ತುಮಕೂರು : ಸ್ವಾತಂತ್ರ್ಯ ಪೂರ್ವದ ದಿನ ಅಂದರೆ ದಿನಾಂಕ 14-08-2024ರಂದು ನಗರದ ಶಾಂತಿನಗರದಲ್ಲಿ ತನ್ನ ಬೆಂಬಲಿಗರು ಹಾಗೂ ಅಭಿಮಾನಿಗಳ ಒತ್ತಾಯದ ಮೇರೆಗೆ ಯುವ ಮುಖಂಡ, ಕರ್ನಾಟಕ ರಾಜ್ಯ ಕಾಡುಗೊಲ್ಲರ ಪರಿಷತ್ನ ಅಧ್ಯಕ್ಷರು, ಕರುನಾಡ ವಿಜಯಸೇನೆಯ ಜಿಲ್ಲಾಧ್ಯಕ್ಷರಾಗಿರುವ ಅರುಣ್ ಕೃಷ್ಣಯ್ಯ ಅದ್ಧೂರಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಅರುಣ್ ಕೃಷ್ಣಯ್ಯನ ಅಪಾರ ಅಭಿಮಾನಿಗಳು ಹುಟ್ಟು ಹಬ್ಬ ಆಚರಣೆಗಾಗಿ ಸಿದ್ಧ ಮಾಡಲಾಗಿದ್ದ ವೇದಿಕೆಯವರೆಗೆ ಕುಣಿಗಲ್ ರಸ್ತೆಯಲ್ಲಿನ ಬನಶಂಕರಿ ವೃತ್ತದಿಂದ ತಮ್ಮ ದ್ವಿಚಕ್ರ ವಾಹನ, ಕಾರುಗಳ ಮೂಲಕ ಬೃಹತ್ ರ್ಯಾಲಿಯನ್ನು ಮಾಡುವುದರ ಮುಖೇನ ಈ ಭಾಗದಲ್ಲಿ ತಮ್ಮ ಶಕ್ತಿ ಪ್ರದರ್ಶನವನ್ನು ಸಹ ಮಾಡಿದರು.
ಹುಟ್ಟು ಹಬ್ಬ ಆಚರಣೆಯು ಸರಿಸುಮಾರು ತಡರಾತ್ರಿಯವರೆಗೆ ನಡೆದಿದ್ದು ಈ ಸಮಾರಂಭದಲ್ಲಿ ಅರುಣ್ ಅವರ ಅಪಾರ ಅಭಿಮಾನಿಗಳು, ಬೆಂಬಲಿಗರು, ಸ್ನೇಹಿತರು, ಹಿತೈಷಿಗಳು, ಮಾಜಿ ಪಾಲಿಕೆ ಸದಸ್ಯರುಗಳನ್ನೊಳಗೊಂಡಂತೆ ನೂರಾರು ಸಂಖ್ಯೆಯಲ್ಲಿ ಹಾಜರಿದಿದ್ದು ಬಹು ವಿಶೇಷವಾಗಿತ್ತು. ಅರುಣ್ ಕೃಷ್ಣಯ್ಯ ನವ ಯುವಕರು ಹಾಗೂ ಸಹೃದಯಿಗಳು ಆಗಿದ್ದು, ಹಲವಾರು ಸಂಘಟನೆಗಳು, ಹೋರಾಟಗಳ ಮೂಲಕ ಗುರುತಿಸಿಕೊಂಡಿದ್ದಾರೆ.
ಒಟ್ಟಾರೆಯಾಗಿ ಈ ಅರುಣ್ ಕೃಷ್ಣಯ್ಯ ಅವರ ಈ ಭಾರಿಯ ಹುಟ್ಟು ಹಬ್ಬ ಸ್ಥಳೀಯರಿಗೆ ಹುಬ್ಬೇರುವಂತೆ ಮಾಡಿದ್ದಂತೂ ಕಟು ಸತ್ಯ !!!!!