24 ರಿಂದ 30 ಜೂನ್ ತನಕ ಗೋವಾದಲ್ಲಿ ನಡೆಯಲಿರುವ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಿಮಿತ್ತ … ಅಬ್ ಕಿ ಬಾರ ಹಿಂದೂ ರಾಷ್ಟ್ರ ಕಿ ಪುಕಾರ !

 

ಪ್ರಸ್ತಾವನೆ : ‘ಹಿಂದೂ ರಾಷ್ಟ್ರ ಈ ಶಬ್ದವು ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಈಗ ಯಾರಿಗೂ ಹೊಸದಾಗಿಲ್ಲ. ಸುಮಾರು ೧೫ ವರ್ಷಗಳ ಹಿಂದೆ ಈ ಶಬ್ದವನ್ನು ಉಚ್ಚರಿಸುವುದು ಸಹ ಅಪರಾಧವಾಗಿತ್ತು. ಆದರೆ ೨೦೦೨ ರಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸ್ಥಾಪನೆಯಾಯಿತು. ಈ ರೀತಿಯಲ್ಲಿ ಒಂದು ಕಾಲದಲ್ಲಿ ವರ್ಜಿತ ಶಬ್ದವು ಇಂದು ಸರ್ವಮಾನ್ಯವಾಗುವುದು ಹಿಂದುತ್ವನಿಷ್ಠ ಸಂಘಟನೆಗಳ ದೊಡ್ಡ ಯಶಸ್ಸು ಎನ್ನಬಹುದು.

 

 

 

೧. ಹಿಂದೂ ರಾಷ್ಟ್ರ : ಸನಾತನ ವೈದಿಕ ಧರ್ಮದ ನಿಯಮಗಳ ಮೇಲಾಧಾರಿತ ಉದಾತ್ತ ವ್ಯವಸ್ಥೆ ! :

ಸ್ವಾಮಿ ವಿವೇಕಾನಂದರು, “ಈ ರಾಷ್ಟ್ರವು ಜೀವಂತವಿರಬೇಕೆಂದು ನಿಮ್ಮ ಚಡಪಡಿಕೆಯಾಗಿದ್ದಲ್ಲಿ ಈ ರಾಷ್ಟ್ರವು ಸಂಪೂರ್ಣವಾಗಿ ಹಿಂದೂ ಧರ್ಮಾಧಿಷ್ಠಿತ ಜೀವನಪದ್ಧತಿಯನ್ನು ಸ್ವೀಕರಿಸಿರುವಂತಹದ್ದಾಗಿರಬೇಕು” ಎಂದು ಹೇಳಿದ್ದರು. ‘ಹಿಂದೂ ರಾಷ್ಟ್ರ ಎಂದರೆ ಕೇವಲ ‘ಹಿಂದೂಗಳ ದೇಶ’ ಎಂಬ ಸಂಕುಚಿತ ವಿಚಾರವಲ್ಲ. ‘ರಾಷ್ಟ್ರ ಈ ಸಂಕಲ್ಪನೆಯಲ್ಲಿ ಭೂಮಿ ಮತ್ತು ಜನಸಮೂಹದೊಂದಿಗೆ ಅಲ್ಲಿನ ಜನರ ಸಂಸ್ಕೃತಿ, ಸಭ್ಯತೆ, ಪರಂಪರೆ, ಇತಿಹಾಸ, ಧರ್ಮ, ಸಾಹಿತ್ಯ, ಕಲೆ ಮತ್ತು ರಾಜನೀತಿ ಈ ಅಂಶಗಳು ಒಳಗೊಂಡಿರುತ್ತವೆ. ‘ಹಿಂದೂ ರಾಷ್ಟ್ರವು ಯಾವುದೇ ರಾಜಕೀಯ ಸಂಕಲ್ಪನೆಯಲ್ಲ, ಅದು ಸನಾತನ ವೈದಿಕ ಧರ್ಮದ ನಿಯಮಗಳನ್ನು ಅನುಸರಿಸಿದಂತಹ ಒಂದು ಉದಾತ್ತ ವ್ಯವಸ್ಥೆಯಾಗಿದೆ. ಹಾಗಾಗಿ ಹಿಂದೂ ರಾಷ್ಟ್ರಕ್ಕಾಗುವ ವಿರೋಧವು ಸಂಪೂರ್ಣ ವಿನಾಕಾರಣವಾಗಿದೆ.

