ತುಮಕೂರಿನಲ್ಲಿ ಅಪರಿಚಿತ ಹೆಂಗಸಿನ ಶವ ಪತ್ತೆ .
ತುಮಕೂರಿನ ಅಮಾನಿ ಕೆರೆ ಬಳಿಯ ಕೋಡಿಬಸವೇಶ್ವರ ದೇವಾಲಯದ ಹಿಂಭಾಗದ ಅಮಾನಿಕೆರೆ ಹಿನ್ನೀರಿನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.
ಇಂದು 12:30 ವೇಳೆಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು ದಾರಿಹೋಕರು ಶವ ನೋಡಿ ಪೊಲೀಸರಿಗೆ ಮಾಹಿತಿ ರವನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ತುಮಕೂರು ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಸ್ಥಳದಲ್ಲಿ ಕೊರಟಗೆರೆ ಮೂಲದ ಮಹಿಳೆಯ ಆಧಾರ್ ಕಾರ್ಡ್ ಪತ್ತೆಯಾಗಿದ್ದು ಸಾವಿಗೆ ಕಾರಣ ತಿಳಿದು ಬಂದಿಲ್ಲ. ಸುಮಾರು 40 ವರ್ಷದ ಮಹಿಳೆಯ ಶವ ಎನ್ನಲಾಗಿದ್ದು ಆತ್ಮಹತ್ಯಯೋ….??? ಕೊಲೆಯೋ…..??? ಎನ್ನುವ ಬಗ್ಗೆ ಪೊಲೀಸರ ತನಿಕೆಯಿಂದಷ್ಟೇ ಸತ್ಯ ಸತ್ಯತೆ ಹೊರಬರಬೇಕಿದೆ. ಸ್ಥಳಕ್ಕೆ ಫಾರೆನ್ಸಿಕ್ ತಜ್ಞರ ಭೇಟಿ ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.