ಮನೆ ಸಂಪ್‌ಗಳಿಗೆ ಯುಜಿಡಿ ಕೊಳಚೆ ನೀರು ಹರಿಯುತ್ತಿದ್ದು ಸಮಸ್ಯೆ ನಿವಾರಿಸಲು ಅಧಿಕಾರಿಗಳಿಗೆ ಜ್ಯೋತಿಗಣೇಶ್ ಸೂಚನೆ

 

 

 

ತುಮಕೂರು: ನಗರದ 30ನೇ ವಾರ್ಡಿನ ವಿಜಯನಗರ ಬಡಾವಣೆಯ ಕೆಲವು ಮನೆಗಳ ನೀರಿನ ಸಂಪ್‌ಗಳಲ್ಲಿ ಒಳಚರಂಡಿ ನೀರು ಹರಿದುಬಂದು ಅವಾಂತರ ಸೃಷ್ಟಿಯಾಗಿತ್ತು. ಸೋಮವಾರ ಬೆಳಿಗ್ಗೆ ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನಿಡಿದರು.

 

 

 

 

 

 

ವಿಜಯನಗರದ ಸುಮಾರು 20 ಮನೆಗಳ ಸಂಪ್‌ಗಳಿಗೆ ಒಂದೆರಡು ದಿನಗಳಿಂದ ಒಳಚರಂಡಿಯ ಕಲುಶಿತ ನೀರು ಬಂದು ತುಂಬಿಕೊಂಡಿತ್ತು. ಇಂತಹ ನೀರು ಬಳಕೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿಂದ ಆತಂಕಕ್ಕೀಡಾದ ನಿವಾಸಿಗಳು ಶಾಸಕರಿಗೆ ವಿಚಾರ ತಿಳಿಸಿ ಸಮಸ್ಯೆ ನಿವಾರಿಸಲು ಕೋರಿದರು.

 

 

 

 

 

 

ಸಮಸ್ಯೆ ಇರುವ ಮನೆಗಳಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಪಾಲಿಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಮನೆಯವರೊಂದಿಗೆ ಸಮಾಲೋಚನೆ ನಡೆಸಿದರು. ಮಳೆ ನೀರು ಚರಂಡಿಯಿಂದ ಸಂಪ್‌ಗೆ ನೀರು ಹರಿದುಬರಬಹುದೇ ಎಂದೂ ಅಧಿಕಾರಿಗಳು ಪರಿಶೀಲಿಸಿದರು. ಈ ಸಮಸ್ಯೆಗೆ ಕಾರಣವೇನು ಈ ಭಾಗದಲ್ಲಿ ಒಳಚರಂಡಿ ಪೈಪ್‌ಲೈನ್ ಮಾರ್ಗ ಒಡೆದುಹೋಗಿ ಕೊಳಚೆ ಸೋರಿಕೆಯಾಗಿ ಸಂಪ್‌ಗಳಿಗೆ ಹರಿದು ಬಂದಿದೆಯೆ ಎಂದು ಪತ್ತೆ ಮಾಡಿ ಸಮಸ್ಯೆ ನಿವಾರಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

 

 

 

ಒಳಚರಂಡಿ ಮಾರ್ಗ ಸುಸ್ಥಿತಿಯಲ್ಲಿದ್ದೂ ಕೊಳಚೆ ನೀರು ಸಂಪ್‌ಗಳಿಗೆ ಹೇಗೆ ಬರುತ್ತಿದೆ ಎಂದು ತಿಳಿದು, ಸಂಪ್‌ಗಳು ಶಿಥಿಲಗೊಂಡಿದ್ದರೆ ದುರಸ್ತಿಗೊಳಿಸಿಕೊಳ್ಳಲು ಮನೆಯವರಿಗೆ ತಿಳುಸುವಂತೆ ಹೇಳಿದರು. ಈಗ ಎಲ್ಲೆಡೆ ಡೆಂಘಿ, ಮಲೇರಿಯಾ ಭೀತಿ ಎದುರಾಗಿದೆ. ನಾಗರೀಕರು ತಮ್ಮ ಮನೆಯ ಸಂಪ್‌ಗಳನ್ನು ಸ್ವಚ್ಛವಾಗಿಟ್ಟುಕೊಂಡು ನೀರು ಬಳಿಸಿ ಹಾಗೂ ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ನೀರು ಸಂಗ್ರಹವಾಗಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಜ್ಯೋತಿಗಣೇಶ್ ನಾಗರೀಕರಿಗೆ ಮನವಿ ಮಾಡಿದರು.

 

 

ನಗರ ಪಾಲಿಕೆ ಮಾಜ ಸದಸ್ಯ ವಿಷ್ಣುವರ್ಧನ್, ಪಾಲಿಕೆ ಕಾರ್ಯಪಾಲಕ ಇಂಜಿನಿಯರ್ ಸಂದೀಪ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ಹಾಜರಿದ್ದರು.

 

Leave a Reply

Your email address will not be published. Required fields are marked *

error: Content is protected !!