ಬಿ.ಎಸ್.ಎನ್.ಎಲ್. ಪರ್ವ ಪ್ರಾರಂಭವಾಗಿದೆ ಗ್ರಾಹಕರು ಸದುಪಯೋಗಪಡಿಸಿಕೊಳ್ಳಿ ; ಜನರಲ್ ಮ್ಯಾನೇಜರ್

 

 

 

 

 

ತುಮಕೂರು : ಇತ್ತೀಚೆಗೆ ಖಾಸಗಿ ಮೊಬೈಲ್ ಸಂಪರ್ಕ ಸಂಸ್ಥೆಗಳು ಗ್ರಾಹಕರಿಗೆ ಹೆಚ್ಚಿನ ಹೊರೆ ಹಾಕಲು ಮುಂದಾಗಿದೆ ಏಕೆಂದರೆ ತಮ್ಮ ಪ್ಲಾನ್‌ಗಳನ್ನು ರಿವೈಸ್ ಮಾಡಿ ದುಪ್ಪಟ್ಟು ಮಾಡುವ ಮೂಲಕ ಧರವನ್ನು ಹೆಚ್ಚಿಸಿರುವ ಹಿನ್ನಲೆಯಲ್ಲಿ ನಮ್ಮ ಬಿ.ಎಸ್.ಎನ್.ಎಲ್ ವತಿಯಿಂದ ಗ್ರಾಹಕರಿಗೆ ಕೈಗೆಟಕುವ ದರಗಳಲ್ಲಿ ಸೇವೆಯನ್ನು ಒದಗಿಸಲು ಮುಂದಾಗಿದೆ ಎಂದು ತುಮಕೂರು ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

 

 

 

 

 

 

 

ದೇಶಾದ್ಯಂತ ಖಾಸಗಿ ಮೊಬೈಲ್ ಸಂಪರ್ಕ ಸಂಸ್ಥೆಗಳು 5ಜಿ ಸೇವೆಯನ್ನು ಒದಗಿಸುತ್ತಿದ್ದೇವೆಂದು ಹೇಳುತ್ತಿದ್ದಾರೆ ಅದರೊಟ್ಟಿಗೆ ಧರಪಟ್ಟಿಯನ್ನು ಹೆಚ್ಚಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯವಾಗಿದ್ದು, ಇದರಿಂದ ಸಾಮಾನ್ಯ ಜನರು ಕಂಗಾಲಾಗಿದ್ದಾರೆ ಇದನ್ನು ನಿವಾರಣೆ ಮಾಡುವ ಸಲುವಾಗಿ ಸರ್ಕಾರಿ ಸೇವಾ ಸಂಸ್ಥೆಯಾದ ಬಿ.ಎಸ್.ಎನ್.ಎಲ್. ಗ್ರಾಹಕರ ಅನುಕೂಲಕ್ಕಾಗಿ ಕೈಗೆಟಕುವ ಧರಗಳಲ್ಲಿ 4ಜಿ ಅಪ್‌ಗ್ರೇಡೆಡ್ ಸೇವೆಯನ್ನು ನೀಡಲು ಮುಂದಾಗಿದೆ ಎಂದು ತಿಳಿಸಿದ್ದಾರೆ.

 

 

 

 

ಈಗಾಗಲೇ ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ 4ಜಿ ಸೇವೆ ಹೊಂದಿದ್ದು ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗಿದೆ ಜೊತೆಗೆ ಈಗಾಗಲೇ ತುಮಕೂರಿನಲ್ಲಿ 100 ಮತ್ತು ಹಾಸನ ಜಿಲ್ಲೆಯಲ್ಲಿ 50 ಸೈಟ್‌ಗಳು ಇರುತ್ತವೆ (ಟವರ್‌ಗಳು) ಇದನ್ನು ಮುಂದಿನ ಅಕ್ಟೋಬರ್ 2024ರ ಅಂತ್ಯದೊಳಗೆ ತುಮಕೂರಿನಲ್ಲಿ 284 ಮತ್ತು ಹಾಸನದಲ್ಲಿ 194 ಟವರ್‌ಗಳ ಸಂಪರ್ಕವನ್ನು ಹೊಂದಲಾಗುವುದೆಂದು ತಿಳಿಸಿದರು.

