ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಬಡ್ಡಿಹಳ್ಳಿ ಗೋಕುಲ ಬಡಾವಣೆಯಲ್ಲಿ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮ ದಲ್ಲಿ ಮಕ್ಕಳಿಗೆ ಶ್ರೀ ಮರಿಬಸಪ್ಪನವರ ತಂದೆತಾಯಿ ಸೇವಾ ಸಂಸ್ಥೆ ವತಿಯಿಂದ ಮಕ್ಕಳಿಗೆ ನೂಟ್ ಗಳನ್ನು ವಿತರಣೆ ಮಾಡಿ ಮಾತನಾಡುತಾ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪ್ರಕೃತಿಯಲ್ಲಿ ಹಸಿರು ತುಂಬಿರುವ ತನಕ ನಮ್ಮ ಉಸಿರು ಉತ್ತಮ ಸ್ಥಿತಿ ಯಲ್ಲಿ ಇರುತ್ತದೆ. ಪರಿಸರ ನಮಗೆ ಬೇಕಾದ್ದನ್ನು ಕೊಡುತ್ತಿದೆ. ನಾವು ಪರಿಸರಕ್ಕೆ ಏನನ್ನೂ ಕೊಡುತ್ತಿದ್ದೇವೆ. ಇದ್ದ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಪರಿಸರ ನಮ್ಮನ್ನು ಕಂಡು ಪಶ್ಚಾತ್ತಾಪ ಪಡುತ್ತಿದೆ. ಪ್ರಕೃತಿ ಕೊಟ್ಟ ಕೊಡುಗೆಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿ ಕೊಂಡು ಪರಿಸರ ರಕ್ಷಿಸ ಬೇಕಾಗುತ್ತದೆ. ಇನ್ನು ಮಕ್ಕಳ ವಿದ್ಯಾಭ್ಯಾಸ ಬಹು ಮುಖ್ಯ. ನಮ್ಮಲ್ಲಿ ಬಡತನ ನಮ್ಮ ಬಹು ದೊಡ್ಡ ಶತೃ. ಶತೃ ವಿರುದ್ದ ಹೋರಾಡಲು ವಿದ್ಯೆ ಅತ್ಯಾವಶ್ಯಕ. ಬಡಮಕ್ಕಳಿಗೆ ಉಳ್ಳವರು ತಮ್ಮ ಕೈಲಾದ ಸಹಾಯ ಮಾಡವ ಮೂಲಕ ಬಡವರ ಮಕ್ಕಳು ಬೆಳೆಯಲು ಸಹಕಾರ ಜೊತೆಗೆ ಸಹಾಯ ಮಾಡವುದು.
ಸರ್ ಎಂ ವಿಶ್ವೇಶ್ವರಯ್ಯ. ಅಬ್ದುಲ್ ಕಲಾಂ. ಕುವೆಂಪು ಜಿ ಎಸ್ ಶಿವರುದ್ರಪ್ಪ ದಾ ರಾ ಬೇಂದ್ರೆ. ಹೀಗೆ ಸಾಹಿತಿಗಳು ಕವಿಗಳು ನಮ್ಮ ಸಮಾಜಕ್ಕೆ ನೀಡಿರುವ ಕೊಡುಗೆ ನಾವು ಎಂದು ಮರೆಯುವಂತಿಲ್ಲ. ಇಂದಿನ ಶಿಕ್ಷಣ ಹತ್ಯಧುನಿಕ ತಂತ್ರಜ್ಞಾನದಿಂದ ಕೂಡಿದ್ದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಪತದತ್ತ ಕೊಂಡುಯುವುದು ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಅತ್ಯಾವಶ್ಯಕವಾಗಿದೆ. ಪ್ರತಿವರ್ಷ ಮಕ್ಕಳಿಗೆ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇವೆ. ಉಳಿದ ಸ್ಥಿತಿ ವಂತರು ಸಹಕಾರ ನೀಡಲು ಮನವಿ ಮಾಡಿದರು.
ಸಮಾರಂಭದಲ್ಲಿ ಶ್ರೀ ಮರಿಬಸಪ್ಪ ನಿವೃತ್ತ ಪ್ರಾಚಾರ್ಯರು. ಮುಖ್ಯ ಶಿಕ್ಷಕ ದೇವರಾಜು. ಅಗ್ನಿಶಾಮಕ ಧಳದ ಸಬ್ ಇನ್ಸ್ಪೆಕ್ಟರ್ ಬಸವರಾಜಪ್ಪ. ಮೂರ್ತಿ. ಸಿದ್ಧಲಿಂಗಪ್ಪ. ಯುವನಾಯಕ ನಿಶ್ಚಲ್. ಶ್ರೀ ಶಿವಕುಮಾರ್. ಹಾಗು ಅನುಕುಮಾರ್ ಧರ್ಮಸ್ಥಳ ಸೇವಾಸಂಸ್ಥೆ ಮುಖ್ಯಸ್ಥ ರು ಹಾಜರಿ ಇದ್ದರು. ದ್ರಾಕ್ಷಾಯಣಮ್ಮ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ವಂದಿಸಿದರು. ರಾಜೇಶ್ವರಿ ನಿರೂಪಣೆ, ಶಶಿಕಲ ಸಸಿ ನೆಡುವ ಕಾರ್ಯಕ್ರಮ ನೆಡೆಸಿ ಕೊಟ್ಟರು.ದೈಹಿಕ ಶಿಕ್ಷಕಿ ಕಲಾವತಿ ಸಮಾರಂಭ ಸಂಘಟಿಸಿದ್ದರು.