ತುಮಕೂರು : ನಗರದ ಅಮಾನಿಕೆರೆ ಮುಂಭಾಗದಲ್ಲಿರುವ ಕನ್ನಡ ಭವನ ಕಟ್ಟಡದಲ್ಲಿ ತುಮಕೂರು ನಗರದಲ್ಲಿ ಸುರಿದ ಮಳೆ ಬಂದ ಪರಿಣಾಮ ಮೀನು ಹಿಡಿಯಲು ಮುಂದಾದ ಯುವಕರು.
ನಗರದಲ್ಲಿ ಕಳೆದ ವಾರ ಸುರಿದ ಭಾರಿ ಮಳೆಗೆ ಕನ್ನಡ ಭವನದ ಕಾಂಪೌಂಡ್ ನಲ್ಲಿ ಇರುವ ತಗ್ಗು ಪ್ರದೇಶದಲ್ಲಿ ನೀರು ನಿಂತಿದ್ದು, ಅದರಲ್ಲಿ ಮೀನು ಹಿಡಿಯುವಲ್ಲಿ ಚಿಣ್ಣರು ಮುಂದಾಗಿದ್ದು ಮನಮೋಹಕರ ದೃಶ್ಯವಾಗಿ ಭಾಸವಾಯಿತು.
ಈ ಜಾಗದ ಕುರಿತು ಕಳೆದ 06 ತಿಂಗಳ ಹಿಂದೆಯಷ್ಟೇ ಸಂಬಂಧಿಸಿದವರ ಗಮನಕ್ಕೆ ತರಲಾಗಿದ್ದರೂ ಸಹ ಈ ಕುರಿತು ಗಮನಹರಿಸದೇ ಬೇಜಾವಾಬ್ದಾರಿಯಿಂದ ಬಿಟ್ಟಿರುವುದು ಇದಕ್ಕೆ ಸಾಕ್ಷಿಯಾಗಿದೆ, ಜೊತೆಗೆ ಮಹಾನಗರ ಪಾಲಿಕೆ ಹಾಗೂ ಸರ್ಕಾರವು ಸಹ ಯಾವುದೇ ಸರ್ಕಾರಿ ಅಥವಾ ಖಾಸಗಿ ಜಾಗದಲ್ಲಿ ಮಳೆ ನೀರು ನಿಲ್ಲಲು ಬಿಡಬಾರದು ಎಂಬ ಆದೇಶವಿದ್ದರೂ ಸಹ ಇವರುಗಳಿಗೆ ಯಾವುದೇ ಆದೇಶ ಪರಿಪಾಲನೆ ಮಾಡುವ ಅಗತ್ಯವಿಲ್ಲವೇನೋ ಎಂಬಂತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶದಂತೆ ಪಾಲಿಕೆಯ ವತಿಯಿಂದ ಎಷ್ಟು ದಂಡ ವಿಧಿಸುತ್ತಾರೋ ಕಾದು ನೋಡಬೇಕಿದೆ.
ಇಲ್ಲಿ ನಿಂತಿರುವ ನೀರಿನಿಂದ ಯಾರಿಗೂ ಸಹ ಡೆಂಗ್ಯೂ ಸೇರಿ ಇತ್ಯಾದಿ ಖಾಯಿಲೆಗಳು ಹರಡದೇ ಇದ್ದರೇ ಅದೇ ಮಾಹಾ ಭಾಗ್ಯ