 

 

 

 

 

 

ಬಿ.ಎಸ್.ಎನ್.ಎಲ್ ವತಿಯಿಂದ ಪ್ರೀಪೈಡ್ ಗ್ರಾಹಕರು ರೂ. 249ರಿಂದ ಪ್ಲಾನ್ ಗಳು ಪ್ರಾರಂಭವಾಗಲಿದ್ದು, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಪ್ಲಾನ್‌ಗಳು ಲಭ್ಯವಿದೆಂದು ತಿಳಿಸಿದರು. ಜೊತೆಗೆ ಇದೀಗ ಮಾನ್ಸೂನ್ ಆಫರ್ ನಡೆಯುತ್ತಿದ್ದು ರೂ. 499/-ರ ಪ್ಲಾನ್ ರೂ. 399/-ಕ್ಕೆ ದೊರೆಯಲಿದೆ ಇದರಲ್ಲಿ (ಒಂದು ತಿಂಗಳು ಉಚಿತ ರೂ. 100 ರಿಯಾಯಿತಿ ಅಂದರೆ 4 ತಿಂಗಳಿಗೆ ರೂ. 1200/- ಆಗುತ್ತದೆ) ಇದರಿಂದ ದಿನಕ್ಕೆ ಕೇವಲ ರೂ. 13/- ನೊಂದಿಗೆ 100 ಜಿಬಿ ಡೇಟಾ ಸಹ ಸಿಗುತ್ತಿದೆ ಎಂದು ತಿಳಿಸಿದರು.

 

 

 

 

ಖಾಸಗಿ ಸಂಸ್ಥೆಗಳಿಂದ ಬೇಸತ್ತಿರುವ ಗ್ರಾಹಕರು ಬಿ.ಎಸ್.ಎನ್.ಎಲ್.ಗೆ ಸುಲಭವಾಗಿ ಪೋರ್ಟ್ ಸಹ ಆಗಬಹುದಾಗಿದೆ ಇದರಿಂದ ತಮ್ಮ ಮೊಬೈಲ್ ನಂಬರ್ ಸಹ ಬದಲಾವಣೆ ಮಾಡುವ ಅಗತ್ಯವಿಲ್ಲ ಕೇವಲ 1900ಗೆ ಪೋರ್ಟ್ ಎಂದು ನಮೂದು ಮಾಡಿ ಸಂದೇಶ ರವಾನೆ ಮಾಡುವುದರಿಂದ ಬದಲಾವಣೆ ಆಗಬಹುದು ಎಂದರು. (PORT <MOBILE NUMBER> SEND MESSEAGE TO 1900), ಜೊತೆಗೆ 4ಜಿ ಸಂಪರ್ಕವುಳ್ಳ ಸಿಮ್‌ನ್ನು ಉಚಿತವಾಗಿ ನೀಡಲಾಗುತ್ತಿದ್ದು, ಇದನ್ನು ಪಡೆಯಲು ಹತ್ತಿರದ ಸಿ.ಎಸ್.ಸಿ. ಸೆಂಟರ್ ಅಥವಾ ಬಿ.ಎಸ್.ಎನ್.ಎಲ್ ಕಚೇರಿಗೆ ಭೇಟಿ ನೀಡಿ ಪಡೆಯಬಹುದಾಗಿದೆಂದು ತಿಳಿಸಿದ್ದಾರೆ.

 

 

 

 

 

 

ಗ್ರಾಹಕರು ಕಳೆದ ಒಂದು ತಿಂಗಳಿನಿಂದ ಬೇರೆ ಖಾಸಗಿ ಕಂಪನಿಗಳಿಂದ ಬಿ.ಎಸ್.ಎನ್.ಎಲ್. ಸಂಪರ್ಕ ಪಡೆಯುತ್ತಿರುವವರ ಸಂಖ್ಯೆ ದಿನಂಪ್ರತಿ ಹೆಚ್ಚಾಗಿದೆ ಇದರಿಂದ ಸಂತೋಷವಾಗಿದೆ ಎಂದರಲ್ಲದೇ ನಮ್ಮ ಈ ನೂತನ ಕಾರ್ಯಕ್ಕೆ ಟಿ.ಸಿ.ಎಸ್. (ಟಾಟಾ ಕಂಪನಿ) ತಾಂತ್ರಿಕ ಸಹಕಾರ ಮಾಡುತ್ತಿದೆ ಎಂದರು.

Leave a Reply

Your email address will not be published. Required fields are marked *

error: Content is protected !!