ತುಮಕೂರು : ತುಮಕೂರು ಪಾತಕ ಲೋಕದ ರೌಡಿಗಳಿಗೆ ಸಿಂಹಸ್ವಪ್ನವಾಗಿ ಕಾಡಲು ನಗರ ಪೊಲೀಸ್ ಠಾಣಾ ಸಿಪಿಐ ದಿನೇಶ್ ಕಾಡಲು ಶುರುವಾಗಿದ್ದಾರೆ ಎನ್ನಲಾಗಿದೆ. ಏಕೆಂದರೆ ಕಳೆದ 6 ತಿಂಗಳಲ್ಲಿ ರೌಡಿಗಳ ಮೇಲೆ ಫೈರಿಂಗ್ ಮಾಡಿ ಪಾತಕಿಗಳ ಮನದಲ್ಲಿ ನಡುಕ ಉಂಟು ಮಾಡಿರುವ ದಿಟ್ಟ ಪೊಲೀಸ್ ಅಧಿಕಾರಿ ಎಂಬ ಖ್ಯಾತಿಗಳಿಸಿದ್ದಾರೆ.
ಕೊಲೆ ಯತ್ನ ಆರೋಪಿ ಮನೋಜ್ @ ಮನು ಎಂಬುವವನ ಮೇಲೆ ತುಮಕೂರು ನಗರ ಪೊಲೀಸರು ಗುಂಡು ಹಾರಿಸಿರುವ ಘಟನೆ ನಗರದಲ್ಲಿ ನಡೆದಿದೆ. ಕಳೆದ ಸೋಮವಾರ ತುಮಕೂರು ನಗರದಲ್ಲಿ ಕುಖ್ಯಾತ ರೌಡಿ ಎಂದು ಹೇಳಲಾಗಿದ್ದ ರೋಹಿತ್ @ ಕ್ಯಾಟ್ ರೋಹಿತ್ ಗುಂಪಿನಲ್ಲಿ ಕೆಲ ಹುಡುಗರು ಪರಸ್ಪರ ಕಿತ್ತಾಡಿಕೊಂಡು ಇಬ್ಬಾಗವಾಗಿದ್ದರು, ಅದರಂತೆ ಎರಡು ಗುಂಪಿನವರು ಹೊಡೆದಾಡಿಕೊಂಡು ಕೊನೆಗೆ ರೋಹಿತ್ @ ಕ್ಯಾಟ್ ರೋಹಿತ್ ಕಡೆಯವರು ಎದುರು ರೌಡಿಗಳ ಇಬ್ಬರಿಗೆ ಮಾರಾಣಾಂತಿಕ ಹಲ್ಲೆಯನ್ನು ಮಾಡಿ ಕೊಲೆ ಮಾಡಲು ಯತ್ನಿಸಿರುತ್ತಾರೆ. ಆ ಇಬ್ಬರನ್ನ ತುಮಕೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ತುಮಕೂರು ನಗರ ಠಾಣೆ ಪೊಲೀಸರು ತನಿಖೆ ಕೈಗೆತ್ತಿಕೊಂಡು ಘಟನೆಗೆ ಕಾರಣರಾಗಿದ್ದ ರೋಹಿತ್ @ ಕ್ಯಾಟ್ ರೋಹಿತ್ ಸೇರಿದಂತೆ ಇನ್ನಿತರೆ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಶುರು ಮಾಡಿರುತ್ತಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಮನು @ ಮನೋಜ್ ಎಂಬಾತನನ್ನು ಸ್ಥಳ ಮಹಾಜರಿಗಾಗಿ ತುಮಕೂರು ನಗರ ಹೊರವಲಯದ ದಿಬ್ಬರು ಬಳಿ ಶುಕ್ರವಾರ ಸಂಜೆ ಸಮಯದಲ್ಲಿ ಕರೆದುಕೊಂಡು ಹೋಗಲಾಗಿ ಆ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಡ್ರಾಗರ್ ನಿಂದ ಹಲ್ಲೆ ಮಾಡಲು ಮುಂದಾಗಿದ್ದಲ್ಲದೇ ತಪ್ಪಿಸಿಕೊಳ್ಳಲು ಯತ್ನಿಸಿದ್ದನು ಅಲ್ಲೇ ಎದುರಲ್ಲೇ ಇದ್ದ ತುಮಕೂರು ನಗರ ಠಾಣಾ ಸಿಪಿಐ ದಿನೇಶ್ ರವರು ಮನೋಜ್ @ ಮನು ಜೋರಾಗಿ ಕೂಗಿ ಹೇಳಲಾಗಿ ಅವರ ಮಾತನ್ನು ಲೆಕ್ಕಿಸದೇ ಪರಾರಿಯಾಗಲು ಯತ್ನಿಸಿದನು ಆದರೂ ಸಹ ದಿನೇಶ್ ಗಾಳಿಯಲ್ಲಿ ಗುಂಡು ಹಾರಿಸುವುದರ ಮೂಲಕ ಬೆದರಿಸಿದ್ದಾರೆ ಅದನ್ನು ಲೆಕ್ಕಿಸದೇ ಓಡಲು ಯತ್ನಿಸಿದ್ದರ ಪರಿಣಾಮ ಮನು ಕಾಲಿಗೆ ಗುಂಡು ಹಾರಿಸಿ ಅವನನ್ನು ಪುನಃ ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಪೇದೆ ಚೇತನ್ ಮೇಲೆ ಸಹ ಹಲ್ಲೇ ಯಾಗಿದ್ದು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ರೌಡಿ ಮನು @ ಮನೋಜ್ ಮೂಲತಃ ಆಂಧ್ರ ಪ್ರದೇಶದ ಸತ್ಯಸಾಯಿ ಜಿಲ್ಲೆಯವನಾಗಿದ್ದು ತುಮಕೂರು ನಗರದ ಬಿ.ಎಂ ಪಾಳ್ಯದಲ್ಲಿ ವಾಸವಾಗಿದ್ದ ಏನಲಾಗಿದೆ. ಗುಂಡೆಟು ತಿಂದಿರುವ ಆರೋಪಿ ಮನೋಜ್ ನನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಿದ್ದಾರೆ. ಇದೇ ಅಲ್ಲದೇ ಕಳೆದ ಆರು ತಿಂಗಳ ಹಿಂದೆಯೂ ಸಹ ಕೆಲ ಪುಡಿ ರೌಡಿಗಳು ನಗರದಲ್ಲಿ ಶಾಂತಿಯನ್ನು ಕದಡಲು ಯತ್ನಸಿದ್ದ ಪ್ರಯುಕ್ತ ನಗರದ ಹೊರ ವಲಯದಲ್ಲಿ ಇದೇ ಸಿಪಿಐ ದಿನೇಶ್ ರವರು ಅವರ ಕಾಲಿಗೆ ಗುಂಡಿಕ್ಕುವುದರೊಂದಿಗೆ ಅವರನ್ನು ವಶಕ್ಕೆ ಪಡೆದು ಜೈಲಿಗೆ ಕಳುಹಿಸಿರುತ್ತಾರೆ.
ಶುಕ್ರವಾರ ಸಂಜೆ ನಡೆದಿರುವ ಪ್ರಕರಣದಿಂದ ತುಮಕೂರಿನ ಸಾಕಷ್ಟು ರೌಡಿಗಳ ಮನದಲ್ಲಿ ದಿನೇಶ್ ಅವರು ಸಿಂಹ ಸ್ವಪ್ನವಾಗಿದ್ದು, ಇನ್ಮುಂದೆ ತಾವು ಏನು ಕಿಸಿಯಲು ಈ ಸಾಹೇಬರು ಬಿಡುವುದಿಲ್ಲ ಎಂದು ಕೊಳ್ಳಲು ಶುರು ಮಾಡಿದ್ದಾರೆಂದು ಹೇಳಲಾಗಿದೆ.
ಯಾವುದೇ ಏನೇ ಆಗಲಿ ಸಿಪಿಐ ದಿನೇಶ್ ಅವರ ಈ ಕಾರ್ಯ ಶ್ಲಾಘನೀಯ ಸಂಗತಿ ಮತ್ತು ನಗರದಲ್ಲಿ ಶಾಂತಿ ಕದಡುತ್ತಿದ್ದ ಪುಡಾರಿಗಳಿಗೆ ಸರಿಯಾದ ಪಾಠ ಕಲಿಸಿದ ದಿಟ್ಟ ಪೊಲೀಸ್ ಅಧಿಕಾರಿ ಎಂದರೇ ತಪ್ಪಾಗಲಾರದು.