ಗುರುಗಳು
ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಮೂಲಕ ಮನುಷ್ಯನಿಗೆ ಸುಖ-ದುಃಖಗಳ ಅನುಭವಗಳು ಬರುತ್ತವೆ, ಆದರೆ ಸಾಧನೆಯಿಂದ ಸುಖ-ದುಃಖಗಳ ಆಚೆಗಿನ ಚಿರಂತರ ಆನಂದದ ಅನುಭೂತಿ ಬರುತ್ತದೆ. ಈಶ್ವರಪ್ರಾಪ್ತಿಗಾಗಿ ದಿನನಿತ್ಯ ಶರೀರ, ಮನಸ್ಸು ಮತ್ತು ಬುದ್ಧಿ ಇವುಗಳಿಂದ ಏನೆಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆಯೋ, ಅದನ್ನು `ಸಾಧನೆ’ ಎನ್ನುತ್ತಾರೆ.
ಗುರುರ್ಬ್ರಹ್ಮಾ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರಃ |
ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||
ಕೇವಲ ಈ ಒಂದು ಶ್ಲೋಕದಿಂದ ‘ಗುರು’ ಎಂಬ ಶಬ್ದದ ಮಹಾನತೆ ಗಮನಕ್ಕೆ ಬರುತ್ತದೆ.
ಗುರುಗಳು
ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಮೂಲಕ ಮನುಷ್ಯನಿಗೆ ಸುಖ-ದುಃಖಗಳ ಅನುಭವಗಳು ಬರುತ್ತವೆ, ಆದರೆ ಸಾಧನೆಯಿಂದ ಸುಖ-ದುಃಖಗಳ ಆಚೆಗಿನ ಚಿರಂತರ ಆನಂದದ ಅನುಭೂತಿ ಬರುತ್ತದೆ. ಈಶ್ವರಪ್ರಾಪ್ತಿಗಾಗಿ ದಿನನಿತ್ಯ ಶರೀರ, ಮನಸ್ಸು ಮತ್ತು ಬುದ್ಧಿ ಇವುಗಳಿಂದ ಏನೆಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆಯೋ, ಅದನ್ನು `ಸಾಧನೆ’ ಎನ್ನುತ್ತಾರೆ.
ಗುರುರ್ಬ್ರಹ್ಮಾ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರಃ |
ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||
ಕೇವಲ ಈ ಒಂದು ಶ್ಲೋಕದಿಂದ ‘ಗುರು’ ಎಂಬ ಶಬ್ದದ ಮಹಾನತೆ ಗಮನಕ್ಕೆ ಬರುತ್ತದೆ.
೧. `ಗುರು’ ಎಂಬ ಶಬ್ದದ ಅರ್ಥ : ಯಾರು ಶಿಷ್ಯನ ಅಜ್ಞಾನವನ್ನು ದೂರ ಮಾಡಿ, ಅವನ ಆಧ್ಯಾತ್ಮಿಕ ಉನ್ನತಿ ಆಗಬೇಕೆಂದು ಅವನಿಗೆ ಸಾಧನೆ ಹೇಳಿ ಅದನ್ನು ಮಾಡಿಸಿಕೊಳ್ಳುತ್ತಾರೆ ಮತ್ತು ಅನುಭೂತಿ ನೀಡುತ್ತಾರೆ, ಅವರಿಗೆ ಗುರು ಎಂದು ಕರೆಯುತ್ತಾರೆ. ಶಿಷ್ಯನ ಪರಮಮಂಗಲ, ಅಂದರೆ ಮೋಕ್ಷಪ್ರಾಪ್ತಿ, ಎಂಬುದು ಅವನಿಗೆ ಕೇವಲ ಗುರುಕೃಪೆಯಿಂದಲೇ ಆಗುವುದು.
