ತುಮಕೂರು : ಕಳೆದ 13 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಐಇಸಿ ಸಮಾಲೋಚಕರು ಸ್ವಚ್ಚ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿಯಲ್ಲಿ ಜಿಲ್ಲಾ ಪಂಚಾಯಿತಿ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ರವಿಕುಮಾರ್ ಎಂಬುವವರ ಮೇಲೆ ತುಮಕೂರು ಜಿಲ್ಲಾ ಪಂಚಾಯಿತಿ ಸಿ.ಇ.ಓ. ಜೆ.ಪ್ರಭು ರವರು ಹಲ್ಲೇ ಮಾಡಿದ್ದಾರೆಂದು ಹೇಳಲಾಗಿದೆ. ಈ ಕುರಿತು ತುಮಕೂರು ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿಯೂ ಸಹ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ನಗರದ ತಿಲಕ್ಪಾರ್ಕ್ ವೃತ್ತದ ಪೊಲೀಸ್ ಇನ್ಸ್ ಪೆಕ್ಟರ್ ರವರಿಗೆ ರವಿಕುಮಾರ್ ಎಂ.ಬಿ. ಬಿನ್ ಬಿದರಯ್ಯ 40 ವರ್ಷ, ಜಿಲ್ಲಾ ಐಇಸಿ ಸಮಾಲೋಚಕರು ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಗುತ್ತಿಗೆ ಅಧಾರದ ಮೇಲೆ ಕೆಲಸ, ಜಿಲ್ಲಾಪಂಚಾಯಿತಿ, ವಾಸ: ವೀರಸಾಗರ 4 ನೇಕ್ರಾಸ್ ಮೇಳೆಕೋಟೆ ರಸ್ತೆ, ತುಮಕೂರು ಎಂಬುವವರು ತಮಗೆ ಜಿಲ್ಲಾ ಪಂಚಾಯಿತಿ ಸಿ.ಇ.ಓ. ರವರು ನಿರಂತರ ತೇಜೋವಧೆ ಜೊತೆಗೆ ವೈಯುಕ್ತಿಕ ದ್ವೇಷವನ್ನು ಸಹ ಬೆಳಸಿಕೊಂಡು ನನಗೆ ನಿತ್ಯ ಕಿರುಕುಳ ನೀಡುತ್ತಾ ಬರುತ್ತಿದ್ದರು ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೂ ಪ್ರಭು ರವರು ತಮ್ಮ ಮೇಲೆ ಎಷ್ಟೇ ದ್ವೇಷ ಕಾರಿದರು ಅವರು ತನ್ನ ಮೇಲಧಿಕಾರಿಗಳು ಎಂಬ ಗೌರವದಿಂದ ನಾನು ಅವರು ಹೇಳಿದ ಕೆಲಸಗಳನ್ನು ಹಾಗೂ ನನ್ನ ಕಛೇರಿಯಲ್ಲಿನ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾಗ್ಯೂ ಸ್ವಚ್ಚ ಭಾರತ್ ಮಿಷನ್ ಗ್ರಾಮೀಣ ಯೋಜನೆಗೆ ಸಂಭಂದಪಟ್ಟ ಎಲ್ಲಾ ಘಟಕಾಂಶಗಳನ್ನು ಒಳಗೊಂಡಂತೆ ನೈರ್ಮಲ್ಯ ಆರೋಗ್ಯವರ್ಧಕ ಮನಸ್ಸುಗಳ ದಿಕ್ಯೂಚಿ ಎಂಬ ಪುಸ್ತಕವನ್ನು ಬರೆದಿದ್ದು ಇದರ ಮುನ್ನುಡಿಯನ್ನು ಬರೆಸಲು ಸಿಇಒ ರವರ ಬಳಿ ಹೋದಾಗ ಪುಸ್ತಕ ಬರೆದ ಬಗ್ಗೆ ಅವಹೇಳನ ಮಾಡಿದ್ದಲ್ಲದೇ ಪುಸ್ತಕ ಬಿಡುಗಡೆ ಸಮಾರಂಭಕ್ಕಾಗಿ ನಮ್ಮ ಗುರುಗಳೊಂದಿಗೆ ಸಿಇಒ ರವರ ಸರ್ಕಾರಿ ನಿವಾಸ ಭೇಟಿ ನೀಡಿದಾಗ ಅಲ್ಲಿಯೂ ಕೂಡ ನಮ್ಮ ಗುರುಗಳಿಗೂ ಸಹ ನೀವು ಒಬ್ಬ ಪ್ರೋಪೆಸರ್ ಆಗಿ ಈ ತರ ಪುಸ್ತಕವನ್ನು ಬರೆದುಕೊಂಡು ಓಡಾಡುವುದನ್ನು ಹೇಳಿಕೊಟ್ಟಿದ್ದೀರಾ ಪುಸ್ತಕ ಬರೆದು ತಕ್ಷಣ ದೇಶ ಉದ್ಧಾರ ಆಗುತ್ತದೆಯೇ, ಇವನ ಪರವಾಗಿ ವಕಾಲತ್ತು ವಹಿಸಿಕೊಂಡು ಬಂದಿರುತ್ತೀರಾ ಎಂದು ಸಹ ತನ್ನ ಗುರುಗಳ ಮುಂದೆಯೇ ನಿಂದಿಸಿರುತ್ತಾರೆ.