 

 

 

 

೨. ಹಿಂದೂ ರಾಷ್ಟ್ರವಿರೋಧಿ ‘ನೆರೆಟಿವ್’ ! : ಇಂದು ವಿರೋಧಿಗಳಿಂದ ‘ಹಿಂದೂ ರಾಷ್ಟ್ರದ ವಿರುದ್ಧ ಬೃಹತ್ ಪ್ರಮಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಅದಕ್ಕಾಗಿ ಅವರು ಬೇರೆಬೇರೆ ರೀತಿಯ ‘ನೆರೆಟಿವ್ಸ್’ (ಕಥೆ) ರಚಿಸುತ್ತಿದ್ದಾರೆ. ಅದರಲ್ಲಿ ‘ಧರ್ಮಾಧಾರಿತ ಪಾಕಿಸ್ತಾನವು ಇಂದು ಭಿಕ್ಷೆ ಬೇಡುತ್ತಿರುವಾಗ ನಿಮಗೆ ಹಿಂದೂ ರಾಷ್ಟ್ರ’ದ ಅವಶ್ಯಕತೆಯೇನಿದೆ ? ಅಥವಾ ‘ಇಂದು ದೇಶದಲ್ಲಿ ನಿರುದ್ಯೋಗ, ಬಡತನ ಇಂತಹ ಅನೇಕ ಸಮಸ್ಯೆಗಳು ದೇಶವನ್ನು ಸುತ್ತುವರಿದಿರುವಾಗ ಅದಕ್ಕೆ ಪರಿಹಾರ ಹುಡುಕುವ ಬದಲು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಯಾಕೆ ಪ್ರಯತ್ನಿಸುತ್ತಿರುವಿರಿ ?’, ಇಂತಹ ಪ್ರಶ್ನೆಗಳೂ ಒಳಗೊಂಡಿವೆ. ಇಂತಹವರು ಗಮನದಲ್ಲಿಡಬೇಕಾದ ಅಂಶವೆನೆಂದರೆ ಇಂದು ದೇಶವು ಸ್ವತಂತ್ರವಾಗಿ ೭೫ ವರ್ಷಗಳಿಗಿಂತಲೂ ಹೆಚ್ಚು ಸಮಯವಾಗಿದ್ದರೂ ದೇಶದಲ್ಲಿ ನಿರುದ್ಯೋಗ, ಬಡತನ, ಭ್ರಷ್ಟಾಚಾರ, ಮಹಿಳೆಯರ ಮೇಲಿನ ಅತ್ಯಾಚಾರ, ಹಿಂಸಾಚಾರ ಮುಂತಾದ ಸಮಸ್ಯೆಗಳು ಬಗೆಹರಿದಿಲ್ಲ ಎಂದಾದರೆ ಇದು ೭೫ ವರ್ಷಗಳ ಕಾಲ ಆಡಳಿತ ನಡೆಸಿದ ವ್ಯವಸ್ಥೆಯ ವೈಫಲ್ಯವಲ್ಲವೇ ? ‘ಮುಂಬರುವ ಕಾಲದಲ್ಲಿ ಈ ಸಮಸ್ಯೆ ಕಡಿಮೆಯಾಗುವುದು’, ಎಂದು ದೃಢವಾಗಿ ಹೇಳಲು ಯಾವುದೇ ರಾಜಕಾರಣಿಗಳಿಂದ ಸಾಧ್ಯವಾಗುತ್ತಿಲ್ಲ. ಪಾಕಿಸ್ತಾನವು ಇಂದು ಕಂಗಾಲಾಗಿ ಭಿಕ್ಷೆ ಬೇಡುತ್ತಿದೆ. ಹಾಗಾಗಿ ಅಲ್ಲಿನ ಇಸ್ಲಾಮಿಕ್ ರಾಜ್ಯವನ್ನು ನಾಶಗೊಳಿಸಿ ಎಂದು ಯಾರಾದರೂ ಬೇಡಿಕೆ ಇಡುತ್ತಿದ್ದಾರೆಯೇ ? ಇಂದು ಯುರೋಪಿನ ಹೆಚ್ಚಿನ ಶ್ರೀಮಂತ ದೇಶಗಳು ತಮ್ಮನ್ನು ‘ಕ್ರೈಸ್ತ ದೇಶ’ ಎಂದೆನಿಸಿಕೊಳ್ಳುತ್ತಿವೆ ಹಾಗಿದ್ದರೆ ಅವರು ಬಡವರ ಚಿಂತೆ ಮಾಡುತ್ತಿಲ್ಲ ಎಂದು ಹೇಳುವುದೇ ? ಹೀಗಿರುವಾಗ ಈ ದೇಶವನ್ನು ಎಲ್ಲ ಸಮಸ್ಯೆಗಳಿಂದ ಬಿಡಿಸಿ ಒಂದು ಆದರ್ಶ ರಾಷ್ಟ್ರವನ್ನಾಗಿಸಲು ಹಿಂದೂ ರಾಷ್ಟ್ರದ ಸ್ಥಾಪನೆಯ ಬೇಡಿಕೆಯನ್ನು ಯಾರಾದರೂ ಮಾಡುತ್ತಿದ್ದಲ್ಲಿ ಅದರಲ್ಲಿ ತಪ್ಪೇನಿದೆ ?

