ಸ್ವಾಮಿ ವಿವೇಕಾನಂದರ ಪುಣ್ಯಸ್ಮರಣೆ

ಸ್ವಾಮಿ ವಿವೇಕಾನಂದರ ಗುರುಭಕ್ತಿ

ಸರ್ವ ಧರ್ಮ ಸಮ್ಮೇಲನಕ್ಕಾಗಿ ಸ್ವಾಮಿ ವಿವೇಕಾನಂದರು ಭಾರತದ ಪ್ರತಿನಿಧಿಯಾಗಿ ಚಿಕಾಗೋ, ಅಮೇರಿಕಾಗೆ ಹೋಗಿದ್ದರು. ಅಲ್ಲಿ ಸ್ವಾಮಿ ವಿವೇಕಾನಂದರು ಎಲ್ಲ ಶ್ರೋತೃಗಳ ಮನಸ್ಸನ್ನು ಗೆದ್ದು ’ನ ಭೂತೋ ನ ಭವಿಷ್ಯತಿ’ ಎಂಬಂತೆ ಎಲ್ಲರ ಮೇಲೆ ಪ್ರಭಾವಬೀರಿದರು. ಇದರಿಂದಾಗಿ ಸನಾತನ ಹಿಂದೂ ಧರ್ಮದ ಶ್ರೇಷ್ಠತೆ ಪಾಶ್ಚಾತ್ಯರಿಗೆ ತಿಳಿಯಿತು. ಆಗ ಸ್ವಾಮಿ ವಿವೇಕಾನಂದರಿಗೆ ಅನೇಕ ಸಂಸ್ಥೆಗಳಿಂದ ವ್ಯಾಖ್ಯಾನ ನೀಡಬೇಕೆಂದು ಆಮಂತ್ರಣ ಬರಲು ಶುರುವಾಯಿತು. ಅಲ್ಲಿ ಅವರು ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಮತ್ತು ರಾಜಯೋಗದ ಬಗ್ಗೆಅನೇಕ ವಿಷಯಗಳನ್ನುಮಂಡಿಸಿದರು. ಎಲ್ಲಾ ಶ್ರೋತೃಗಳು ಮಂತ್ರಮುಗ್ಧರಾಗಿ, ಸಮಯದರಿವಿಲ್ಲದೆ ಸ್ವಾಮೀಜಿಯವರ ಮಾತನ್ನು ಕೇಳುತ್ತಿದ್ದರು. ಜನರಿಗೆ ಇನ್ನೂ ಮುಂದಿನ ವಿಷಯ ಕೇಳಬೇಕೆಂದು ತೀವ್ರ ಇಚ್ಛೆ ಉಂಟಾಗುತ್ತಿತ್ತು.

 

 

ಇಂತಹ ಒಂದು ಕಾರ್ಯಕ್ರಮ ಮುಗಿದ ನಂತರ ಶ್ರೋತೃಗಳು ಸ್ವಾಮಿ ವಿವೇಕಾನಂದರನ್ನು ತೀವ್ರ ಜಿಜ್ಞಾಸೆಯಿಂದ ಪ್ರಶ್ನೆಗಳನ್ನು ಕೇಳಿದರು, “ಹೇ ಮಹಾನ ಸಂನ್ಯಾಸಿ, ನೀವು ಈ ಅಲೌಕಿಕ ಜ್ಞಾನವನ್ನು ಯಾವ ಶಾಲೆಯಲ್ಲಿ ಅಥವಾ ವಿಶ್ವವಿದ್ಯಾಲಯದಲ್ಲಿ ಕಲಿತಿರಿ ? ಕೃಪೆ ಮಾಡಿ ನಮಗೆ ವಿಸ್ತಾರವಾಗಿ ಹೇಳಿರಿ”. ಅದಕ್ಕೆ ಸ್ವಾಮಿ ವಿವೇಕಾನಂದರು, “ಅವಶ್ಯವಾಗಿ, ಈ ಜ್ಞಾನವು ನನಗೆ ಕೇವಲ ನನ್ನ ಗುರುಗಳಿಂದ ಸಿಕ್ಕಿದೆ” ಎಂದು ಹೇಳಿದರು. ಆಗ ಶ್ರೋತೃಗಳು ಅಧೀರರಾಗಿ, “ನಿಮ್ಮ ಗುರುಗಳು ಯಾರು ?” ಎಂದು ಕೇಳಿದರು. ಆಗ ಸ್ವಾಮಿ ವಿವೇಕಾನಂದರು ಹೇಳಿದರು, “ನಿಮಗೆ ಈ ಬಗ್ಗೆ ತಿಳಿಯಲು ತೀವ್ರ ಜಿಜ್ಞಾಸೆ ಇದ್ದರೆ ನಾನು ಅವಶ್ಯವಾಗಿ ಹೇಳುವೆನು”. ಅದೇ ದಿವಸ ಸ್ವಾಮಿ ವಿವೇಕಾನಂದರ ವಿಶೇಷ ಪ್ರವಚನದ ಆಯೋಜನೆಯನ್ನು ಮಾಡಲಾಯಿತು. ಪ್ರವಚನದ ಹೆಸರು ’ನನ್ನ ಗುರು’, ಇದರ ಕುರಿತು ವರ್ತಮಾನ ಪತ್ರಿಕೆಗಳಲ್ಲಿ ಪ್ರಸಿದ್ಧಿಯನ್ನು ನೀಡಲಾಯಿತು. ಹಾಗಾಗಿ ಕುತೂಹಲದಿಂದ ಶ್ರೋತೃಗಳ ಸಾಗರವೇ ಅಲ್ಲಿ ನಿರ್ಮಾಣವಾಯಿತು. ಪ್ರವಚನ ಶುರುವಾಗುವ ವೇಳೆ ಸ್ವಾಮಿ ವಿವೇಕಾನಂದರು ಎದ್ದು ವ್ಯಾಸಪೀಠಕ್ಕೆ ಬರುತ್ತಿದ್ದರು, ಆಗ ಒಮ್ಮೆಲೆಶಾಂತಿನಿರ್ಮಾಣವಾಯಿತು. ನೆರೆದಿರುವ ಜನಸಾಗರವನ್ನು ನೋಡಿ ಸ್ವಾಮಿ ವಿವೇಕಾನಂದರಿಗೆ ಸದ್ಗುರುಗಳ ಬಗ್ಗೆ ಕೃತಜ್ಞತೆಯು ಉಕ್ಕಿ ಬಂತು. ಅವರು ಮಾತಾಡಲು ಶೂರು ಮಾಡಿದಾಗ ಮೊದಲು ಹೇಳಿದ್ದು ’ನನ್ನ ಗುರುದೇವ !‘ ಈ ವಾಕ್ಯವನ್ನು ಅತ್ಯಂತ ಭಾವಾವಸ್ಥೆಯಲ್ಲಿಉದ್ಗರಿಸಿದ್ದರು.

 

 

ಅವರು ಭಾವದಲ್ಲಿ ಹೇಳಿದ ಕಾರಣ ಅವರ ಕಣ್ಣಿನ ಮುಂದೆ ಸಾಕ್ಷಾತ್ ಗುರುಗಳ ರೂಪ ಕಾಣಿಸಿತು. ಇದರಿಂದಾಗಿ ಅವರ ಕಂಠ ಗದ್ಗದಿತವಾಯಿತು. ಕಣ್ಣುಗಳಿಂದ ಅಶ್ರುಗಳು ಬರಲಾರಂಭಿಸಿಮತ್ತುರೋಮಾಂಚಿತವಾಗಿ ನಡುಗಲಾರಂಭಿಸಿದರು. ಇದರಿಂದಾಗಿ ಅವರು 10 ನಿಮಿಷ ಏನೂ ಹೇಳಲೇ ಇಲ್ಲ. ಅವರ ಈ ಅವಸ್ಥೆಯನ್ನು ನೋಡಿಶ್ರೋತೃಗಳು ಆಶ್ಚರ್ಯಚಕಿತರಾಗಿದ್ದರು. ಇದಕ್ಕೆ ಮುಂಚೆ ದೇಹಕ್ಕೆ ನೋವಾದಾಗ, ತುಂಬಾ ದುಃಖಕರ ಪ್ರಸಂಗ ನಡೆದಾಗ ಅಥವಾ ತಂದೆ–ತಾಯಿ, ನೆಂಟರ ಮೃತ್ಯುವಾದಾಗ ಮಾತ್ರ ಕಣ್ಣಲ್ಲಿ ನೀರು ಬರುವುದನ್ನು ಜನರು ನೋಡಿದ್ದರು. ಇದರಿಂದಾಗಿ ಜನರು ಸ್ವಾಮಿ ವಿವೇಕಾನಂದರನ್ನು ಹುಚ್ಚರಂತೆ ನೋಡಿದರು.

 

 

ಸ್ವಾಮಿ ವಿವೇಕಾನಂದರ ಕ್ಷಾತ್ರಧರ್ಮ
ಕಬ್ಬಿಣದ ಬಾಹುಗಳು, ಗಟ್ಟಿಯಾದ ದೇಹ ಮತ್ತು ಅದರ ಅಂತರ್ಯದೊಳಗೆ ವಾಸಿಸುವ ವಜ್ರದಂತಹ ಮನಸ್ಸು ಇಂತಹ ಹಿಂದೂವು ಸ್ವಾಮಿ ವಿವೇಕಾನಂದರಿಗೆ ಬೇಕಾಗಿತ್ತು. ಕ್ಷಾತ್ರಧರ್ಮದ ಮಹತ್ವವನ್ನು ವಿವರಿಸುವಾಗ ಸ್ವಾಮಿ ವಿವೇಕಾನಂದರು, ‘ಬಾಹುಗಳು ಶಕ್ತಿಶಾಲಿಯಾಗುವುದರಿಂದ ಗೀತೆಯು ಇನ್ನೂ ಹೆಚ್ಚು ಉತ್ತಮವಾಗಿ ಅರ್ಥವಾಗುತ್ತದೆ. ನಮ್ಮ ಧರ್ಮೀಯರಲ್ಲಿ ರಕ್ತವು ತೇಜದಿಂದ ಕುದಿಯತೊಡಗಿತು ಎಂದರೆ ಭಗವಂತ ಶ್ರೀಕೃಷ್ಣನಂತಹ ಮಹಾಪುರುಷರ ವಿರಾಟ ಪ್ರಜ್ಞೆ ಮತ್ತು ಅಪೂರ್ವ ಸಾಮರ್ಥ್ಯಗಳು ಅರ್ಥವಾಗತೊಡಗುತ್ತವೆ’ ಎಂದಿದ್ದಾರೆ.

