ಶ್ರೀರಾಮ ಮಂದಿರದ ನಂತರ ಈಗ ಹಿಂದೂ ರಾಷ್ಟ್ರಕ್ಕಾಗಿ ಸಂಘಟಿತ ಪ್ರಯತ್ನ ಆವಶ್ಯಕ ! – ಶ್ರೀ. ಮೋಹನ ಗೌಡ

ಬೆಂಗಳೂರು – 500 ವರ್ಷಗಳ ಸಂಘರ್ಷದ ನಂತರ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಪ್ರಭು ಶ್ರೀರಾಮನ ಮಂದಿರ ಹಿಂದೂ ರಾಷ್ಟ್ರದ ನಿರ್ಮಾಣದ ದಿಶೆಗೆ ಮೊದಲ ಹೆಜ್ಜೆಯಾಗಿದೆ ಎಂಬುದು ನಮ್ಮ ಶ್ರದ್ಧೆಯಾಗಿದೆ; ಆದರೆ ಲೋಕಸಭಾ ಚುನಾವಣೆಯ ನಂತರ ದೇಶದ ಪರಿಸ್ಥಿತಿ ನೋಡಿದರೆ ಹಿಂದೂಗಳ ಸಮಸ್ಯೆಗಳನ್ನು ಪರಿಹರಿಸಲು ಹಿಂದೂಗಳೇ ಈಕೋಸಿಸ್ಟಮ್ ನಿರ್ಮಿಸಿ ಆಯೋಜನಾಬದ್ಧ ಪದ್ಧತಿಯಿಂದ ಕಾರ್ಯ ಮಾಡೋದು ಅವಶ್ಯಕವಾಗಿದೆ. ಈ ಬಾರಿಯ ಚುನಾವಣೆಯ ಸಾರ್ವಜನಿಕ ವರದಿಯಿಂದ ಭಾರತದ ಸ್ವಾತಂತ್ರ್ಯದ ನಂತರ 1950 ರಿಂದ 2015 ಈ 65 ವರ್ಷದ ಸಮಯದಲ್ಲಿ ಹಿಂದೂಗಳ ಜನಸಂಖ್ಯೆ ಸುಮಾರು ಶೇಕಡಾ 8 ರಷ್ಟು ಕಡಿಮೆಯಾಗಿದೆ, ಹಾಗೂ ಅದರ ತುಲನೆಯಲ್ಲಿ ಈ ಕಾಲಾವಧಿಯಲ್ಲಿ ಮುಸಲ್ಮಾನರ ಜನಸಂಖ್ಯೆ ಸುಮಾರು ಶೇಕಡಾ 43.15 ರಷ್ಟು ಹೆಚ್ಚಾಗಿದೆ. ಈ ವೃದ್ಧಿ ಅಸ್ವಾಭಾವಿಕ ಎಂಬುದು ಸ್ಪಷ್ಟವಾಗುತ್ತದೆ; ಏಕೆಂದರೆ ಭಾರತದಲ್ಲಿ ಅಕ್ರಮ ಬಾಂಗ್ಲಾದೇಶಿಯರ ಜೊತೆಗೆ ರೋಹಿಂಗ್ಯಾ ನುಸುಳಕೋರರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಪಾಸ್ಪೋರ್ಟ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹೀಗೆ ಭಾರತೀಯ ನಾಗರಿಕತ್ವದ ಗುರುತಿನ ಚೀಟಿಗಳು ಮಾಡಿಕೊಡುವುವವರ ಮೇಲೆ ದೇಶದ್ರೋಹದ ದೂರು ದಾಖಲಿಸಬೇಕು. ಈ ವರ್ಷ ಚುನಾವಣೆಯಲ್ಲಿ ಬಾಂಗ್ಲಾದೇಶಿ ನುಸುಳುಕೋರರು ಮತದಾನ ಮಾಡಿರುವ ಘಟನೆಗಳು ಬೆಳಕಿಗೆ ಬಂದಿವೆ. ಮುಂಬಯಿಯಲ್ಲಿ ಇಂತಹ ಕೆಲವು ನುಸುಳುಕೋರರನ್ನು ಪೊಲೀಸರು ಬಂಧಿಸಿದ್ದಾರೆ, ಹೀಗೆ ನಕಲಿ ದಾಖಲೆಗಳನ್ನಿಟ್ಟುಕೊಂಡು ಮತ ಚಲಾಯಿಸುವುದು ಭಾರತದ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. ಆದ್ದರಿಂದ 2011 ನಂತರ 2021 ರಲ್ಲಿ ಜನಗಣತಿ ಆಗದೇ ಇರುವುದರಿಂದ ಕಳೆದ 13 ವರ್ಷದಲ್ಲಿ ಭಾರತದ ಜನಸಂಖ್ಯೆಯಲ್ಲಿ ಏನು ಪರಿವರ್ತನೆ ಆಗಿದೆ, ಇದು ತಕ್ಷಣ ಜನಗಣತಿ ನಡೆಸಿ ಜನರ ಎದುರು ಮಂಡಿಸುವುದು ಅವಶ್ಯಕವಾಗಿದೆ. ಇದರ ಜೊತೆಗೆ CAA ಮತ್ತು NRC ಸಂಪೂರ್ಣ ಭಾರತದಲ್ಲಿ ಕೂಡಲೇ ಜಾರಿಗೊಳಿಸಬೇಕು.

 

 

 

ದೇಶದ ರಕ್ಷಣೆಯ ವಿಚಾರ ಮಾಡಿದರೆ, ಮಾತಾ ವೈಷ್ಣೋದೇವಿ ದರ್ಶನಕ್ಕೆ ಹೋಗುವ ಭಕ್ತರ ಬಸ್ಸಿನ ಮೇಲೆ ಭಯೋತ್ಪಾದಕ ದಾಳಿ ಎದುರಿಸಬೇಕಾಯಿತು, ಅಂದರೆ ಕಾಶ್ಮೀರದಲ್ಲಿನ ಭಯೋತ್ಪಾದನೆ ಈಗ ನಿಧಾನವಾಗಿ ಹಿಂದೂ ಬಹುಸಂಖ್ಯಾತ ಇರುವ ಜಮ್ಮುವಿನ ಕಡೆಗೆ ಮುನ್ನುಗುತ್ತಿದೆ. ಪಂಜಾಬದಲ್ಲಿ ಖಲಿಸ್ತಾನಿವಾದಿ ಪ್ರತಿಭಟನೆ ಜೊತೆಗೆ ರಾಷ್ಟ್ರ ವಿರೋಧಿ ಮತ್ತು ವಿದೇಶಿ ಶಕ್ತಿಗಳು ಭಾರತವನ್ನು ಅಸ್ಥಿರಗೊಳಿಸಲು ಶಕ್ತಿಯುತವಾಗಿ ಸಕ್ರಿಯವಾಗಿವೆ. ಭಾರತದ ಜೊತೆಗೆ ವಿಶ್ವದಾದ್ಯಂತ ಹಿಂದುಗಳ ಮೇಲೆ ದಾಳಿಗಳು ಹೆಚ್ಚಾಗಿವೆ. ಇಂತಹ ಸಮಯದಲ್ಲಿ ಹಿಂದೂಗಳಿಗೆ ಜಾತಿ ಜಗಳಗಳಲ್ಲಿ ತೊಡಗಿಸಿ ಅವರಲ್ಲಿ ಬಿರುಕು ಮೂಡಿಸುವ ಷಡ್ಯಂತ್ರ ರಚಿಸಲಾಗಿದೆ; ಆದರೂ ಹಿಂದೂ ರಾಷ್ಟ್ರದ ಮಾರ್ಗದಲ್ಲಿ ಇಂತಹ ಎಷ್ಟೇ ಅಡೆತಡೆಗಳು ಬಂದರೂ ಹಿಂದುಗಳು ಸಂಘಟಿತ ಪ್ರಯತ್ನದಿಂದ ವಿರೋಧಿಗಳು ತಮ್ಮ ಷಡ್ಯಂತ್ರದಿಂದ ಗೆಲ್ಲಲು ಸಾಧ್ಯವಿಲ್ಲ. ವೈಶ್ವಿಕ ಮಟ್ಟದಲ್ಲಿ ವಿವಿಧ ದೇಶದಲ್ಲಿ ಹೆಚ್ಚುತ್ತಿರುವ ಯುದ್ಧ ಅಸ್ಥಿರತೆಯನ್ನು ನೋಡಿದರೆ ಹಿಂದೂ ಧರ್ಮವೊಂದೇ ‘ವಿಶ್ವಬಂದುತ್ವ’ ಮತ್ತು ‘ವಸುದೈವ ಕುಟುಂಬಕಮ್’ ಈ ಪರಿಕಲ್ಪನೆಯಿಂದ ಸಂಪೂರ್ಣ ಸಮಾಜವನ್ನು ಜೋಡಿಸುತ್ತಿದೆ ಮತ್ತು ಒಗ್ಗಟ್ಟಿನಿಂದ ಇಡಲು ಸಾಧ್ಯವಾಗುತ್ತದೆ. ಆದ್ದರಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ಗತಿ ನೀಡಲು ಪ್ರತಿ ವರ್ಷದಂತೆ ಈ ವರ್ಷವೂ 12 ನೆಯ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಅಂದರೆ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಆಯೋಜನೆ ಮಾಡಲಾಗಿದೆ. ಈ ಮಹೋತ್ಸವ ಜೂನ್ 24 ರಿಂದ 30, 2024 ವರೆಗೆ, ಗೋವಾ ಫೋಂಡಾದಲ್ಲಿನ ಶ್ರೀ ರಾಮನಾಥ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ವೇಳೆ ಕಾರ್ಮಿಕ ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ ಶ್ರೀ. ಮಲ್ಲಿಕಾರ್ಜುನ, ನ್ಯಾಯವಾದಿ ಪ್ರಸನ್ನ ಡಿ.ಪಿ, ರಾಷ್ಟ್ರ ಧರ್ಮ ಸಂಘಟನೆಯ ಸಂಸ್ಥಾಪಕರಾದ ಶ್ರೀ. ಸಂತೋಷ್ ಕೆಂಚಾಂಬ , ಆನೇಕಲ್‌ನ ನಾಗರಘಟ್ಟದ ಶ್ರೀ. ಚೌಡೇಶ್ವರಿ ದೇವಸ್ಥಾನದ ಕಾರ್ಯದರ್ಶಿ ಶ್ರೀ. ಸೋಮೇಶ ರೆಡ್ಡಿ ಇವರೂ ಉಪಸ್ಥಿತರಿದ್ದರು.

 

 

 

