ತುಮಕೂರು ಮಂಡಿಪೇಟೆಯಲ್ಲಿ ಸಂಚಾರಿ ಪೊಲೀಸರ ವಿರುದ್ಧ ಪ್ರತಿಭಟನೆ ಮಾಡಿದ ವರ್ತಕರು & ಹಮಾಲಿಗಳು

ತುಮಕೂರು : ನಗರದ ಮಂಡಿಪೇಟೆಯ ಮುಖ್ಯರಸ್ತೆಯಲ್ಲಿ ಸರಕು ಸಾಗಾಣಿಕೆ ವಾಹನಗಳಿಗೆ ನಗರ ಸಂಚಾರಿ ಪೊಲೀಸರು ಎಗ್ಗಿಲ್ಲದೇ ಫೈನ್ ಹಾಕಲಾಗುತ್ತಿದೆ ಹಾಗೂ ಗ್ರಾಹಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬುದಾಗಿ ಇಂದು ಮಂಡಿಪೇಟೆ ವರ್ತಕರ ಸಂಘ ಹಾಗೂ ಹಮಾಲಿ ಸಂಘದ ವತಿಯಿಂದ ರಸ್ತೆ ತಡೆ ಮಾಡಿ ಪ್ರತಿಭಟನೆಯನ್ನು ಮಾಡಿದರು.

 

 

 

 

 

 

 

 

ಈ ಭಾಗದಲ್ಲಿ ಎಲ್ಲಿಯೂ ಸಹ ನೋ ಪಾರ್ಕಿಂಗ್ ನಾಮಫಲಕವಾಗಲೀ, ವೇಗದ ಮಿತಿ ನಾಮಫಲಕವಾಗಲೀ ಇಲ್ಲ, ಜೊತೆಗೆ ಮಂಡಿಪೇಟೆಯೊಳಗೆ ಬೇರೆ ರಾಜ್ಯದ ಸರಕು ಸಾಗಾಣಿಕೆ ವಾಹನಗಳು ಸೇರಿದಂತೆ ಬೇರೆ ಜಿಲ್ಲೆಯ ವಾಹನಗಳು ಪ್ರತಿನಿತ್ಯ ಸರಕು ತೆಗೆದುಕೊಂಡು ಬರುವುದು, ಲೋಡಿಂಗ್ ಮತ್ತು ಅನ್ ಲೋಡಿಂಗ್ ಆದನಂತರ ವಾಪಸ್ಸು ತೆರಳುತ್ತವೆ, ಈ ವಾಹನಗಳು ಯಾವುದೇ ಕಾರಣಕ್ಕೂ ರಸ್ತೆಯ ಮಧ್ಯಭಾಗದಲ್ಲಿ ನಿಲ್ಲುಸುವುದಿಲ್ಲ, ರಸ್ತೆ ಪಕ್ಕದಲ್ಲಿಯೇ ನಿಲ್ಲಿಸಿ, ಸಾರ್ವಜನಿಕರಿಗೆ ಯಾವುದೇ ರೀತಿಯಾಗಿ ತೊಂದರೆಯಾಗದಂತೆ ಲೋಡಿಂಗ್ & ಅನ್ ಲೋಡಿಂಗ್ ಮಾಡಲಾಗುತ್ತಿದೆ.

 

ಹೀಗಿದ್ದರೂ ಸಹ ಸಂಚಾರಿ ಪೊಲೀಸರು ಈ ದಿನ ವಾಹನ ಇಲ್ಲಿ ನಿಲ್ಲಿಸಬಾರದು, ಅಲ್ಲಿ ನಿಲ್ಲಿಸಬಾರದು ಎಂದು ಸಬೂಬು ಹೇಳಿ ನೋ ಪಾರ್ಕಿಂಗ್ ಫೈನ್ ಹಾಕುತ್ತಿದ್ದಾರೆ, ಜೊತೆಗೆ ನಮ್ಮಗಳ ಮೇಲೆ ದಬ್ಬಾಳಿಕೆಯನ್ನೂ ಮಾಡುತ್ತಿದ್ದಾರೆಂದು ಆರೋಪಿಸಿ ಇಂದು ಬೆಳಿಗ್ಗೆ ಮಂಡಿಪೇಟೆ ಮುಖ್ಯವೃತ್ತವನ್ನು ಕೆಲ ಕಾಲ ಬಂದ್ ಮಾಡುವುದರ ಮೂಲಕ ಆಕ್ರೋಷವನ್ನು ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಅಧಿಕಾರಿಯಾದ ಮಹದೇವಯ್ಯ ಬಂದಂತಹ ಸಂದರ್ಭದಲ್ಲಿ ನೀವು ಈ ಭಾಗದ ಉಸ್ತುವಾರಿ ತೆಗೆದುಕೊಂಡು ಮೇಲೆಯೇ ನಮ್ಮಗಳಿಗೆ ಈ ರೀತಿಯಾದ ಸಮಸ್ಯೆ ಆಗಿರುವುದು ಈ ಮೊದಲು ಯಾರೂ ಸಹ ಈ ರೀತಿ ನಡೆದುಕೊಂಡಿರಲಿಲ್ಲ ಎಂದು ಸಾರ್ವಜನಿಕರು ಮತ್ತು ವರ್ತಕರು ಸೇರಿದಂತೆ ಹಮಾಲಿಗಳು ತಮ್ಮಗಳ ಆಕ್ರೋಷ ವ್ಯಕ್ತಪಡಿಸಿದರು.

 

 

 

 

ಜೊತೆಗೆ ಪ್ರತಿನಿತ್ಯ ಈ ಭಾಗದಲ್ಲಿ ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಸವಾರರನ್ನು ಹಿಡಿಯುವ ಭರದಲ್ಲಿ ಗಂಟೆಗಟ್ಟಲೇ ಮಂಡಿಪೇಟೆ, ಜೆಸಿ ರಸ್ತೆಗಳ ಭಾಗದಲ್ಲಿ ಹತ್ತಾರು ಜನ ಪೊಲೀಸರು ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ನಿಂತು ಅವರುಗಳನ್ನು ಹಿಡಿದು ಫೈನ್ ಹಾಕುತ್ತಿರುತ್ತೀರಾ, ಈ ಸಮಯದಲ್ಲಿ ನಮ್ಮ ವ್ಯಾಪಾರಗಳಿಗೆ ಕುಂಟಿತವಾಗಿದೆ, ನೀವು ಅಂಗಡಿಗಳ ಮುಂಭಾಗದಲ್ಲಿ ನಿಲ್ಲುವ ಬದಲು ಬೇರೆ ಕಡೆ ನಿಂತು ಫೈನ್ ಹಾಕಿಕೊಳ್ಳಿ ಎಂದು ಸಹ ಕೆಲವರು ಹೇಳಿದರು.

 

 

 

 

 

 

ಪೊಲೀಸರು ಮತ್ತು ವರ್ತಕರು ಹಾಗೂ ಹಮಾಲಿಗಳ ಮಧ್ಯೆ ವಾಗ್ವಾದ ನಡೆಯುತ್ತಿದ್ದಂತಹ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ನಗರ ಶಾಸಕರಾದ ಜ್ಯೋತಿಗಣೇಶ್ ರವರು ಸಮಸ್ಯೆಯನ್ನು ಆಲಿಸಿ, ಪೊಲೀಸರಿಗೆ ಇನ್ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸಬೇಕು ಎಂದು ಎಚ್ಚರಿಕೆಯನ್ನು ಸಹ ನೀಡಿದರು.

Leave a Reply

Your email address will not be published. Required fields are marked *

error: Content is protected !!