 

 

 

೨. ‘ಗಜವಾ-ಎ-ಹಿಂದ್ನ ದಟ್ಟ ಸಂಕಟ ! :

ಬಾಂಧವರೇ, ಭಾರತ ಮತ್ತು ಹಿಂದೂಗಳ ಮೇಲಿನ ಸಂಕಟಗಳ ಮಾಲಿಕೆಯು ತಮಗೆಲ್ಲರಿಗೂ ತಿಳಿದಿದೆ; ಆದರೆ ಅದರಲ್ಲಿಯೂ ಗಂಭೀರ ಸಂಕಟ ಎಂದರೆ ‘ಗಜವಾ-ಎ-ಹಿಂದ್. ಈ ಶಬ್ದ ತಮಗೆಲ್ಲರಿಗೂ ಹೊಸತಿರಬಹುದು. ಆದರೆ ಸದ್ಯ ಬಿರುಗಾಳಿಯ ಮೊದಲಿನ ಶಾಂತತೆಯ ರೂಪದಲ್ಲಿರುವ ಈ ಸಂಕಟವು ನಮ್ಮ-ನಿಮ್ಮ ಎಲ್ಲರ ಸುತ್ತಲೂ ಸತತ ಸುತ್ತುತ್ತಿದೆ. ‘ಗಜವಾ-ಎ-ಹಿಂದ್ನ ಅರ್ಥವೇನೆಂದರೆ ‘ಭಾರತವನ್ನು ಇಸ್ಲಾಮೀಕರಣ ಮಾಡುವುದು. ಸದ್ಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಹಲಾಲ್ ಜಿಹಾದ್ ಇವೆಲ್ಲ ಈ ‘ಗಜವಾ-ಎ-ಹಿಂದ್ನ ಚಿಕ್ಕ ರೂಪಗಳಾಗಿವೆ. ಈ ಸಂದರ್ಭದಲ್ಲಿ ಹಿಂದೂಗಳು ಎಚ್ಚರಗೊಳ್ಳುವುದಂತೂ ದೂರದ ಮಾತಾಯಿತು, ಅವರಿಗೆ ಇಂದಿಗೂ ಈ ಸಂಕಟದ ಕಲ್ಪನೆ ಕಿಂಚಿತ್ತೂ ಇಲ್ಲ ಹಾಗಾಗಿ ಹಿಂದೂಗಳಲ್ಲಿ ಜಾಗೃತಿ ಮೂಡಿಸಿ ಅವರಲ್ಲಿ ಜಾಗರೂಕತೆಯನ್ನು ಮೂಡಿಸುವುದು ಅನಿವಾರ್ಯವಾಗಿದೆ. ಅದಕ್ಕಾಗಿ ‘ಗಜವಾ-ಎ-ಹಿಂದ್ಗೆ ‘ಹಿಂದೂ ರಾಷ್ಟ್ರ ಇದೊಂದೇ ಉತ್ತರವಾಗಿದೆ. ಇದನ್ನು ಹಿಂದೂಗಳ ಮನಸ್ಸಿನಲ್ಲಿ ಬಿಂಬಿಸಬೇಕಾಗಿದೆ.