ಶ್ರೀ. ಮೋಹನ ಗೌಡ ಇವರು ಮುಂದೆ ಮಾತನಾಡಿ, ಅಧಿವೇಶನದಲ್ಲಿ ಹಿಂದೂ ರಾಷ್ಟ್ರಕ್ಕೆ ಸಂಬಂಧಿತ ವಿವಿಧ ವಿಷಯಗಳ ಬಗ್ಗೆ ವಿಶೇಷ ಗಣ್ಯರ ಸಂವಾದದ ಜೊತೆಗೆ ಪ್ರತ್ಯಕ್ಷ ಸಮಾನ ಕೃತಿ ಕಾರ್ಯಕ್ರಮ ನಿಶ್ಚಿತಗೊಳಿಸಲು ಗುಂಪು ಚರ್ಚೆ ನಡೆಯುವುದು. ಸನಾತನ ಧರ್ಮದ ವೈಚಾರಿಕ ಸುರಕ್ಷೆ, ಧರ್ಮ ಮತ್ತು ರಾಷ್ಟ್ರ ವಿರೋಧಿ ನೆರೆಟಿವ್ ಗಳಿಗೆ ಪ್ರತ್ಯುತ್ತರ, ಹಿಂದೂ ಸಮಾಜದ ರಕ್ಷಣೆಯ ಉಪಾಯ, ಹಿಂದೂ ರಾಷ್ಟ್ರಕ್ಕಾಗಿ ಸಂವಿಧಾನಿಕ ಪ್ರಯತ್ನ, ಮಂದಿರ ಸಂಸ್ಕೃತಿಯ ರಕ್ಷಣೆಯ ಉಪಾಯ, ವೈಶ್ವಿಕ ಮಟ್ಟದಲ್ಲಿ ಹಿಂದುತ್ವದ ರಕ್ಷಣೆ, ದೇಶದ ಆರ್ಥಿಕ ವ್ಯವಸ್ಥೆಗೆ ಸವಾಲಾಗಿರುವ ಹಲಾಲ್ ಅರ್ಥವ್ಯವಸ್ಥೆಯ ಬಗ್ಗೆ ಉಪಾಯ, ಲ್ಯಾಂಡ್ ಜಿಹಾದ್, ಕಾಶಿ ಮಥುರಾ ಮುಕ್ತಿ, ಕೋಟೆ-ದುರ್ಗಗಳ ಮೇಲಿನ ಅತಿಕ್ರಮಣದಂತಹ ವಿವಿಧ ವಿಷಯಗಳ ಜೊತೆಗೆ ಹಿಂದೂ ರಾಷ್ಟ್ರದ ಅಡಿಪಾಯಕ್ಕಾಗಿ ಆವಶ್ಯಕ ವಿವಿಧ ವಿಷಯಗಳ ಬಗ್ಗೆ ಈ ಮಹೋತ್ಸವದಲ್ಲಿ ವಿಚಾರಮಂಥನ ನಡೆಯುವುದು. ಈ ಅಧಿವೇಶನಕ್ಕೆ ಅಮೇರಿಕಾ, ಇಂಗ್ಲೆಂಡ್ ಮತ್ತು ಬಾಂಗ್ಲಾದೇಶದ ಪ್ರತಿನಿಧಿಗಳು ಬರುವರು. ಜೊತೆಗೆ ಭಾರತದ 26 ರಾಜ್ಯಗಳಿಂದ ಸಾವಿರಕ್ಕಿಂತಲೂ ಹೆಚ್ಚಿನ ಸಂಘಟನೆಗಳು 2000 ಕ್ಕಿಂತಲೂ ಹೆಚ್ಚಿನ ಪ್ರತಿನಿಧಿಗಳಿಗೆ ಆಮಂತ್ರಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಇಂದೋರಿನ ಮಹಾಮಂಡಲೇಶ್ವರ ಸ್ವಾಮಿ ಪ್ರಣವಾನಂದ ಸರಸ್ವತಿ ಮಹಾರಾಜ, ಇಂಟರ್ನ್ಯಾಷನಲ್ ವೇದಾಂತ ಸೊಸೈಟಿಯ ಸ್ವಾಮಿ ನಿರ್ಗುಣಾನಂದಗಿರಿ ಮಹಾರಾಜ್, ಛತ್ತೀಸ್ಗಡದ ಶ್ರೀರಾಮಬಾಲಕದಾಸ ಮಹಾತ್ಯಾಗಿ ಮಹಾರಾಜ, ಛತ್ತಿಸ್ಗಢದ ಶದಾಣಿ ದರ್ಬಾರಿನ ಪರಮಪೂಜ್ಯ ಡಾ. ಯುಧಿಷ್ಠಿರಲಾಲ್ ಮಹಾರಾಜ ಮುಂತಾದ ಸಂತರ ವಂದನೀಯ ಉಪಸ್ಥಿತಿ ಈ ಅಧಿವೇಶನದಲ್ಲಿ ಇರುವುದು.
