶನ ಪಡೆಯುವುದು ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಮುನ್ನ ನಂದಿಯ ಎರಡೂ ಕೊಂಬುಗಳಿಗೆ ಕೈಮುಟ್ಟಿಸಿ…

ರಥಸಪ್ತಮಿ ನಿಮಿತ್ತ ವಿಶೇಷ ಲೇಖನ

ಮಾಘ ಮಾಸ ಶುಕ್ಲಪಕ್ಷದ ಸಪ್ತಮಿಯ ದಿನ. ಇಂದಿಗೆ ಚಳಿಗಾಲವು ಮುಗಿದು ಬೇಸಗೆಯ ಕಾಲವು ಪ್ರಾರಂಭವಾಗುವುದು. ಸೂರ್ಯನು ತನ್ನ ಏಳು ಕುದುರೆಗಳ ರಥವನ್ನೇರುವನು.…

ಪಾವನ ಚರಿತೆ

        ಭಕ್ತರ ಮೊರೆಯನ್ನು ಆಲಿಸಿ ರಕ್ಷಿಸಮ್ಮ ಶರಣಾಗತ ವತ್ಸಲೆ ಪರಮ ಪವಿತ್ರೆ ಪುಣ್ಯ ಚರಿತೆ ವಿಶ್ವ ವಂದಿತೆ…

ಪ್ರಯಾಗ್ ರಾಜ್ ನಲ್ಲಿ ವೇಣಿ ದಾನ ಎಂಬ ಪ್ರಕ್ರಿಯೆ ನಡೆಯುತ್ತೆ

ತುಂಬಾ ಜನರಿಗೆ ಈ ವಿಚಾರ ಗೊತ್ತೋ ಇಲ್ವೋ ಗೊತ್ತಿಲ್ಲಾ ;   Really Many are not aware.. ಪ್ರಯಾಗ್ ರಾಜ್…

ಕುಂಭಮೇಳದ ಆಯೋಜನೆ : ಆದಾಯದ ಮೂಲ ಅಥವಾ ಅಪವ್ಯಯ ?

ಕುಂಭಮೇಳಕ್ಕೆ ಮಹಾಕುಂಭ ಎಂದೂ ಕರೆಯುತ್ತಾರೆ. ಇದು ಭಾರತೀಯ ಸಂಸ್ಕೃತಿ ಮತ್ತು ಧರ್ಮದ ಶ್ರೇಷ್ಠತೆಯ ಪ್ರತೀಕವಾಗಿದೆ. ಇದು ಕೇವಲ ಒಂದು ಧಾರ್ಮಿಕ ಆಯೋಜನೆಯಲ್ಲ,…

ಜನವರಿ 26 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಲಿದಾನ ದಿನ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದ ರಾಯಣ್ಣ, ಕೇವಲ 32 ವರ್ಷಗಳ ಕಾಲ ಬದುಕಿದ್ದರೂ, ಅವನ ಹೋರಾಟದ…

error: Content is protected !!