Blog
ಬರಗಾಲ ಜೊತೆಗೆ ಸಾಲದ ಬಾದೆಗೆ ಹೆದರಿ ಮನನೊಂದ ರೈತ ಆತ್ಮಹತ್ಯೆ ಶರಣು…
ಕೊರಟಗೆರೆ ತಾಲೂಕಿನ ಸಿ ಎನ್ ದುರ್ಗಾ ಹೋಬಳಿಯ ಕಬುಗೆರೆ ಗೊಲ್ಲರಹಟ್ಟಿ ಗ್ರಾಮದ ರಾಜಣ್ಣ 38 ವರ್ಷ ನೇಣಿಗೆ ಶರಣಾಗಿರುವ ರೈತ ಹಲವು…
ಅಕ್ಷಯ ತೃತೀಯಾ (ತದಿಗೆ) – ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ
ಮೂರುವರೆ ಮುಹೂರ್ತಗಳ ಪೈಕಿ ಒಂದು ಪೂರ್ಣ ಮುಹೂರ್ತವಾಗಿರುವ ಅಕ್ಷಯ ತೃತೀಯಾದಲ್ಲಿ ಎಳ್ಳು ತರ್ಪಣೆ ನೀಡುವುದು, ಉದಕ ಕುಂಭದಾನ, ಮೃತ್ತಿಕಾ ಪೂಜೆ ಮಾಡುವುದು, ಅದೇರೀತಿ ದಾನ ನೀಡುವ ಪರಂಪರೆ ಇದೆ. 2024 ರಲ್ಲಿ ಮೇ 10 ರಂದು, ವೈಶಾಖ ಶುಕ್ಲ ತೃತೀಯಾ ತಿಥಿಯಂದು ಅಕ್ಷಯ ತೃತೀಯಾವನ್ನು ಆಚರಿಸಲಾಗುವುದು. ಇದರ ಹಿನ್ನೆಲೆಯ ಶಾಸ್ತ್ರವನ್ನು ನಾವು ತಿಳಿದುಕೊಳ್ಳೋಣ. ಪ್ರಸ್ತುತ ಲೇಖನದಲ್ಲಿ ಹೇಳಲಾದ ಅಧ್ಯಾತ್ಮಶಾಸ್ತ್ರವು, ಸರ್ವಸಾಮಾನ್ಯ ಕಾಲದಲ್ಲಿ ಪಾಲಿಸಬೇಕಾದ ಧರ್ಮದಲ್ಲಿ ಹೇಳಲಾದ ಶಾಸ್ತ್ರವಾಗಿದೆ. ಎಲ್ಲವೂ ಅನುಕೂಲಕರವಾಗಿದ್ದು ಧರ್ಮದಲ್ಲಿ ಹೇಳಿದಂತೆ ವರ್ತಿಸಬಹುದು, ಇದಕ್ಕೆ ‘ಸಂಪತ್ಕಾಲ’ ಎನ್ನಬಹುದು. ಅಕ್ಷಯ ತೃತೀಯಾದ ಮಹತ್ವ ಅಸ್ಯಾಂ ತಿಥೌ ಕ್ಷಯಮುರ್ಪತಿ ಹುತಂ ನ ದತ್ತಂ| ತೇನಾಕ್ಷಯೇತಿ ಕಥಿತಾ ಮುನಿಭಿಸ್ತ ತೀಯಾ| ಉದ್ದಿಶ್ಯ ದೈವತಪಿತೃನ್ಕ್ರಿಯತೇ ಮನುಷ್ಯೈಃ| ತತ್ ಚ ಅಕ್ಷಯಂ ಭವತಿ ಭಾರತ ಸರ್ವಮೇವ|| – ಅರ್ಥ : (ಶ್ರೀಕೃಷ್ಣನು ಹೇಳುತ್ತಾನೆ) ಎಲೈ ಯುಧಿಷ್ಠಿರನೇ, ಈ ತಿಥಿಗೆ ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ; ಆದುದರಿಂದ ಋಷಿಗಳು ಇದನ್ನು ‘ಅಕ್ಷಯ ತೃತೀಯಾ’ ಎಂದಿದ್ದಾರೆ. ಈ ತಿಥಿಯಂದು ದೇವರು ಮತ್ತು ಪಿತೃಗಳನ್ನುದ್ದೇಶಿಸಿ ಮಾಡಿದ ಕೃತಿಯು ಅಕ್ಷಯ (ಅವಿನಾಶೀ)ವಾಗುತ್ತದೆ. ಕೆಲವರ ಅಭಿಪ್ರಾಯದಂತೆ ಅಕ್ಷಯ ತೃತೀಯಾ ಕೃತಯುಗ ಅಥವಾ ತ್ರೇತಾಯುಗದ ಆರಂಭದ ದಿನವಾಗಿದೆ. ಅಕ್ಷಯ ತೃತೀಯಾದಂದು ಇಡೀ ದಿನ ಶುಭ ಮುಹೂರ್ತವೇ ಆಗಿರುತ್ತದೆ; ಆದ್ದರಿಂದ ಈ ತಿಥಿಯಂದು ಧಾರ್ಮಿಕ ಕೃತಿಗಳನ್ನು ಮಾಡುವಾಗ ಮುಹೂರ್ತವನ್ನು ನೋಡಬೇಕಾಗುವುದಿಲ್ಲ. ಈ ದಿನದಂದು ಹಯಗ್ರೀವ ಅವತಾರ, ನರನಾರಾಯಣ ಪ್ರಕಟೀಕರಣ ಮತ್ತು ಪರಶುರಾಮನ ಅವತಾರವಾಗಿದೆ. ಈ ತಿಥಿಯಂದು ಬ್ರಹ್ಮ ಮತ್ತು ಶ್ರೀವಿಷ್ಣುವಿನ ಮಿಶ್ರ ಲಹರಿಗಳು ಉಚ್ಚ ದೇವತೆಗಳ ಲೋಕದಿಂದ ಪೃಥ್ವಿಯ ಮೇಲೆ ಬರುತ್ತವೆ. ಆದುದರಿಂದ ಪೃಥ್ವಿಯ ಮೇಲಿನ ಸಾತ್ತ್ವಿಕತೆಯು ಹೆಚ್ಚಾಗುತ್ತದೆ. ಈ ಕಾಲಮಹಾತ್ಮೆಯಿಂದಾಗಿ ಈ ತಿಥಿಯಂದು ಪವಿತ್ರ ಸ್ನಾನ, ದಾನಗಳಂತಹ ಧರ್ಮಕಾರ್ಯಗಳನ್ನು ಮಾಡಿದರೆ ಅವು ಗಳಿಂದ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ. ಈ ತಿಥಿಯಂದು ದೇವತೆಗಳನ್ನು ಮತ್ತು ಪಿತೃಗಳನ್ನು ಉದ್ದೇಶಿಸಿ ಮಾಡಿದ ಎಲ್ಲ ಕರ್ಮಗಳೂ ಅಕ್ಷಯ (ಅವಿನಾಶಿ) ವಾಗುತ್ತವೆ.…
ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಯ ಪೈಪ್ ಲೈನ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಲು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯ
ತುಮಕೂರು : ತುಮಕೂರು ಜಿಲ್ಲೆಯ ಜನ -ಜಾನವಾರಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿರುವ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ಮಾಡುವುದಕ್ಕೋಸ್ಕರ…
ಮಹಿಳೆ ಅಪಹರಣ ಕೇಸ್ ನಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅರೆಸ್ಟ್
ಬೆಂಗಳೂರು: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ, ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳ ತಂಡ ಬಂಧಿಸಿದೆ. …
ನಿಮ್ಮ ಮಕ್ಕಳನ್ನು ತುಮಕೂರಿನಲ್ಲಿ ಈ ಶಾಲೆಗಳಿಗೆ ಸೇರಿಸುವ ಮುನ್ನ ಎಚ್ಚರ ವಹಿಸಿ !!!
