ತುಮಕೂರು : ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ತುಮುಲ್) ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 9 ಮತಗಳನ್ನು ಪಡೆದು ಪಾವಗಡ ಶಾಸಕ ಎಚ್ ವಿ ವೆಂಕಟೇಶ್ ಗೆಲುವು ಸಾಧಿಸಿದ್ದಾರೆ.ಎನ್ ಡಿ ಎ ಅಭ್ಯರ್ಥಿ ಎಸ್ ಆರ್ ಗೌಡ 5 ಮತಗಳನ್ನು ಪಡೆದು ಪರಾಭವ ಗೊಂಡಿದ್ದಾರೆ.
ಅಚ್ಚರಿಯ ಬೆಳವಣಿಗೆಯಲ್ಲಿ ಚುನಾಯಿತ ನಿರ್ದೇಶಕರಲ್ಲಿ ಯಾರನ್ನೂ ಆಯ್ಕೆ ಮಾಡಲಾಗದ ಪರಿಸ್ಥಿತಿಯಲ್ಲಿ ಅಧ್ಯಕ್ಷ ಪದವಿಯು ಪಾವಗಡ ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ವಿ.ವೆಂಕಟೇಶ್ ಅವರ ಪಾಲಾಗಿದೆ. ವೆಂಕಟೇಶ್ ಅವರನ್ನು ಸರ್ಕಾರ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ನಾಮನಿರ್ದೇಶನ ಸದಸ್ಯರನ್ನಾಗಿಸಿ ನೇಮಕ ಮಾಡಿತು. ತುಮುಲ್ ಕಚೇರಿಗೆ ಹೋಗಿ ಇಂದು ಅಧ್ಯಕ್ಷರ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಕ್ರಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯಾಗಿ ನಾಮಮಾತ್ರ ಸಲ್ಲಿಸಿದ್ದಾರೆ. ಎನ್ ಡಿ ಎ ಪಕ್ಷದ ಅಭ್ಯರ್ಥಿಯಾಗಿ ಸಿರಾದ ಎಸ್ ಆರ್ ಗೌಡ ನಾಮಪತ್ರ ಸಲ್ಲಿಸಿದ್ದರು ಸಹ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ.ಎನ್ ಡಿ ಎ ಮೈತ್ರಿ ನಿರ್ದೇಶಕರು ಕೇವಲ ಮೂರೆ ಮಂದಿ ಇದ್ದರು.
ಕರ್ನಾಟಕ ಹಾಲು, ಮಹಾಮಂಡಳಿಗೆ ಶಾಸಕರು ಅಧ್ಯಕ್ಷರಾಗಿರುವುದು ಹಾಸನ ಹಾಲು ಒಕ್ಕೂಟದಲ್ಲೂ ಶಾಸಕರು ಅಧ್ಯಕ್ಷರಾಗಿರುವುದು ನಮ್ಮ ಕಣ್ಣ ಮುಂದೆ ಇರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿವಾಸದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ,ಸಹಕಾರ ಸಚಿವರು ಇತರೆ ಶಾಸಕರುಗಳ ಸಭೆಯಲ್ಲಿ ಶಾಸಕರಿಗೆ ಅಧಿಕಾರ ಕೊಡಬೇಕು ಎಂಬ ಉದ್ದೇಶದಿಂದ ಈ ತೀರ್ಮಾನಕ್ಕೆ ಬರಲಾಗಿದೆ.
ಸಹಕಾರ ಸಂಘಗಳ ಚುನಾವಣೆ ಪ್ರಕ್ರಿಯೆಯಲ್ಲಿ ನಿರ್ದೇಶಕ ಸ್ಥಾನ ಅಯ್ಕೆಯಾದ 15 ದಿನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯಬೇಕಿದ್ದು, ಜ.24ರೊಳಗೆ ತುಮುಲ್ಲೆ ಹೊಸ ಸಾರಥಿ ಆಯ್ಕೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಿಸಲಾಗಿದೆ. ಉಪವಿಭಾಗಾಧಿಕಾರಿ ತುಮಕೂರು ಗೌರವ್ ಕುಮಾರ್ ಚುನಾವಣಾಧಿಕಾರಿಯಾಗಿದ್ದರು. 1324 ಹಾಲು ಉತ್ಪಾದಕರ ಸಂಘಗಳನ್ನು ಹೊಂದಿರುವ ‘ತುಮುಲ್’ನಲ್ಲಿ ಈ ಹಿಂದಿನ ಅವಧಿಯಲ್ಲಿ ಜೆಡಿಎಸ್ ಅಧಿಕಾರ ಚುಕ್ಕಾಣಿ ಹಿಡಿದಿತ್ತು.
8 ನಿರ್ದೇಶಕರು ಒಕ್ಕಲಿಗರು!