೩. ‘ಸೆಕ್ಯುಲರನ್ನು ಮುದ್ದಿಸುವುದನ್ನು ನಿಲ್ಲಿಸಿ ! :

೧೯೭೬ ರಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಇರುವಾಗ ಮತ್ತು ಸಂಪೂರ್ಣ ವಿರೋಧಪಕ್ಷವು ಸೆರೆಮನೆಯಲ್ಲಿರುವಾಗ ಕಾಂಗ್ರೆಸ್‌ನ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಇವರು ಸಂವಿಧಾನದಲ್ಲಿ ೪೨ನೆ ತಿದ್ದುಪಡಿ ಮಾಡಿ ಸಂವಿಧಾನದ ಮೂಲ ಪ್ರಸ್ತಾವನೆಯಲ್ಲಿಯೇ ಇಲ್ಲದ ‘ಸೆಕ್ಯುಲರ್ ಮತ್ತು ಸೋಶಲಿಸ್ಟ್ ಎಂಬ ಶಬ್ದಗಳನ್ನು ತುರುಕಿಸಿದರು. ಅಂದಿನಿಂದ ಹಿಂದೂಗಳ ಮೇಲಿನ ದಬ್ಬಾಳಿಕೆ ಹಾಗೂ ಅಲ್ಪಸಂಖ್ಯಾತರ ಅದರಲ್ಲಿಯೂ ವಿಶೇಷವಾಗಿ ಮುಸಲ್ಮಾನರ ಓಲೈಕೆ ದೊಡ್ಡ ಪ್ರಮಾಣದಲ್ಲಿ ಪ್ರಾರಂಭವಾಯಿತು. ಸಂವಿಧಾನದಲ್ಲಿ ಈ ರೀತಿಯ ಬದಲಾವಣೆ ಮಾಡುವುದು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರರ ಅವಮಾನವೇ ಆಗಿತ್ತು; ಆದರೆ ಇಂದಿನ ತನಕ ಒಬ್ಬನೇ ಒಬ್ಬ ಪ್ರಗತಿಪರರು ಇದರ ಬಗ್ಗೆ ಚಕಾರವೆತ್ತಿಲ್ಲ. ಇದೇ ‘ಸೆಕ್ಯುಲರ್‌ವಾದದ ಹೆಸರಿನಲ್ಲಿ ಪ್ರಗತಿಪರರು ಹಿಂದೂ ರಾಷ್ಟ್ರವನ್ನು ವಿರೋಧಿಸುತ್ತಾರೆ; ಆದರೆ ಇದೇ ಪ್ರಗತಿಪರರು ‘ಗಜವಾ-ಎ-ಹಿಂದ್ ವಿಷಯದಲ್ಲಿ ಮಾತ್ರ ಚಕಾರವೆತ್ತಲ್ಲ. ಇದು ವಿಶೇಷವಾಗಿದೆ ! ಹಾಗಾಗಿ ಸಂವಿಧಾನದಲ್ಲಿ ತುರುಕಿಸಲಾಗಿರುವ ಈ ಶಬ್ದಗಳನ್ನು ತೆಗೆದು ಆ ಜಾಗದಲ್ಲಿ ಸಂವಿಧಾನಾತ್ಮಕವಾಗಿ ಹಿಂದೂ ರಾಷ್ಟ್ರ ಮತ್ತು ‘ಆಧ್ಯಾತ್ಮಿಕ ಈ ಶಬ್ದಗಳನ್ನು ಸಂವಿಧಾನದಲ್ಲಿ ಸೇರಿಸಬಹುದು. ಇದಕ್ಕಾಗಿ ಹಿಂದುತ್ವನಿಷ್ಠರಿಂದ ನ್ಯಾಯಾಂಗ ಹೋರಾಟ ನಡೆಯುತ್ತಿದೆ.

