ಕೊರಟಗೆರೆ: ತಾಲೋಕಿನ ಕೋಳಾಲ ಹೋಬಳಿಯ ಎಲೆರಾಂಪುರ ಗ್ರಾಮ ಪಂಚಾಯತಿ ಹಾಗೂ ನೀಲಗೋಂಡನಹಳ್ಳಿ ಗ್ರಾಮ ಪಂಚಾಯತಿ ರಾಜ್ಯದ ಹೆದ್ದಾರಿ ವ್ಯಾಪ್ತಿಗೆ ಹೊಂದಿಕೊಂಡಿರುವ ಕೊರಟಗೆರೆ ತಾಲೂಕಿನ ಎರಡನೇ ದೊಡ್ಡ ಕೆರೆ ಎಂದು ಬಿಂಬಿತವಾಗಿರುವ ಹಾಗೂ ಈ ಕೆರೆಗೆ ಸರ್. ಎಂ. ವಿಶ್ವೇಶ್ವರಯ್ಯನವರು 1957ರಲ್ಲಿ ಮೈಲುಗಲ್ಲು ಹಾಕಿದ್ದು. ಹಾಗೂ ಇಂಜಿನಿಯರ್ ಗಳ ಹಾಗೂ ಈ ಭಾಗದ ರೈತರ ಪರಿಶ್ರಮದಿಂದ ನಿರ್ಮಾಣ ಮಾಡಲಾಗಿದೆ. ಇದೀಗ ಕೆರೆಗೆ 75 ವರ್ಷಗಳು ತುಂಬುತ್ತಿದ್ದು. ಒಂದು ವಾರದಿಂದ ದಿನ ನಿತ್ಯ ಸುರಿಯುತ್ತಿವ ಮಳೆಗೆ ವರ್ಷದಿಂದ ವರ್ಷಕ್ಕೆ ಮೂರನೇ ಸಲ ಕೆರೆ ತುಂಬಿ ಕೋಡಿಯಾಗಿ ಮೈದುಂಬಿ ಹರಿಯುತ್ತಿದೆ.
ಹಲವಾರು ಹಳ್ಳಿಗಳಿಂದ ದಿನನಿತ್ಯ ನೂರಾರು ಜನರ ಭೇಟಿ:
ಇರಕಸಂದ್ರ ಕೆರೆ ಮೈದುಂಬಿ ಹರಿಯುತ್ತಿರುವ ಹಿನ್ನೆಲೆ ಕೊರಟಗೆರೆ ತಾಲೂಕಿನ ಬಹುತೇಕ ಹಳ್ಳಿಗಳಿಂದ ರಮಣೀಯ ದೃಶ್ಯವನ್ನು ನೋಡಲು ಕೋಳಾಲ ಹೋಬಳಿ ಹಾಗೂ ಹೋಳವನಹಳ್ಳಿ ಹೋಬಳಿಯ ಬಹುತೇಕ ಹಲವಾರು ಹಳ್ಳಿಗಳಿಂದ ಹತ್ತಿರದಿಂದ ಕಣ್ತುಂಬಿಕೊಳ್ಳಲು ಸಾಲು ಸಾಲಾಗಿ ರೈತರು ಹಾಗೂ ಕುಟುಂಬ ಸಮೇತ ಜನರು ಬರುತ್ತಿದ್ದಾರೆ.
ಹಾಲವಾರು ಹಳ್ಳಿಗಳ ರೈತರ ಜೀವನಾಡಿ ಇರಕ ಸಂದ್ರ ಕೆರೆ: ದಿನನಿತ್ಯ ರೈತರು ಪಶು ಸಂಗೋಪನೆ ಹಾಗೂ ತೋಟಗಾರಿಕೆ ಕೃಷಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದು. ಅದರಲ್ಲೂ ಬಹುತೇಕ ಅಡಿಕೆ ಹಾಗೂ ತೆಂಗಿನ ತೋಟಗಳು ಸಾವಿರಾರು ಎಕ್ಕರೆ ಇದ್ದು ನೀರಿಗಾಗಿ ಇರಕಸಂದ್ರ ಕೆರೆಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಕೆರೆ ತುಂಬಿ ಹರಿದರೆ 5 ರಿಂದ 8 ಕಿಲೋಮೀಟರ್ ವರೆಗೆ ಸರ್ಕಾರದಿಂದ ರೈತರ ಹಾಗೂ ಪ್ರಾಣಿ ಪಕ್ಷಿಗಳ ಅನುಕೂಲಕ್ಕಾಗಿ ಹಲವಾರು ಚೆಕ್ ಡ್ಯಾಮ್ ಗಳನ್ನು ನಿರ್ಮಾಣ ಮಾಡಿದ್ದು. ಹಲವಾರು ಕೊಳವೆಬಾವಿ ಬೋರುಗಳಿಗೆ ರೈತರಿಗೆ ಬಹುತೇಕ ನೆರವಾಗಲಿದೆ. ಇದೇ ಮಾರ್ಗವಾಗಿ ಚೆಕ್ ಡ್ಯಾಮ್ ದಾಟಿಕೊಂಡು ಗೊರವನಹಳ್ಳಿ ಕೆರೆಗೆ ನೀರು ಹರಿಯುತ್ತದೆ. ತದನಂತರ ಚಿಕ್ಕವಳ್ಳಿಕೆರೆ ತುಂಬಿ ಹೋಳವನಹಳ್ಳಿ ಮಾರ್ಗವಾಗಿ ಹಲವಾರು ಕೆರೆಗಳನ್ನು ತುಂಬಿ ಆಂಧ್ರದ ಪರಿಗಿ ಕೆರೆಗೆ ಸೇರುತ್ತದೆ.
ಕೆರೆಯ ವಿಶೇಷತೆ: ಈ ಕೆರೆಯ ಕೋಡಿಯು ಕುದುರೆಯ ಲಾಳದಂತೆ ಆಕಾರವಿದ್ದು. ನಮ್ಮಭಾರತ ದೇಶದ ಎರಡನೇ ಕೊಡಿಯ ಆಕಾರ ವಾಗಿದೆ ಈ ಕೆರೆಗೆ ಎಷ್ಟೇ ಹಿಂಬದಿಯಿಂದ ನೀರು ಬಂದರೂ ಇದುವರೆಗೂ ಯಾವುದೇ ಅಡಚಣೆ ಪರಿಣಾಮಗಳು ಹಾಗಿಲ್ಲ ಅತಿ ಹೆಚ್ಚು ನೀರು ಬಂದರೆ ಸುತ್ತಲು ನೀರು ಹೊರಗೆ ಹೋಗುವುದಕ್ಕೆ ಕುದುರೆ ಲಾಳದ ಆಕಾರದಲ್ಲಿ ನಿರ್ಮಾಣ ಮಾಡಲಾಗಿದೆ. ಹಾಗೂ ಈ ಕೆರೆ ಹಲವಾರು ಸಲ ತುಂಬಿ ಕೋಡಿಯಾಗಿದ್ದು. ಮಂಗಳವಾರ ಹಾಗೂ ಶುಕ್ರವಾರ ಮಾತ್ರ ಇದುವರೆಗೂ ಕೆರೆ ತುಂಬಿ ಕೋಡಿ ಬೀಳುವುದು. ಎಂದೂ ಜನರ ನಂಬಿಕೆಯಾಗಿದೆ.