ತುಮುಲ್ ನಿರ್ದೇಶಕರಾಗಿ ಆಯ್ಕೆಯಾದ 10 ನಿರ್ದೇಶಕರ ಪೈಕಿ ಬರೋಬ್ಬರಿ 8 ನಿರ್ದೇಶಕರು ಒಕ್ಕಲಿಗ ಸಮುದಾಯದವರು.ಹಾಗಾಗಿ, ಈ ಸಮುದಾಯದ ಸಮಾನ ಮನಸ್ಕರು ಒಕ್ಕಲಿಗ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ಪಡೆಯಬೇಕು ಎಂಬ ನಿಟ್ಟಿನಲ್ಲಿ ಪಕ್ಷಾತೀತವಾಗಿ ಲಾಬಿ ಶುರುವಿಟ್ಟುಕೊಂಡಿದ್ದರು ಕಾಂಗ್ರೆಸ್ ಬೆಂಬಲಿತ ಬಿ.ನಾಗೇಶಾಬು, ಕೆ.ಪಿ.ಭಾರತಿದೇವಿ, ಎಚ್. ಎನ್.ನಂಜೇಗೌಡ, ಚಂದ್ರಶೇಖರರೆಡ್ಡಿ, ಬಿಜೆಪಿ ಬೆಂಬಲಿತ ಡಿ. ಕೃಷ್ಣಕುಮಾರ್, ಎಸ್.ಆರ್.ಗೌಡ, ಸಿದ್ದಗಂಗಯ್ಯ, ಸ್ವತಂತ್ರ್ಯವಾಗಿ ಗುರುತಿಸಿಕೊಂಡಿರುವ ಸಿ.ವಿ.ಮಹಾಲಿಂಗಯ್ಯ ಸೇರಿ 8 ಸದಸ್ಯರು ಒಂದೇ ಸಮುದಾಯದವರಾಗಿದ್ದು, ಎಲ್ಲರೂ ಇದೇ ಮಾನದಂಡದ ಮೇಲೆ ಅಧ್ಯಕ್ಷ ಗಾದಿಗೆ ಲಾಬಿ ನಡೆಸಿದ್ದರು ಫಲಪ್ರದವಾಗಲಿಲ್ಲ.
ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ :
ತುಮುಲ್ ಅಧ್ಯಕ್ಷ ಚುನಾವಣೆಯಲ್ಲಿ ಶಾಸಕ ವೆಂಕಟೇಶ್ ಗೆಲುವು ಸಾಧಿಸಿದ್ದರಿಂದ ಪಾವಗಡ ತಾಲ್ಲೂಕಿನಿಂದ ಬಂದಿದ್ದ ನೂರಾರು ವೆಂಕಟೇಶ್ ಬೆಂಬಲಿಗರು ಕೆ ಎಂ ಎಫ್ ಕಚೇರಿ ಮುಂದೆ ಪಟಾಕಿ ಸಿಡಿಸಿ ಸಂಭ್ರಮ ಆಚರಣೆ ನಡೆಸಿದರು.
ಕಾಂಗ್ರೆಸ್ ಹೈಕಮಾಂಡ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ,ಡಾ ಜಿ ಪರಮೇಶ್ವರ್ ಮತ್ತು ಸಹಕಾರಿ ಸಚಿವ ಕೆ ಎನ್ ರಾಜಣ್ಣ ರವರ ಆಶಿರ್ವಾದದಿಂದ ಇಂದು ತುಮುಲ್ ಅಧ್ಯಕ್ಷ ಗಾದಿ ಹಿಡಿದಿದೇನೆ.ಎಲ್ಲಾ ನಿರ್ದೇಶಕರ ಸಹಕಾರ ಪಡೆದು ಉತ್ತಮ ಆಡಳಿತ ನಡೆಸುತ್ತೇನೆ ಎಂದು ಮಾಧ್ಯಮಗಳಿಗೆ ವೆಂಕಟೇಶ್ ಪ್ರತಿಕ್ರಿಯೆ ನೀಡಿದರು.
ಈ ವೇಳೆ ಪಾವಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು,ಪಾವಗಡ ಪುರಸಭೆ ಅಧ್ಯಕ್ಷ ರಾಜೇಶ್,ಸದಸ್ಯ ರವಿ,ತುಮಕೂರು ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್ ಉಮೇಶ್,ಭೋವಿ ಸಮುದಾಯದ ಮುಖಂಡ ಮಂಜುನಾಥ್,ತುಮುಲ್ ಮಾಜಿ ಸದಸ್ಯ ಸುರೇಶ್, ಮಾಜಿ ತಾ ಪಂ ಸದಸ್ಯರಾದ ಹನುಮಂತರಾಯಪ್ಪ,ಆನಂದಪ್ಪಮುಖಂಡರಾದ ಹಚ್ ಜಿ ರಂಗಪ್ಪ, ಗ್ರಾ ಪಂ ಸದಸ್ಯ ಶ್ರೀರಾಮ್, ಪ್ರಕಾಶ್ ಸೇರಿದಂತೆ ಹಲವರು ಹಾಜರಿದ್ದರು.