ಇದಲ್ಲದೆ ಮುಖ್ಯವಾಗಿ ಶ್ರೀರಾಮ ಜನ್ಮಭೂಮಿ ಮುಕ್ತಿಗಾಗಿ, ಅದರ ಜೊತೆಗೆ ಕಾಶಿಯ ಜ್ಞಾನವಾಪಿ ಮಸೀದಿಯ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಿದ ನ್ಯಾಯವಾದಿ (ಪೂ.) ಹರಿಶಂಕರ ಜೈನ್ ಇವರು ಮತ್ತು ಅವರ ಸುಪುತ್ರ ನ್ಯಾಯವಾದಿ ವಿಷ್ಣು ಶಂಕರ ಜೈನ, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ, ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷ ಶ್ರೀ. ರಣಜಿತ ಸಾವರ್ಕರ, ತೆಲಂಗಾಣದ ಹಿಂದುತ್ವನಿಷ್ಠ ಸಂಸದ ಟಿ. ರಾಜಸಿಂಹ, ಹಿಂದೂ ಇಕೋ ಸಿಸ್ಟಮ್ ನ ಸಂಸ್ಥಾಪಕ ಶ್ರೀ. ಕಪಿಲ ಮಿಶ್ರಾ, ಭಾರತದ ಮಾಜಿ ಸೂಚನಾ ಆಯುಕ್ತ ಮತ್ತು ಸೇವ್ ಕಲ್ಚರ್ ಸೇವ್ ಭಾರತ್ ದ ಸಂಸ್ಥಾಪಕ ಶ್ರೀ. ಉದಯ ಮಾಹೂರಕರ ಇವರ ಜೊತೆಗೆ ಹಿರಿಯ ನ್ಯಾಯವಾದಿಗಳು, ಉದ್ಯಮಿಗಳು, ವಿಚಾರವಂತರು, ಲೇಖಕರು, ಪತ್ರಕರ್ತರು, ಮಂದಿರ ವಿಶ್ವಸ್ಥರು ಇವರ ಜೊತೆಗೆ ಅನೇಕ ಸಮವಿಚಾರಧಾರೆಯ ಸಾಮಾಜಿಕ, ರಾಷ್ಟ್ರೀಯ ಮತ್ತು ಆಧ್ಯಾತ್ಮಿಕ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿರುವರು. ಇದರ ಜೊತೆಗೆ ಬೆಂಗಳೂರಿನಿಂದ ಯುವಾ ಬ್ರಿಗೇಡ್‌ನ ಸಂಸ್ಥಾಪಕರಾದ ಶ್ರೀ. ಚಕ್ರವರ್ತಿ ಸೂಲಿಬೆಲೆ, ವಿಧಾನ ಪರಿಷತ್ ನ ಮಾಜಿ ಸದಸ್ಯೆ ಪ್ರೊಫೆಸರ್ ಎಸ್.ಆರ್ ಲೀಲಾ, ರಾಷ್ಟ್ರ ಧರ್ಮ ಸಂಘಟನೆಯ ಸಂಸ್ಥಾಪಕರಾದ ಶ್ರೀ. ಸಂತೋಷ್ ಕೆಂಚಾಂಬ , ನ್ಯಾಯವಾದಿ ಪ್ರಸನ್ನ ಡಿ.ಪಿ ಮತ್ತಿತರರು ಈ ಮಹೋತ್ಸವದಲ್ಲಿ ಇರುವರು.

ಈ ಅಧಿವೇಶನದ ನೇರಪ್ರಸಾರ ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣ www.HinduJagruti.org ಮೂಲಕ, ಇದರ ಜೊತೆಗೆ ಸಮಿತಿಯ YouTube.com/HinduJagruti ಯೂಟ್ಯೂಬ್ ಚಾನೆಲ್ ಮತ್ತು facebook.com/hjshindi1 ಈ ಫೇಸ್ಬುಕ್ ಪೇಜ್ ಮೂಲಕ ಮಾಡಲಾಗುವುದು. ಜಗತ್ತಿನಾದ್ಯಂತದ ಹಿಂದುತ್ವನಿಷ್ಠರು ಈ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಲಾಭ ಪಡೆಯಲಿ, ಎಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರೆ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!