14 ಶಾಲೆಗಳನ್ನು ಅನಧಿಕೃತವೆಂದು ಘೋಷಣೆ ತುಮಕೂರು : ತಾಲ್ಲೂಕು ವ್ಯಾಪ್ತಿಯಲ್ಲಿ 2024-25ನೇ ಸಾಲಿಗಾಗಿ ಮಾನ್ಯತೆ ನವೀಕರಣ ಪಡೆಯದ, ಶಾಲೆ ಸ್ಥಳಾಂತರಕ್ಕೆ ಅನುಮತಿ…
ತುಮಕೂರು ನಗರ ಪ್ರವೇಶಕ್ಕೆ ರಸ್ತೆ ಬಂದ್ ಆಗಿರುವ ಕಾರಣ ವರ್ತುಲ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಶುಭ ಕಲ್ಯಾಣ್ ಸೂಚನೆ
ತುಮಕೂರು: ಸಾರ್ವಜನಿಕರ ಅನುಕೂಲಕ್ಕಾಗಿ ಶಿರಾ ಗೇಟ್-ಗುಬ್ಬಿ ಗೇಟ್‌ವರೆಗೂ ಸಂಪರ್ಕಿಸುವ ವರ್ತುಲ ರಸ್ತೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಲೋಕೋಪಯೋಗಿ…
ಸಿದ್ಧಾರ್ಥ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ನವಜಾತ ಶಿಶುಗಳು ಹಾಗೂ ಚರ್ಮ ರೋಗ ಸಂಬಂಧಿತ ಅತ್ಯಾಧುನಿಕ ಒಪಿಡಿ ಲೋಕಾರ್ಪಣೆ
ತುಮಕೂರು: ನಗರದ ಅಗಳಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನದ ’ಹೊರರೋಗಿಗಳ ವಿಸ್ತರಣಾ…
ಅಕ್ಷಯ ತೃತೀಯ ದಿನ ಬಂಗಾರವನ್ನು ಖರೀದಿ ಮಾಡಿದರೆ ಪಾಪ ಮತ್ತು ದರಿದ್ರ ವನ್ನು ಮನೆಗೆ ಒಟ್ಟಿಗೆ ನೀವೇ ತೆಗೆದುಕೊಂಡು ಹೋದಂತೆ!
ಅಕ್ಷಯ ತೃತೀಯ ದಿನ ಬಂಗಾರವನ್ನು ಖರೀದಿ ಮಾಡಿದರೆ ಪಾಪ ಮತ್ತು ದರಿದ್ರ ವನ್ನು ಮನೆಗೆ ಒಟ್ಟಿಗೆ ನೀವೇ ತೆಗೆದುಕೊಂಡು ಹೋದಂತೆ! ಈ…
ಅನುದಾನಿತ ಪಿ.ಯು. ಕಾಲೇಜು ಉಪನ್ಯಾಸಕರ ವೇತನ ಬಿಡುಗಡೆಗೆ ಲೋಕೇಶ್ ತಾಳಿಕಟ್ಟೆ ಆಗ್ರಹ
ಕನಿಷ್ಟ ವಿದ್ಯಾರ್ಥಿಗಳ ಸಂಖ್ಯೆಯ ನೆಪವೊಡ್ಡಿ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ವೇತನ ತಡೆ ಹಿಡಿದಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು…
ಜರ್ಮನಿಯಿಂದ ದುಬೈಗೆ ಹಾರಿದ ಪ್ರಜ್ವಲ್ ರೇವಣ್ಣ !?
ಜರ್ಮನಿಗೆ ತೆರಳಿದ್ದ ಅಶ್ಲೀಲ ವೀಡಿಯೊ ಪ್ರಕರಣ ಆರೋಪಿ ಎನ್ನಲಾದ ಹಾಸನ ಹಾಲಿ ಸಂಸದ ಹಾಗೂ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಿಂದ…