ಗ್ರಾಮಸ್ಥರ ಒಗ್ಗೂಡುವಿಕೆಯಿಂದ ಚಿಂಪುಗಾನಹಳ್ಳಿ ಸರ್ಕಾರಿ ಶಾಲೆಗೆ ಕಳೆ ಬಂದಿದೆ : ಡಾ.ಹನುಮಂತನಾಥ ಸ್ವಾಮೀಜಿ.

 

 

 

 

 

 

 

ತುಮಕೂರು: ಆಧುನಿಕ ಶಿಕ್ಷಣ ವ್ಯವಸ್ಥೆಯ ಭರಾಟೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ನಿಟ್ಟಿನಲ್ಲಿ ಅತ್ಯುನ್ನತ ಸೌಲಭ್ಯಗಳೊಳ್ಳ ಖಾಸಗಿ ಶಾಲೆಗಳಿಗೆ ಒಗಿಕೊಳ್ಳುತ್ತಿರುವುದು ವಿಪರ್ಯಾಸವಾಗಿದ್ದು ಇತ್ತ ಸರ್ಕಾರಿ ಶಾಲೆಗಳು ಅವನತಿಯತ್ತ ಸಾಗುತ್ತಿದೆ ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಒಗ್ಗೂಡುವಿಕೆಯಿಂದ ಸರ್ಕಾರಿ ಶಾಲೆಯಲ್ಲಿ ವಿಘ್ನ ನಿವಾರಕ ಗಣಪತಿಯ ವಿಗ್ರಹ ಪ್ರತಿಷ್ಠಾಪನೆ ಮಾಡುವ ಮೂಲಕ ಚಿಂಪುಗಾನಹಳ್ಳಿಯ ಗ್ರಾಮಸ್ಥರು ಸರ್ಕಾರಿ ಶಾಲೆಗೆ ಕಳೆ ತಂದು ಕೊಟ್ಟಿರುವುದು ಶ್ಲಾಘನೀಯವೆಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಡಾ. ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ ಅವರು ತಿಳಿಸಿದರು.

 

 

 

 

 

ಕೊರಟಗೆರೆ ತಾಲೂಕಿನ ಹೊಳವನಲ್ಲಿ ಹೋಬಳಿ ವ್ಯಾಪ್ತಿಯ ಚಿಂಪುಗಾನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆಡಳಿತ ಮಂಡಳಿ, ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಗ್ರಾಮಸ್ಥರ ಸಹಯೋಗದೊಂದಿಗೆ ಸರ್ಕಾರಿ ಶಾಲಾ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ವಿನಾಯಕ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮಸ್ಥರು ಮತ್ತು ಮಕ್ಕಳಿಗೆ ಆಶೀರ್ವಚನಾ ನೀಡುತ್ತಾ ಮಾತನಾಡಿದ ಶ್ರೀಗಳು ಇಂದು ಅನೇಕ ಕಡೆಗಳಲ್ಲಿ ಸರ್ಕಾರಿ ಶಾಲೆಗಳು ಮಯಾವಾಗುತ್ತಿವೆ ನಿವೇಶನ, ಕಟ್ಟಡ, ಶಿಕ್ಷಕರು, ಸಿಬ್ಬಂದಿ ಕೊರತೆ ಸೇರಿದಂತೆ ಅನೇಕ ಕಾರಣಗಳಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತಿಲ್ಲವೆಂದು ಪೋಷಕರುಗಳು ಖಾಸಗಿ ಮತ್ತು ಆಂಗ್ಲ ಶಾಲೆಗಳ ಮೊರೆ ಹೋಗುತ್ತಿದ್ದಾರೆ ಈ ನಡುವೆ ಚಿಂಪುಗಾನಳ್ಳಿಯ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಗ್ರಾಮಸ್ಥರು ಒಟ್ಟಿಗೆ ಸೇರಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಸೇರಿದಂತೆ ಮಕ್ಕಳ ಕಲಿಕೆಗೆ ಪೂರಕವಾದಂತಹ ಸೌಲಭ್ಯಗಳನ್ನು ಕೊಡಿಸುವಲ್ಲಿ ಕಾರಣಿಭೂತರಾಗಿದ್ದಾರೆ, ಚಿಂಪುಗಾನಹಳ್ಳಿಯ ಈ ಸರ್ಕಾರಿ ಶಾಲೆಯಲ್ಲಿ ಓದಿದ ಅನೇಕರು ಇಂದು ಶಿಕ್ಷಕರು, ತಂತ್ರಜ್ಞರು, ಪತ್ರಕರ್ತರು ಸೇರಿದಂತೆ ಇತರೆ ವಲಯಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಇನ್ನೂ ಕೆಲವರು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಬಿಡುವಿನ ಸಮಯದಲ್ಲಿ ಶಾಲೆಯ ವಾತಾವರಣ, ಮಕ್ಕಳ ಬೌದ್ದಿಕ ಕಲಿಕೆ, ಬಗ್ಗೆ ಗಮನ ಕೊಡುತ್ತಾ ಶಿಕ್ಷಕರುಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

 

 

 

 

 

 

ಹರ ಮುನಿದರೆ ಗುರು ಕಾಯುವನು ಎಂಬ ಗಾದೆಯಂತೆ ಸರ್ಕಾರಿ ಶಾಲೆಯ ಮಕ್ಕಳು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮವಾದ ಸಾಧನೆ ಮಾಡುತ್ತಿದ್ದಾರೆ ಹಾಗಾಗಿ ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ದಾಖಲಾತಿ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು ಈ ನಿಟ್ಟಿನಲ್ಲಿ ನಮ್ಮ ಶ್ರೀ ಮಠದ ವತಿಯಿಂದ ಸರ್ಕಾರಿ ಶಾಲೆಗಳ ಉಳಿವಿಗಾಗಿ ಪೋಷಕರೇ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಗ್ರಾಮೀಣ ಭಾಗದ ಬಡ ಮಕ್ಕಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪೂರಕವಾಗುವಂತೆ ಮಠದ ವತಿಯಿಂದ ಸಹಕಾರ, ಸ್ಕಾಲರ್, ಸೇರಿದಂತೆ ಹಾಸ್ಟಲ್ ವ್ಯವಸ್ಥೆ ಕಲ್ಪಿಸಲಾಗುವುದು ಈ ಭಾಗದ ಜನರು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿದರು.

 

 

 

 

 

 

ಕೊರಟಗೆರೆ ತಾಲೂಕಿನಲ್ಲಿಯೇ ಮೊದಲು ಗ್ರಾಮ ಮಟ್ಟದಲ್ಲಿ ಜನರು ಜಾತಿ ಭೇದ ಮರೆತು ಸರ್ಕಾರಿ ಶಾಲೆಗಳಲ್ಲಿ ವಿವಿಧ ರೀತಿಯ ಸಂಸ್ಕಾರ ಬೆಳೆಸುವ ವಿದ್ಯಾರ್ಥಿಗಳಿಗೆ ದೇವರ ಬಗ್ಗೆ ನಂಬಿಕೆ ಮತ್ತು ಭಕ್ತಿ ಮೂಡಿಸುವ ಕೆಲಸ ಮಾಡಿದ್ದು ಚಿಂಪುಗಾನಹಳ್ಳಿ ಗ್ರಾಮದ ಗ್ರಾಮಸ್ಥರನ್ನ ಮಾದರಿಯನ್ನಾಗಿ ತೆಗೆದುಕೊಳ್ಳುವ ಇತರೆ ಗ್ರಾಮಗಳು ಸರ್ಕಾರಿ ಶಾಲಾ ವಲಯದಲ್ಲಿ ಸೌಲಭ್ಯ, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಇತರೆ ಸಹಕಾರಗಳನ್ನ ನೀಡುತ್ತಾ ಶಾಲೆಯ ಶಿಕ್ಷಕರ ನಡುವೆ ಪೋಷಕರು ಉತ್ತಮ ಬಾಂಧವ್ಯ ಹೊಂದಿ ಶಾಲೆಯ ಅಭಿವೃದ್ಧಿ ಶ್ರಮಿಸಬೇಕು ಎಂದರು.

 

 

 

 

 

 

ಶಾಲಾ ಮುಖ್ಯೋಪಾಧ್ಯಾಯರಾದ ಹನುಮಂತರಾಯಪ್ಪ ಅವರು ಮಾತನಾಡಿ ಗ್ರಾಮದ ಗ್ರಾಮಸ್ಥರು ಹಿಂದಿನಿಂದಲೂ ಅನೇಕ ರೀತಿಯ ಸಹಾಯ, ಸಹಕಾರ ಮಾಡುತ್ತಾ ಬಂದಿದ್ದು ಶಾಲೆಗೆ ನಿವೇಶನ ಜಾಗ ಸೇರಿದಂತೆ ಅನೇಕ ದಾನಗಳನ್ನು ಗ್ರಾಮಸ್ಥರು ನೀಡಿದ್ದಾರೆ ಈ ನಿಟ್ಟಿನಲ್ಲಿ ಶಾಲಾ ವಾತಾವರಣದಲ್ಲಿ ಮಕ್ಕಳಿಗೆ ಕಲಿಕೆಯ ಜೊತೆಗೆ ಭಕ್ತಿ ಭಾವನೆಯ ಭಾವ ಮೂಡಿಸಲು ವಿನಾಯಕನ ಪ್ರತಿಮೆಯನ್ನು ಸ್ಥಾಪಿಸಲು ಸಹಶಿಕ್ಷಕರೊಂದಿಗೆ ಚಿಂತನೆ ನಡೆಸಿದಾಗ ಎಸ್ ಡಿ ಎಂ ಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿ ಇಂದು ಇಡೀ ತಾಲೂಕಿನಲ್ಲಿ ಜನರು ಮೆಚ್ಚುವಂತಹ ಉತ್ತಮ ಕಾರ್ಯವನ್ನು ಮಾಡಿದ್ದು ಇದು ನಮಗೆ ಸಂತಸ ತಂದಿದ್ದು ಇದೇ ರೀತಿಯಾಗಿ ಗ್ರಾಮಸ್ಥರು ಸರ್ಕಾರಿ ಶಾಲೆಗೆ ಸಹಕರಿಸಬೇಕು ಎಂದರು.

 

 

 

 

ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಸಿ.ಆರ್. ರಾಜಣ್ಣ ಅವರು ಮಾತನಾಡಿ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಕಾಲಘಟ್ಟದಲ್ಲಿ ಸರ್ಕಾರಿ ಶಾಲೆಯ ವಾತಾವರಣದಲ್ಲಿ ಗ್ರಾಮಸ್ಥರು ಒಂದು ಒಳ್ಳೆಯ ಉತ್ತಮ ಬಾಂಧವ್ಯದೊಂದಿಗೆ ಸೇರಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿ ಶಿಕ್ಷಕರೊಂದಿಗೆ ಉತ್ತಮ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ನಮ್ಮ ಚಿಂಪುಗಾನಹಳ್ಳಿ ಗ್ರಾಮದ ಗ್ರಾಮಸ್ಥರು ಬಾದ್ಯತರಾಗಿದ್ದಾರೆ ಒಂದು ಒಳ್ಳೆಯ ಉತ್ತಮ ಕಾರ್ಯವನ್ನು ಮಾಡಿದ್ದಾರೆ ಎಂದು ತಿಳಿಸಿದರು.

 

 

 

 

 

ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಿ.ಬಿ ರಂಗರಾಜು ಮಾತನಾಡಿ ಅನೇಕ ವರ್ಷಗಳಿಂದ ನಮ್ಮ ಸರ್ಕಾರಿ ಶಾಲೆಯಲ್ಲಿ ಒಂದು ಒಳ್ಳೆಯ ಕಾರ್ಯಕ್ರಮವನ್ನು ರೂಪಿಸುವ ಕುರಿತಾಗಿ ಚರ್ಚೆಗಳು ನಡೆಸುತ್ತಿದ್ದವು, ಇದೀಗ ಗೌರಿ ಗಣೇಶ ಹಬ್ಬ ಹತ್ತಿರವಾಗುವ ಸನಿಹದಲ್ಲಿಯೇ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ವಿದ್ಯಾರ್ಥಿಗಳಿಗೆ ಒಳ್ಳೆಯ ವಿದ್ಯಾ, ಬುದ್ಧಿ ಕೊಡುವಂತೆ ಗಣೇಶನನ್ನು ಪ್ರಾರ್ಥಿಸಿ ಊರಿನ ಎಲ್ಲಾ ನಮ್ಮ ಅಣ್ಣ ತಮ್ಮಂದಿರೊಂದಿಗೆ ಜನರಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಸರ್ಕಾರಿ ಶಾಲೆಗೆ ಒಳಿತು ಬಯಸಿ ಒಂದು ಸಂಭ್ರಮದ ವಾತಾವರಣ ನಿರ್ಮಾಣ ಮಾಡಿದ್ದೇವೆ ಎಂದು ತಿಳಿಸಿದರು.

 

 

 

 

 

ವಿನಾಯಕ ಮೂರ್ತಿಯ ಪ್ರತಿಷ್ಠಾಪನ ದಿನದಿಂದಲೂ ಚಿಂಪುಗಾನಹಳ್ಳಿ ಗ್ರಾಮವು ವಿದ್ಯುತ್ ದೀಪ ಅಲಂಕಾರದಿಂದ ಸಂಭ್ರಮದಿಂದ ಮನೆ ಮಾಡಿತ್ತು, ಕಾರ್ಯಕ್ರಮಕ್ಕೆ ಆಗಮಿಸಿದ ಡಾ.ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ ಅವರನ್ನು ಪೂರ್ಣ ಕುಂಭಮೇಳ ಸ್ವಾಗತದೊಂದಿಗೆ ಗ್ರಾಮ ದೇವತೆ ಮಾರಮ್ಮ ದೇವಾಲಯದಿಂದ ಶಾಲೆಯವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಈ ಸಂದರ್ಭದಲ್ಲಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಮಾಜಿ ಮುಖ್ಯೋಪಾಧ್ಯಾಯರುಗಳು ಉಪಾಧ್ಯಾಯರುಗಳು ಶಿಕ್ಷಕರು ವಿದ್ಯಾರ್ಥಿಗಳು ಪೋಷಕರುಗಳು ಪೂಜಾ ಕೈಗಾರಿಯಲ್ಲಿ ಭಾಗವಹಿಸಿದ್ದರು.

 

 

 

 

ಇದೇ ವೇಳೆ ಶಿಕ್ಷಕರುಗಳಾದ ಅನಂತರಾಮು, ಚಂದ್ರಶೇಖರ್.ಎನ್, ನರಸಿಂಹರಾಜು, ತಿಮಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರುಗಳಾದ ಡಿ ರಂಗಯ್ಯ, ಟಿಪಿ ಕೆಂಪರಾಜು, ಯಜಮಾನ್ ಕೆಂಪರಾಜು, ಅಶ್ವಥಯ್ಯ, ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಬಿಸಿ ದೇವರಾಜು, ಹಾಲಿ ಸದಸ್ಯರುಗಳಾದ ಶಿವಕುಮಾರ್, ಜಗದೀಶ್, ಹರೀಶ್ ಕುಮಾರ್, ಎಸ್ ಡಿ ಎಂ ಸಿ ಸದಸ್ಯರುಗಳಾದ ಚಿಕ್ಕಕಾಟಪ್ಪ ಲಿಂಗಣ್ಣ, ಡಿ ರಮೇಶ್, ಹೊಸ ಹನುಮಂತಯ್ಯ, ರಾಮಣ್ಣ, ಲಕ್ಷ್ಮಿಪತಿ, ಲಕ್ಷ್ಮಿ ಪ್ರಸಾದ್, ಪತ್ರಕರ್ತ ರವಿಕುಮಾರ್ ಸಿಎಚ್, ಶಾಲೆಯ ಅಡುಗೆ ಸಹಾಯಕರು ಸೇರಿದಂತೆ ಚಿಂಪುಗನಹಳ್ಳಿ ಗ್ರಾಮದ ಯಜಮಾನರುಗಳು, ಮುಖ್ಯಸ್ಥರು, ಮುಖಂಡರುಗಳು, ಯುವ ಮುಖಂಡರುಗಳು ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!