ನಂತರ ದಿನಾಂಕ 12.09.2024 ರಂದು ಮದ್ಯಾಹ್ನ 1.30 ಗಂಟೆಯಿಂದ ಕರ್ನಾಟಕ ರಾಜ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯರವರ ಅಧ್ಯಕ್ಷತೆಯಲ್ಲಿ ಅಯೋಜನೆಯಾಗಿದ್ದ ಸ್ವಚ್ಚತಾ ಹಿ-ಸೇವಾ ಅಂದೋಲನ ಅನುಷ್ಠಾನಕ್ಕೆ ಸಂಬಂದಪಟ್ಟಂತೆ ಜಿಲ್ಲಾ ಪಂಚಾಯಿತಿ ಕಛೇರಿಯಲ್ಲಿ ವಿಡಿಯೋ ಸಂವಾದ ಇದ್ದು ಈ ಸಂವಾದ ಕಾರ್ಯಕ್ರಮದಲ್ಲಿ ರವಿಕುಮಾರ್ ಸೇರಿಂದತೆ ಕಛೇರಿಯ ಮುಖ್ಯಯೋಜನಾಧಿಕಾರಿ ಹಾಗೂ ಜಿಲ್ಲಾ ನೋಡಲ್ ಅಧಿಕಾರಿಗಳು ಭಾಗವಹಿಸಿರುತ್ತಾರೆ. ಈ ಸಂರ್ದಭದಲ್ಲಿ ಸಿಇಒ ರವರು ಮುಖ್ಯ ಯೋಜನಾಧಿಕಾರಿಗಳ ಕುರಿತು ರವಿಕುಮಾರ್ ರವರ ವಿರುದ್ದ ಕ್ರಮ ಕೈಗೊಂಡ ಬಗ್ಗೆ ಕಡತವನ್ನು ಇಲ್ಲಿಯವರೆಗೆ ಯಾಕೆ ಸಲ್ಲಿಸಿರುವುದಿಲ್ಲ ಎಂದು ಅವರನ್ನು ನಿಂದಿಸಿ, ನಂತರ ವ್ಯವಸ್ಥಾಪಕಿ ಆದ ಶ್ರೀಮತಿ ಚಂದ್ರಕಲಾ ರವರನ್ನು ಕುರಿತು ನಿಮ್ಮನ್ನು ನೇಮಿಸಿರುವುದೇ ಈ ಉದ್ದೇಶಕ್ಕೆ ನಿಮಗೆ ಈ ಬಗ್ಗೆ ಎಷ್ಟು ಸಾರಿ ಸೂಚನೆ ನೀಡುವುದು ಎನ್ನುತಾ, ಎಂಐಎಸ್ ಸಮಾಲೋಚಕಿ ವಿನುತಾ ರವರನ್ನು ಕುರಿತು ಟಾರ್ಗೆಟ್ನ್ನು ಪಟ್ಟಿ ಮಾಡಿ ಡಮ್ಮಿ ಐಇಸಿ ನೀಡಿ ಎಂದು ಮತ್ತೊಮ್ಮೆ ರವಿಕುಮಾರ್ ಅವರನ್ನು ನಿಂದಿಸಿರುತ್ತಾರೆ.
ನಂತರ ರವಿಕುಮಾರ್ ರವರು ಸಿಇಒ ಪ್ರಭು ರವರನ್ನು ತನ್ನ ಮೇಲೆ ಯಾವಾಗಲೂ ಏಕೆ ವೈಯಕ್ತಿಕವಾಗಿ ನಿಂದಿಸಿ ದ್ವೇಷ ಸಾಧಿಸಿರುತ್ತಿರಾ ಎಂತಾ ಕೇಳಿದ ತಕ್ಷಣ ಪ್ರಭು ರವರು ಗರಂ ಆಗಿ ತಮ್ಮ ಖುರ್ಚಿಯನ್ನು ತಳ್ಳಿ ರವಿಕುಮಾರ್ ಮೇಲೆ ದೈಹಿಕವಾಗಿ ಹಲ್ಲೆ ಮಾಡಲಾಗಿರುತ್ತದೆ ಎಂಬುದಾಗಿ ದೂರನ್ನು ಸಲ್ಲಿಸಿರುತ್ತಾರೆ, ನಂತರ ಅವರ ಈ ನಡವಳಿಕೆಯಿಂದ ಪ್ರಜ್ಞೆ ತಪ್ಪಿದ್ದು ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಸಹ ಪಡೆದು ನಂತರ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿರುವುದಾಗಿ ರವಿಕುಮಾರ್ ರವರು ದೂರನ್ನು ಸಲ್ಲಿಸಿದ್ದು, ಈ ಪ್ರಕರಣವು ಎಲ್ಲಿಗೆ ಬರುತ್ತದೋ ತಿಳಿಯದು. ಏಕೆಂದರೆ ಒಬ್ಬ ಐ.ಎ.ಎಸ್. ಅಧಿಕಾರಿಗಳು ಈ ರೀತಿಯಾಗಿ ವರ್ತನೆ ಮಾಡುವುದು ಎಂದರೆ ಎಲ್ಲರಿಗೂ ಆಶ್ಚರ್ಯಕರ ಸಂಗತಿಯಾಗಿದೆ.
ಯಾವುದು ಏನೇ ಆದರೂ ಸತ್ಯವಂತು ಒಂದಲ್ಲಾ ಒಂದು ದಿನ ಆಚೆಗೆ ಬರುತ್ತದೆ, ಅಲ್ಲಿಯವರೆಗೂ ಕಾಯಬೇಕು ಅಷ್ಟೇ ಅಲ್ಲವೇ !?