ಮಾನವೀಯತೆ ಮರೆತ ತುಮಕೂರು ಜಿಲ್ಲಾ ಅರಣ್ಯ ಇಲಾಖೆ !?

ಗಾಯಗೊಂಡ ಜಿಂಕೆಗೆ ಚಿಕಿತ್ಸೆ ನೀಡಲು ಹಿಂದೇಟು ತುಮಕೂರು ಜಿಲ್ಲಾ ಅರಣ್ಯ ಇಲಾಖೆಗೆ ನಾಚಿಕೆಯಾಗುವುದಿಲ್ಲವೇ…..?????

ತುಮಕೂರು – ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೋಟ್ಯಂತರ ರೂ ಗಳನ್ನು ಪ್ರತಿವರ್ಷ ಖರ್ಚು ಮಾಡಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಹಣ ವ್ಯಯ ಮಾಡುತ್ತಿದೆ. ಇದರ ನಡುವೆ ಅರಣ್ಯ ಇಲಾಖೆಯು ಸಹ ಪ್ರವಾಸೋದ್ಯಮ ಇಲಾಖೆಯೊಂದಿಗೆ ಕೈಜೋಡಿಸಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಜಂಟಿಯಾಗಿ ಪ್ರವಾಸೋದ್ಯಮ ಸ್ಥಳಗಳನ್ನು ಅಭಿವೃದ್ಧಿ ಮಾಡಲು ಸಾಕಷ್ಟು ಹಣ ಖರ್ಚು ಮಾಡುವ ಇಲಾಖೆಗಳಲ್ಲಿ ಅರಣ್ಯ ಇಲಾಖೆಯು ಕೂಡ ಒಂದಾಗಿದೆ.

 

 

 

ಇನ್ನು ಈ ಎರಡು ಇಲಾಖೆಗಳು ಪ್ರವಾಸೋದ್ಯಮದ ಮೇಲೆ ಕಣ್ಣಿಟ್ಟು ಹಣ ವ್ಯಯ ಮಾಡಿ ಪ್ರವಾಸೋದ್ಯಮ ಸ್ಥಳಗಳನ್ನ ಅಭಿವೃದ್ಧಿಪಡುತ್ತ ಅವುಗಳಿಂದ ಬರುವ ಆದಾಯವನ್ನು ಸರ್ಕಾರದ ಬೊಕ್ಕಸಕ್ಕೆ ಬಳಸಿಕೊಳ್ಳುತ್ತಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ತುಮಕೂರು ಜಿಲ್ಲೆಯ ಅರಣ್ಯ ಇಲಾಖೆ ಈ ಎಲ್ಲಾ ಮಾರ್ಗಗಳಿಗೂ ವಿರುದ್ಧವಾಗಿದೆ ಎಂದರೆ ತಪ್ಪಾಗಲಾರದು.

 

 

ಕಾರಣ ತುಮಕೂರು ನಗರದಿಂದ ಸಮೀಪದಲ್ಲಿ ಇರುವ ನಾಮದ ಚಿಲುಮೆ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಇನ್ನು ನಾಮದ ಚಿಲುಮೆಗೆ ತನ್ನದೇ ಆದ ಇತಿಹಾಸ ಇದ್ದು ಅವುಗಳೊಂದಿಗೆ ಅರಣ್ಯ ಇಲಾಖೆಯು ಸಹ ಪ್ರವಾಸೋದ್ಯಮ ಚಟುವಟಿಕೆಗಳನ್ನ ಉತ್ತೇಜಿಸುತ್ತ ಬರುವ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಒಂದಷ್ಟು ಜಿಂಕೆಗಳನ್ನು ಸಹ ತಂದು ನಾಮದ ಚಿಲುಮೆಯ ಅರಣ್ಯ ಪ್ರದೇಶದಲ್ಲಿ ಬಿಟ್ಟು ಪ್ರವಾಸಿಗರನ್ನು ಆಕರ್ಷಣೆ ಮಾಡುತ್ತಾ ಬಂದಿದೆ.

 

ಇದರ ನಡುವೆ ನಾಮದ ಚಿಲುಮೆಯಲ್ಲಿ ಇರುವ ಜಿಂಕೆಗಳ ಕೇಂದ್ರದಲ್ಲಿ ಜಿಂಕೆಯೊಂದು ಜಿಂಕೆಗಳ ನಡುವಿನ ಕಾದಾಟದಲ್ಲಿ ಗಾಯಗೊಂಡು ಕರುಳು ಆಚೆ ಬಂದಿದ್ದು ಹಲವು ದಿನಗಳೆ ಕಳೆದಿವೆ . ಅದ್ಯಾಕೋ ಇದುವರೆಗೂ ಈ ನೋವಿನ ಸಂಗತಿ ತುಮಕೂರು ಜಿಲ್ಲಾ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗಮನಕ್ಕೆ ಬಂದಿಲ್ಲದಂತೆ ಕಾಣುತ್ತಿದೆ.

 

ಇನ್ನು ಹಲವು ದಿನಗಳಿಂದ ಗಾಯಗೊಂಡಿರುವ ಜಿಂಕೆ ಬರುವ ಪ್ರವಾಸಿಗರ ಮುಂದೆ ಚೀರುಡುತ್ತಾ ತನ್ನ ನೋವನ್ನು ಹಾಗೂ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದು ಬರುವ ಪ್ರವಾಸಿಗರಿಗೆ ಜಿಂಕೆಯ ಮುಖ ರೋದನೆ ಅರ್ಥವಾಗುತ್ತಿದ್ದರು ಸಹ ಅಲ್ಲಿನ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳಿಗೆ ಇದುವರೆಗೂ ಅರ್ಥವಾಗದೆ ಇರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

 

ಇನ್ನು ಗಾಯಗೊಂಡಿರುವ ಜಿಂಕೆಯನ್ನು ಹಾರೈಕೆ ಮಾಡಿ ಸೂಕ್ತ ಚಿಕಿತ್ಸೆ ನೀಡಲು ಹಲವು ಪ್ರವಾಸಿಗರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು ಸಹ ಇದುವರೆಗೂ ಯಾವುದೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮುಂದಾಗದೆ ಇರುವುದರಿಂದ ಜಿಂಕೆ ಸಾಕಷ್ಟು ನೋವು ತಿಂದು ಬರುವ ಪ್ರವಾಸಿಗರ ಮುಂದೆ ಕೂಗಾಡುತ್ತಿರುವುದು ಎಲ್ಲರ ಮನವು ಕಲಕುವಂತಿದೆ.

 

ಇನ್ನಾದರೂ ನಿದ್ದೆಯಲ್ಲಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳು ಎಚ್ಚೆತ್ತು ಗಾಯಗೊಂಡಿರುವ ಜಿಂಕೆಗೆ ಸೂಕ್ತ ಚಿಕಿತ್ಸೆ ನೀಡಿ ಅದರ ಹಾರೈಕೆ ಮಾಡಬೇಕಾಗಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ

Leave a Reply

Your email address will not be published. Required fields are marked *

error: Content is protected !!