೪. ಹಿಂದೂ ರಾಷ್ಟ್ರದ ಸ್ಥಾಪನೆಯ ಮಾರ್ಗ ರಾಜಕೀಯವಲ್ಲ ! : ‘ಯಾವುದಾದರೊಂದು ಪಕ್ಷವು ಅಧಿಕಾರಕ್ಕೆ ಬಂದರೆ ಹಿಂದೂ ರಾಷ್ಟ್ರ ಬರುವುದು’ ಎಂಬ ಭೂಮಿಕೆ ಯಾವತ್ತೂ ನಮ್ಮದಿರಲಿಲ್ಲ ಅಥವಾ ‘ರಾಜಕೀಯ ಮಾರ್ಗದಿಂದ ಆಡಳಿತವನ್ನು ಸ್ಥಾಪಿಸಿ ಹಿಂದೂ ರಾಷ್ಟ್ರ ಬರಲಿದೆ’ ಎಂದು ನಾವು ಯಾವತ್ತೂ ಹೇಳಿಲ್ಲ. ಹಿಂದೂ ರಾಷ್ಟ್ರವು ಹಿಂದೂ ರಾಷ್ಟ್ರಕ್ಕಾಗಿ ತನು, ಮನ ಮತ್ತು ಧನ ಅರ್ಪಿಸಿ ನಿರಪೇಕ್ಷವಾಗಿ ಕಾರ್ಯ ಮಾಡುವವರ ಸಂಘಟನೆಯಿಂದ ಸಾಕಾರವಾಗಲಿದೆ. ಇಂದು ಭಾರತದಲ್ಲಿ ೧೦೦ ಕೋಟಿ ಹಿಂದೂಗಳು ಹಿಂದೂ ರಾಷ್ಟ್ರದ ಬೇಡಿಕೆಯನ್ನಿಟ್ಟರೆ ಅದನ್ನು ಯಾರೂ ತಡೆಯಲಾರರು. ಹಿಂದೂಗಳಿಗೆ ತಾವು ಬಹುಸಂಖ್ಯಾತರಾಗಿರುವುದರ ರಾಜಕೀಯ ಅರಿವು ಮೂಡಿದರೆ ಮತ್ತು ರಾಜಕಾರಣಿಗಳು ಜಾತಿ-ಜಾತಿಗಳಲ್ಲಿ ಉಂಟುಮಾಡಿರುವ ಬಿರುಕು ದೂರವಾದಲ್ಲಿ ಹಿಂದೂ ರಾಷ್ಟ್ರ ಬರಲು ತಡವಿಲ್ಲ

೫. ಹಿಂದೂ ರಾಷ್ಟ್ರ ಸ್ಥಾಪನೆಯ ವಿಷಯದಲ್ಲಿ ಜಾಗೃತಿ ಮತ್ತು ಸಂಘಟನೆಗಾಗಿ ಹಿಂದೂ ರಾಷ್ಟ್ರ ಅಧಿವೇಶನ !

