ಶಾಸ್ತ್ರ : ಈ ವಿಧಿಗಳನ್ನು ನಮ್ಮ ಪಿತೃಗಳಿಗೆ ಗತಿ ಸಿಗಬೇಕೆಂದು ಮಾಡಲಾಗುತ್ತದೆ. ಇದಕ್ಕಾಗಿ ಪ್ರತಿಯೊಬ್ಬರು ತಮ್ಮ ವಾರ್ಷಿಕ ಉತ್ಪನ್ನದ ಹತ್ತನೆಯ ಒಂದಂಶ ಭಾಗವನ್ನು ಖರ್ಚು ಮಾಡಬೇಕು ಎಂದು ಶಾಸ್ತ್ರವು ಹೇಳುತ್ತದೆ. ನಮ್ಮ ಶಕ್ತಿಗನುಸಾರ ಖರ್ಚು ಮಾಡಿದರೂ ಆಗುತ್ತದೆ.
ಈ ವಿಧಿಗಳನ್ನು ಯಾರು ಮಾಡಬಹುದು ?
ಇವು ಕಾಮ್ಯವಿಧಿಗಳಾಗಿವೆ. ಇವುಗಳನ್ನು ಯಾರು ಬೇಕಾದರೂ ಮಾಡಬಹುದು. ಯಾರ ತಂದೆ-ತಾಯಿ ಜೀವಂತವಾಗಿದ್ದಾರೆಯೋ, ಅವರೂ ಸಹ ಈ ವಿಧಿಗಳನ್ನು ಮಾಡಬಹುದು. ಅವಿವಾಹಿತರೂ ಸಹ ಒಬ್ಬರೇ ಈ ವಿಧಿಗಳನ್ನು ಮಾಡಬಹುದು. ವಿವಾಹಿತರಾಗಿದ್ದಲ್ಲಿ ಪತಿ-ಪತ್ನಿ ಇಬ್ಬರೂ ಕುಳಿತುಕೊಂಡು ಈ ವಿಧಿಗಳನ್ನು ಮಾಡಬೇಕು.
ನಿಷೇಧ
ಅ. ಸ್ತ್ರೀಯರು ಮಾಸಿಕ ಸರದಿಯ ಸಮಯದಲ್ಲಿ ಈ ವಿಧಿಗಳನ್ನು ಮಾಡಬಾರದು.
ಆ. ಸ್ತ್ರೀಯು ಗರ್ಭವತಿಯಾಗಿದ್ದಲ್ಲಿ ೫ ತಿಂಗಳು ಆದ ನಂತರ ಈ ವಿಧಿಗಳನ್ನು ಮಾಡಬಾರದು.
ಇ. ಮನೆಯಲ್ಲಿ ಶುಭಕಾರ್ಯ ಅಂದರೆ ಮದುವೆ, ಉಪನಯನ ಮುಂತಾದವುಗಳು ಆಗಿದ್ದಲ್ಲಿ ಅಥವಾ ಮನೆಯಲ್ಲಿ ಯಾರಾದರೊಬ್ಬ ವ್ಯಕ್ತಿಯು ಮೃತನಾಗಿದ್ದಲ್ಲಿ ಈ ವಿಧಿಗಳನ್ನು ಒಂದು ವರ್ಷದವರೆಗೆ ಮಾಡಬಾರದು.
ಪದ್ಧತಿ : ವಿಧಿಗಳನ್ನು ಮಾಡಲು ಪುರುಷರಿಗೆ ಧೋತರ, ಉಪವಸ್ತ್ರ, ಬನಿಯನ್ ಮತ್ತು ಮಹಿಳೆಯರಿಗೆ ಸೀರೆ, ರವಿಕೆ ಮತ್ತು ಲಂಗ ಮುಂತಾದ ಹೊಸ ಬಟ್ಟೆಗಳು (ಕಪ್ಪು ಮತ್ತು ಹಸಿರು ಬಣ್ಣ ಇರಬಾರದು) ಬೇಕಾಗುತ್ತವೆ. ಈ ಹೊಸ ಬಟ್ಟೆಗಳನ್ನು ಧರಿಸಿ ವಿಧಿಯನ್ನು ಮಾಡಬೇಕಾಗುತ್ತದೆ. ಅನಂತರ ಆ ಬಟ್ಟೆಗಳನ್ನು ದಾನ ಮಾಡಬೇಕಾಗುತ್ತದೆ. ಮೂರನೆಯ ದಿನ ಬಂಗಾರದ ನಾಗನ (೧.೨೫ ಗ್ರಾಂ.) ಒಂದು ಪ್ರತಿಮೆಯನ್ನು ಮಾಡಿ ಪೂಜಿಸಿ ದಾನ ಮಾಡುತ್ತಾರೆ.
ವಿಧಿಗಳಿಗಾಗಿ ತಗಲುವ ಸಮಯ : ಮೇಲಿನ ಮೂರೂ ವಿಧಿಗಳು ಬೇರೆ ಬೇರೆ ವಿಧಿಗಳಾಗಿವೆ. ನಾರಾಯಣ-ನಾಗಬಲಿ ವಿಧಿಗೆ ಮೂರು ದಿನಗಳು ತಗಲುತ್ತವೆ ಮತ್ತು ತ್ರಿಪಿಂಡಿ ಶ್ರಾದ್ಧವಿಧಿಯು ಒಂದು ದಿನದ ವಿಧಿಯಾಗಿದೆ. ಮೇಲಿನ ಮೂರೂ ವಿಧಿಗಳನ್ನು ಮೂರು ದಿನಗಳಲ್ಲಿ ಮಾಡಬಹುದು. ಸ್ವತಂತ್ರವಾಗಿ ಒಂದು ದಿನದ ವಿಧಿಯನ್ನು (ತ್ರಿಪಿಂಡಿ ಶ್ರಾದ್ಧ) ಮಾಡಬೇಕಾದಲ್ಲಿ ಹಾಗೆಯೂ ಮಾಡಬಹುದು.
ಸಂಗ್ರಹ
ಶ್ರೀ. ವಿನೋದ ಕಾಮತ್,
ರಾಜ್ಯ ವಕ್ತಾರರು, ಸನಾತನ ಸಂಸ್ಥೆ
(ಸಂಪರ್ಕ : ೯೩೪೨೫೯೯೨೯೯)