ತುಮಕೂರು ನಗರ ಕೇಂದ್ರ ಗ್ರಂಥಾಲಯದ ಕಟ್ಟಡವನ್ನು ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಬಳಸಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಗ್ರಹ 

ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಸುಸಜ್ಜಿತ ಬಹು ಮಹಡಿಯ ಕಟ್ಟಡವನ್ನಾಗಿ ತುಮಕೂರು ನಗರ ಕೇಂದ್ರ ಗ್ರಂಥಾಲಯವನ್ನು ನಿರ್ಮಾಣ ಮಾಡಲಾಗಿದ್ದು, ಈ ಕಟ್ಟಡದ ಯೋಜನೆ ರೂಪಿಸಿದಾಗ ಮೇಲಿನ ಎರಡು ಅಂತಸ್ತುಗಳನ್ನು ಕೌಶಲ್ಯಭಿವೃದ್ದಿ ಕೇಂದ್ರ, ಹಾಗೂ ಇನ್‌ಕ್ಯೂಬೇಷನ್ ಸೆಂಟರ್‌ಗಾಗಿ ಪ್ರಸ್ತಾಪಿಸಲಾಗಿತ್ತು. ಐಟಿ-ಬಿಟಿ ರಂಗದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿತ್ತು,
ಆದರೆ ಸರ್ಕಾರಿ ಕಚೇರಿಗಳಿಗೆ ಹಂಚಿಕೆ ಮಾಡುತ್ತಾರೆ, ಎಂಬ ಸುದ್ದಿಯು ಎಲ್ಲಡೆ ಹರಿದಾಡುತ್ತಿದ್ದು, ತುಮಕೂರು ಜಿಲ್ಲೆಯು ಶಿಕ್ಷಣದಕಾಶಿ ಯಾಗಿದ್ದು, ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಶೈಕ್ಷಣಿಕ ಉದ್ದೇಶಕ್ಕೆ ಮಾತ್ರವೇ ತುಮಕೂರು ನಗರ ಕೇಂದ್ರ ಗ್ರಂಥಾಲಯ ಕಟ್ಟಡವನ್ನು ಮೀಸಲಿಡಬೇಕು, ಕೂಡಲೇ ಸಂಬಂಧಪಟ್ಟಂತಹ ಇಲಾಖೆಯವರು ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಿ ವಿದ್ಯಾರ್ಥಿಗಳ ಭವಿಷ್ಯಯಕ್ಕೆ ಬುನಾದಿ ಹಾಗಬೇಕು. ಬೇರೆ ಯಾವುದೇ ಕಛೇರಿಗಳಿಗೆ ಈ ಕಟ್ಟಡವನ್ನು ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು, ಜಿಲ್ಲಾಧಿಕಾರಿಗಳನ್ನು ಹಾಗೂ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಮುಖೇನ     ತುಮಕೂರು ನಗರ ಶಾಸಕರಾದ ಜ್ಯೋತಿಗಣೇಶ್ ರವರು ಆಗ್ರಹಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!