೨೦೪೭ ರೊಳಗೆ ಭಾರತವನ್ನು ಇಸ್ಲಾಮೀ ರಾಷ್ಟ್ರವನ್ನಾಗಿಸಲು ದೊಡ್ಡ ಷಡ್ಯಂತ್ರವನ್ನು ‘ಐ.ಎಸ್.ಐ. ಮತ್ತು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ರಚಿಸಿದೆ ಎಂದು ರಾಷ್ಟ್ರೀಯ ತನಿಖಾ ದಳವು ಬಹಿರಂಗಪಡಿಸಿದೆ. ಇಂತಹ ಸಮಯದಲ್ಲಿ ಸ್ವಯಂಭೂ ಹಿಂದೂ ಭೂಮಿಯಾಗಿರುವ ಭಾರತಕ್ಕೆ ತನ್ನ ಸ್ವಂತದ ಗುರುತನ್ನು ಮತ್ತೊಮ್ಮೆ ದೊರಕಿಸಿ ಕೊಡುವುದು ಅಂದರೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿರುವ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಮೂಲಕ ದೇಶದಾದ್ಯಂತದ ಹಿಂದುತ್ವನಿಷ್ಠ ಸಂಘಟನೆಗಳು ಸಂಘಟಿತವಾಗಿ ಹಿಂದೂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಜಾಗೃತಿ ಮೂಡಿಸುತ್ತಿವೆ. ಹಿಂದೂ ರಾಷ್ಟ್ರವು ಧರ್ಮಾಧಿಷ್ಠಿತವಾಗಿರಲಿದೆ. ಅಂದರೆ ಅದಕ್ಕೆ ಧರ್ಮದ ಅಧಿಷ್ಠಾನ ಇರಲಿದೆ.

 

ಈ ಸಲ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಅಂದರೆ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ೧೨ ನೇಯ ವರ್ಷವಾಗಿದೆ. ಈ ಅಧಿವೇಶನವು ೨೪ ರಿಂದ ೩೦ ಜೂನ್ ೨೦೨೪ ಈ ಕಾಲಾವಧಿಯಲ್ಲಿ ಫೊಂಡಾ, ಗೋವಾದಲ್ಲಿರುವ ಶ್ರೀ ರಾಮನಾಥ ದೇವಸ್ಥಾನದ ಶ್ರೀ ವಿದ್ಯಾಧಿರಾಜ ಸಭಾಗೃಹದಲ್ಲಿ ಜರುಗಲಿದೆ. ಈ ಅಧಿವೇಶನದಲ್ಲಿ ದೇಶ-ವಿದೇಶಗಳ ೩೫೦ ಹಿಂದುತ್ವನಿಷ್ಠ ಸಂಘಟನೆಗಳ ಒಂದು ಸಾವಿರಕ್ಕಿಂತಲೂ ಹೆಚ್ಚಿನ ಪ್ರತಿನಿಧಿಗಳು, ಸಂತರು, ಧರ್ಮಾಚಾರ್ಯರು, ಹಿಂದುತ್ವನಿಷ್ಠ ನೇತಾರರು, ವಿಚಾರವಂತರು, ಲೇಖಕರು, ಮಾಜಿ ನ್ಯಾಯಮೂರ್ತಿಗಳು, ಹಿರಿಯ ವಕೀಲರು, ಮಾಜಿ ಆಡಳಿತ ಅಧಿಕಾರಿಗಳು, ಪತ್ರಕರ್ತರು ಉಪಸ್ಥಿತರಿರುವರು. ಈ ಅಧಿವೇಶನದಲ್ಲಿ ಹಿಂದೂಗಳ ರಕ್ಷಣೋಪಾಯ, ಹಿಂದೂ ರಾಷ್ಟ್ರಕ್ಕಾಗಿ ಸಾಂವಿಧಾನಿಕ ಪ್ರಯತ್ನ, ಮಂದಿರ ಸಂಸ್ಕೃತಿಯ ರಕ್ಷಣೆಯ ಉಪಾಯ, ಜಾಗತಿಕ ಸ್ತರದಲ್ಲಿ ಹಿಂದುತ್ವದ ರಕ್ಷಣೆ, ದೇಶದ ರಕ್ಷಣೆಗೆ ಸವಾಲನ್ನೊಡ್ಡುವ ಹಲಾಲ್ ಅರ್ಥವ್ಯವಸ್ಥೆಯ ಮೇಲಿನ ಉಪಾಯ, ಮುಂತಾದ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ ಸರ್ವಾನುಮತದಿಂದ ಕೃತಿಯ ದಿಶೆಯನ್ನು ನಿಶ್ಚಯಿಸಲಾಗುವುದು ಮತ್ತು ವರ್ಷವಿಡೀ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ಆ ದಿಶೆಯಲ್ಲಿ ಪ್ರಯತ್ನಿಸುವರು. ಈ ಅಧಿವೇಶನವನ್ನು ಹಿಂದೂ ಜನಜಾಗೃತಿ ಸಮಿತಿಯ ಯು-ಟ್ಯೂಬ್, ಫೇಸ್‌ಬುಕ್ ಮತ್ತು ಎಕ್ಸ್ ಅಕೌಂಟನಲ್ಲಿ ಹಾಗೂ ತಿತಿತಿ.hiಟಿಜuರಿಚಿgಡಿuಣi.oಡಿg ಈ ಜಾಲತಾಣದಲ್ಲಿ ನೇರ (ಲೈವ್) ಪ್ರಸಾರ ಮಾಡಲಾಗುವುದು.