 

ಪ್ರತಿಯೊಬ್ಬರೂ ಗುರುಗೋವಿಂದ ಸಿಂಗರಾಗಬೇಕು !
ಗುರುಗೋವಿಂದ ಸಿಂಗರು ತಮ್ಮ ಬಾಂಧವರಿಗಾಗಿ ಅಪರಿಮಿತ ಕಷ್ಟಗಳನ್ನು ಸಹಿಸಿಕೊಂಡರು, ಅಂತಹದ್ದೇನಾದರೂ ನಮ್ಮ ಹಿಂದೂ ಬಾಂಧವರಿಗಾಗಿ ಸಹಿಸುವಂತಹ ತಯಾರಿಯು ನಿಮ್ಮಲ್ಲಿದ್ದರೆ ಮಾತ್ರ ನೀವು ಹಿಂದೂಗಳೆನ್ನಬಹುದು. ಹಿಂದೂ ಧರ್ಮಕ್ಕಾಗಿ ಗುರುಗೋವಿಂದ ಸಿಂಗರು ರಣರಂಗವನ್ನು ತಮ್ಮ ರಕ್ತದಿಂದ ಸಿಂಚನಗೊಳಿಸಿದರು. ತಮ್ಮ ಇಬ್ಬರು ಪುತ್ರರನ್ನು ರಣಾಂಗಣದಲ್ಲಿ ಬಲಿ ನೀಡಿದರು. ಒಂದು ವೇಳೆ ನಿಮ್ಮಲ್ಲಿ ಭರತಖಂಡದ ಹಿತವಾಗಬೇಕೆಂಬ ಇಚ್ಛೆಯಿದೆ ಎಂದಾದರೆ ಪ್ರತಿಯೊಬ್ಬ ಹಿಂದೂವು ಗುರುಗೋವಿಂದ ಸಿಂಗರಾಗಬೇಕು’ ಎಂದು ಸ್ವಾಮಿ ವಿವೇಕಾನಂದರು ನುಡಿದಿದ್ದಾರೆ.

 

 

ಸರ್ವತೋಮುಖ ಕ್ರಾಂತಿಗಾಗಿ ಭಾರತೀಯ ಯುವಕರೇ, ಸಂಘಟಿತರಾಗಿರಿ !
ಭಾರತಮಾತೆಗೆ ಅವಳ ಸರ್ವಶ್ರೇಷ್ಠ ಮತ್ತು ಸರ್ವೋತ್ಕೃಷ್ಠವಾದ ಸಂತಾನದ ಬಲಿದಾನದ ಅವಶ್ಯಕತೆಯಿದೆ. ಈ ಪೃಥ್ವಿಯಲ್ಲಿನ ಅತ್ಯಂತ ಪರಾಕ್ರಮೀ ಮತ್ತು ಸರ್ವಜನರು ಬಹುಜನಹಿತಾಯ ಬಹುಜನಸುಖಾಯ ಇದಕ್ಕಾಗಿ ಆತ್ಮಬಲಿದಾನ ಮಾಡಲೇಬೇಕಾಗುತ್ತದೆ. ಉತ್ಸಾಹೀ, ಶ್ರದ್ಧಾವಂತ ಮತ್ತು ನಿಷ್ಕಪಟರಾದ ಯುವಕರು ಸಿಕ್ಕರೆ ಅವರು ಇಡಿ ಜಗತ್ತಿನಲ್ಲಿ ಸರ್ವತೋಮುಖ ಕ್ರಾಂತಿ ಮಾಡಬಲ್ಲರು. ಹಿಂದೂಸ್ಥಾನಕ್ಕಾಗಿ ತಮ್ಮ ತನು, ಮನ ಮತ್ತು ಪ್ರಾಣ ಅರ್ಪಿಸಲು ಸಿದ್ಧರಿರುವ ಯುವಕರನ್ನು ಸಂಘಟಿಸಿರಿ’ ಎಂದಿದ್ದಾರೆ.

ಆಧಾರ : Balsanakar.com/Kannada

Leave a Reply

Your email address will not be published. Required fields are marked *

error: Content is protected !!