೨. ಗುರು ಉಪದೇಶ : ಗುರು-ಶಿಷ್ಯ ಪರಂಪರೆಯು ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ. ಗುರುಗಳು ಶಿಷ್ಯನು ಯಾವ ಸಾಧನೆ ಮಾಡುವ ಅವಶ್ಯಕವಿದೆ, ಎಂಬುದನ್ನು ಗುರುತಿಸುತ್ತಾರೆ. ಗುರುಗಳಿಗ ಶಿಷ್ಯನಿಗೆ ಏನು ಬೇಕು ಎಂದು ತಿಳಿದುಕೊಂಡು ಅಥವಾ ಸಾಧಕನ/ ಶಿಷ್ಯನ ಏನು ಅವಸ್ಥೆ ಇದೆ, ಅವನಿಗೆ ಆಧ್ಯಾತ್ಮಿಕ ಪ್ರಗತಿಯ ದೃಷ್ಟಿಯಿಂದ ಏನು ಅವಶ್ಯಕವಿದೆ, ಎಂಬುದನ್ನು ಗುರುತಿಸಿ ಅವನಿಗೆ ಅದನ್ನು ಕೊಡುತ್ತಿರುತ್ತಾರೆ. ಇದೇ ಗುರು ಉಪದೇಶ. ಗುರುಗಳೇ ಶಿಷ್ಯನ ಆಧ್ಯಾತ್ಮಿಕ ಪ್ರಗತಿ ಮಾಡಿಸಿಕೊಳ್ಳುತ್ತಾರೆ. ಅದಕ್ಕಾಗಿ ಶಿಷ್ಯನು ಗುರುಚರಣಗಳ ಹತ್ತಿರ ಇರುತ್ತಾನೆ. ಗುರುಗಳು ಸಾಧನೆ ಹೇಳಿ ಶಿಷ್ಯನಿಂದ ಅದನ್ನು ಮಾಡಿಸಿಕೊಳ್ಳುತ್ತಾರೆ ಮತ್ತು ಅನುಭೂತಿಯೂ ನೀಡುತ್ತಾರೆ. ಆದುದರಿಂದ ಅಲ್ಪಾವಧಿಯಲ್ಲಿ ಶಿಷ್ಯನ ಆಧ್ಯಾತ್ಮಿಕ ಪ್ರಗತಿ ಶೀಘ್ರವಾಗುತ್ತದೆ.
ಗುರುಕೃಪಾ ಹಿ ಕೇವಲಂ ಶಿಷ್ಯಪರಮಮಂಗಲಂ ।
ಗುರುಪೂರ್ಣಿಮೆ – ಶ್ರೀ ಗುರುಗಳ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನ !
ಗುರುಪೂರ್ಣಿಮೆ (ವ್ಯಾಸ ಪೂರ್ಣಿಮೆ) ಅಂದರೆ ಶಿಷ್ಯನೋರ್ವನ ಜೀವನದಲ್ಲಿ ಬರುವಂತಹ ಮಹತ್ವದ ದಿನ. ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಅವನಿಂದ ಆವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಮತ್ತು ಕಠಿಣ ಸಮಯದಲ್ಲಿ ಅವನಿಗೆ ಅತ್ಯಂತ ಹತ್ತಿರದಿಂದ ಹಾಗೂ ನಿರಪೇಕ್ಷ ಪ್ರೇಮದಿಂದ ಆಧಾರವನ್ನು ನೀಡಿ ಸಂಕಟಮುಕ್ತ ಮಾಡುವವರು ಗುರುಗಳೇ. ಇಂತಹ ಪರಮಪೂಜನೀಯ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ದಿನವೆಂದರೆ ಗುರುಪೂರ್ಣಿಮೆ. 21 ಜುಲೈ, 2024, ಭಾನುವಾರದಂದು ನಾವೆಲ್ಲರೂ ಕೃತಜ್ಞರಾಗಿ ಗುರುಪೂರ್ಣೀಮೆಯನ್ನು ಆಚರಿಸಲಿದ್ದೇವೆ.
ಗುರು ಎಂದರೆ ಈಶ್ವರನ ಸಗುಣ ರೂಪ. ವರ್ಷಾದ್ಯಂತ ಪ್ರತಿಯೊಬ್ಬ ಗುರುಗಳು ತಮ್ಮ ಭಕ್ತರಿಗೆ ಅಧ್ಯಾತ್ಮದ ಬೋಧಾಮೃತವನ್ನು ನೀಡುತ್ತಿರುತ್ತಾರೆ. ಇಂತಹ ಮಹಾನ್ ಗುರುಗಳ ಋಣವನ್ನು ತೀರಿಸುವುದು ಅಸಾಧ್ಯ. ಆದರೂ ಆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದೇ ಗುರುಪೂರ್ಣಿಮೆ ಆಚರಿಸುವುದರ ಹಿಂದಿನ ಉದ್ದೇಶವಾಗಿದೆ
ಗುರುಪೂರ್ಣಿಮೆಯ ಮಹತ್ವ
ಗುರು-ಶಿಷ್ಯ ಪರಂಪರೆಯು ಹಿಂದೂಗಳ ಲಕ್ಷಾವಧಿ ವರ್ಷಗಳ ಚೈತನ್ಯಮಯ ಸಂಸ್ಕೃತಿಯಾಗಿದೆ. ಆದರೆ ಕಾಲದ ಪ್ರವಾಹದಲ್ಲಿ ಮಹಾನ ಗುರು-ಶಿಷ್ಯ ಪರಂಪರೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಗುರುಪೂರ್ಣಿಮೆಯ ನಿಮಿತ್ತ ಗುರುಪೂಜೆಯಾಗುತ್ತದೆ, ಹಾಗೆಯೇ ಗುರು-ಶಿಷ್ಯ ಪರಂಪರೆಯ ಶ್ರೇಷ್ಠತೆಯನ್ನು ಸಮಾಜಕ್ಕೆ ತಿಳಿಸಲು ಸಾಧ್ಯವಾಗುತ್ತದೆ. ಸ್ವಲ್ಪದರಲ್ಲಿ ಹೇಳುವುದಾದರೆ ಗುರು-ಶಿಷ್ಯ ಪರಂಪರೆಯನ್ನು ಉಳಿಸಿಕೊಳ್ಳುವ ಸದವಕಾಶ ಲಭಿಸುತ್ತದೆ.
ಗುರುಪೂರ್ಣಿಮೆಯಂದು ಗುರುತತ್ತ್ವವು (ಈಶ್ವರೀ ತತ್ತ್ವವು) ಇತರ ದಿನಗಳ ತುಲನೆಯಲ್ಲಿ ೧ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಆದ್ದರಿಂದ ಗುರುಪೂರ್ಣಿಮೆಯ ನಿಮಿತ್ತ ಮೊದಲಿನಿಂದಲೂ ಮನಃಪೂರ್ವಕ ಮಾಡಿದ ಸೇವೆ ಮತ್ತು ತ್ಯಾಗ (ಸತ್‌ಗಾಗಿ ಮಾಡಿದ ಅರ್ಪಣೆ) ಇವುಗಳ ಲಾಭವು ಇತರ ದಿನಗಳ ತುಲನೆಯಲ್ಲಿ ವ್ಯಕ್ತಿಗೆ ೧ ಸಾವಿರ ಪಟ್ಟು ಹೆಚ್ಚಾಗುತ್ತದೆ; ಆದ್ದರಿಂದ ಗುರುಪೂರ್ಣಿಮೆಯು ಈಶ್ವರೀ ಕೃಪೆಯ ಒಂದು ಅಮೂಲ್ಯ ಪರ್ವಕಾಲವೇ ಆಗಿದೆ.
ಗುರುದಕ್ಷಿಣೆ – ತನು, ಮನ, ಧನದ ತ್ಯಾಗ
ಗುರುಪೂರ್ಣೆಮೆ ಅಂದರೆ ಗುರುಚರಣಗಳಲ್ಲಿ ತನು, ಮನ, ಧನವನ್ನು ಅರ್ಪಿಸುವ ದಿನ. ಇವುಗಳ ತ್ಯಾಗದಿಂದ ಗುರುಗಳ ಮನಸ್ಸು ಜಯಿಸಿ ಗುರುಕೃಪೆಯನ್ನು ಸುಲಭವಾಗಿ ಗಳಿಸಬಹುದು.
ಆಧಾರ : ಸನಾತನ ನಿರ್ಮಿಸಿದ ‘ಶಿಷ್ಯ’ ಗ್ರಂಥ)