೬. ಇಂದಿನ ತನಕದ ಜರುಗಿದ ಅಧಿವೇಶನಗಳ ಸಂಕ್ಷಿಪ್ತ ಫಲನಿಷ್ಪತ್ತಿ !

ಅ. ದೇಶಾದ್ಯಂತದ ೩೫೦ ಕ್ಕಿಂತಲೂ ಹೆಚ್ಚಿನ ಸಂಘಟನೆಗಳು ಸಂಘಟಿತವಾಗಿ ರಾಷ್ಟ್ರ-ಧರ್ಮಕ್ಕಾಗಿ ಕಾರ್ಯ ಮಾಡುತ್ತಿವೆ.

ಆ. ಅಧಿವೇಶನದಲ್ಲಿ ಸ್ಥಾಪನೆಯಾದ ‘ರಾಷ್ಟ್ರೀಯ ಹಿಂದೂ ಆಂದೋಲನಗಳ ಮೂಲಕ ದೇಶಾದ್ಯಂತದ ವಿವಿಧ ಸಂಘಟನೆಗಳು ಒಟ್ಟಾಗಿ ೧೭೭೬ ಕ್ಕೂ ಹೆಚ್ಚು ರಾಷ್ಟ್ರ-ಧರ್ಮಗಳ ಮೇಲಿನ ಆಘಾತಗಳ ವಿರುದ್ಧ ಯಶಸ್ವಿ ಆಂದೋಲನಗಳನ್ನು ನಡೆಸಿವೆ.

ಇ. ಶ್ರೀ ತುಳಜಾಪುರ ಮಂದಿರ ಸಂಸ್ಥಾನ, ಕೊಲ್ಹಾಪುರದ ಶ್ರೀ ಮಹಾಲಕ್ಷ್ಮೀ ಮಂದಿರ, ಪಂಢರಪುರದ ಶ್ರೀ ವಿಠಲ ಮಂದಿರ, ಶಿರ್ಡಿಯ ಶ್ರೀ ಸಾಯಿಬಾಬಾ ಸಂಸ್ಥಾನ ಇಂತಹ ಅನೇಕ ದೇವಸ್ಥಾನಗಳಲ್ಲಾಗುತ್ತಿದ್ದ ಭ್ರಷ್ಟಾಚಾರವನ್ನು ಬಯಲಿಗೆಳೆಯಲಾಯಿತು. ಈ ಅಧಿವೇಶನದಿಂದ ಮಂದಿರಗಳ ಸಂಘಟನೆಗಾಗಿ ಮತ್ತು ಮಂದಿರಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಲು ಮಂದಿರ ಮಹಾಸಂಘದ ಕಾರ್ಯವು ಇಂದು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯಗಳಲ್ಲಿ ನಡೆಯುತ್ತಿದೆ. ಅಂದಾಜು ೧೪ ಸಾವಿರ ದೇವಸ್ಥಾನಗಳು ಇಂದು ಈ ದೃಷ್ಟಿಯಿಂದ ಸಂಘಟಿತವಾಗಲು ಸಂಪರ್ಕದಲ್ಲಿವೆ. ಇದು ಬಹುದೊಡ್ಡ ಕಾರ್ಯವಾಗಿದೆ. ಇದೇ ಮಾಧ್ಯಮದಿಂದ ಮಹಾರಾಷ್ಟ್ರ ಮತ್ತು ಕರ್ನಾಟಕದ ೫೯೭ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜ್ಯಾರಿಯಾಗಿದೆ.

ಈ. ಕೋಟೆಗಳ ಮೇಲಿನ ಅತಿಕ್ರಮಣದ ವಿರುದ್ಧ ಮಹಾರಾಷ್ಟ್ರ ರಾಜ್ಯವ್ಯಾಪಿ ಆಂದೋಲನ ನಡೆಸಲಾಗಿದೆ. ಅಲ್ಲಿ ಸರಕಾರವು ಅದರತ್ತ ಗಮನ ಹರಿಸಿ ಮಾಹಿಮ, ಲೊಹಗಡ ಮುಂತಾದ ಕೋಟೆಗಳ ಮೇಲಿನ ಅತಿಕ್ರಮಣವನ್ನು ತೆರವು ಮಾಡಲು ಆರಂಭಿಸಿದೆ. ಇಂತಹ ಅನೇಕ ಕೆಲಸಗಳನ್ನು ಹೇಳಬಹುದು

೭. ಹಿಂದೂ ರಾಷ್ಟ್ರದಲ್ಲಿಯೇ ನಿಜವಾದ ಅರ್ಥದಿಂದ ಸುರಕ್ಷಿತ ಹಾಗೂ ಸಮೃದ್ಧಿಯ ‘ಗ್ಯಾರಂಟಿ’ !

ಇವೆಲ್ಲವುಗಳಿಂದ ನಿಮಗೆ, ‘ಅಬ್ ಕಿ ಬಾರ, ಹಿಂದೂ ರಾಷ್ಟ್ರ ಕಿ ಪುಕಾರ ಎಷ್ಟು ಅವಶ್ಯಕವಿದೆ ಎಂದು ಗಮನಕ್ಕೆ ಬಂದಿರಬಹುದು. ಅದಕ್ಕಾಗಿ ‘ನಾನು ಮತ್ತು ನನ್ನದು ಎಂಬ ಸಂಕುಚಿತ ವಿಚಾರವನ್ನು ಬದಿಗಿರಿಸಿ ವಿಶ್ವದ ಕಲ್ಯಾಣದ ವಿಚಾರ ಮಾಡುವ ಹಿಂದೂ ರಾಷ್ಟ್ರದ ಸಾಕ್ಷೀದಾರರು ಮಾತ್ರವಲ್ಲ ಪಾಲುದಾರರಾಗಿರಿ ! ಹಿಂದೂ ರಾಷ್ಟ್ರದಲ್ಲಿಯೇ ನಾಗರಿಕರಿಗೆ ನಿಜವಾದ ಅರ್ಥದಿಂದ ಸುರಕ್ಷಿತ ಮತ್ತು ಸಮೃದ್ಧಿಯ ‘ಗ್ಯಾರಂಟಿ’ ಸಿಗಲಿದೆ !

ಜಯತು ಜಯತು ಹಿಂದೂರಾಷ್ಟ್ರಮ್ !

Leave a Reply

Your email address will not be published. Required fields are marked *

error: Content is protected !!