ತುಮಕೂರು : ಜಿಲ್ಲೆಗೆ ಏಕೈಕ ಆಸರೆಯಾಗಿರುವ ಹೇಮಾವತಿ ನೀರನ್ನು ಪೈಪ್ ಲೈನ್ ಮೂಲಕ ಯಾವುದೇ ಅಡೆತಡೆ ಇಲ್ಲದೆ ಭೂಮಿಯ ಒಳಭಾಗದಿಂದಲೇ ನೇರವಾಗಿ ಪೈಪ್ ಲೈನ್ ಅಳವಡಿಕೆ ಮೂಲಕ ರಾಮನಗರ ಜಿಲ್ಲೆಯ ಮಾಗಡಿಗೆ ತೆಗೆದುಕೊಂಡು ಹೋಗಲು ಉದ್ದೇಶಿಸಿರುವ ಶ್ರೀರಂಗ ಏತ ನೀರಾವರಿ ಯೋಜನೆಯ ಕಾಮಾಗಾರಿ ವಿರೋಧಿಸಿ ಮೇ 16 ರಂದು ಗುಬ್ಬಿ ತಾಲ್ಲೂಕಿನ ಡಿ ರಾಂಪುರ ಹೇಮಾವತಿ ಕಾಮಗಾರಿ ನಡೆಯುವ ಸ್ಥಳದಲ್ಲೇ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಮಾಜಿ ಶಾಸಕ ಹೆಚ್ ನಿಂಗಪ್ಪ ತಿಳಿಸಿದರು.
ಅವರು ಇಂದು ನಗರದ ಹೊಯ್ಸಳ ಹೊಟೆಲ್ ನಲ್ಲಿ ಕರೆದಿದ್ದ ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಸದರಿ ಈ ಹೋರಾಟ ಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು,ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಮಠಾಧೀಶರು, ಸ್ವಸಹಾಯ ಗುಂಪುಗಳ ಮಹಿಳೆಯರು ಈ ಪ್ರತಿಭಟನಾ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಗುಬ್ಬಿ ತಾಲ್ಲೂಕಿನ ರಾಂಪುರದ 70 ನೇ ಕಿಲೋಮೀಟರ್ ನಿಂದ ಮಾಗಡಿ ಕೆರೆಗಳಿಗೆ 843.71( ಎಂ ಸಿ ಎಫ್ ಟಿ) ನೀರನ್ನು ಹಂಚಿಕೆ ಮಾಡಿದೇವೆ ಎಂದು ಸರ್ಕಾರ ಅಧಿಕೃತವಾಗಿ ಹೇಳಿದೆ ಹಾಗೂ ಕಾಮಗಾರಿ ಸಹ ಪ್ರಾರಂಭ ಮಾಡಿದೆ.ಸರ್ಕಾರ ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಡ ಏರಿದ್ದರು ಕ್ಯಾರೆ ಎನ್ನದೆ ಕಾಮಗಾರಿ ನಡೆಸಲಾಗುತ್ತಿದೆ ಆದ್ದರಿಂದ 16 ರಂದು ಪಕ್ಷತೀತವಾಗಿ ಹೋರಾಟ ನಡೆಸಲಾಗುತ್ತಿದೆ ಎಂದು ನಿಂಗಪ್ಪ ತಿಳಿಸಿದರು.
ಜಿಲ್ಲೆಗೆ ನಿಗದಿಪಡಿಸಿರುವ 24.5 ಟಿ ಎಂ ಸಿ ನೀರನ್ನೇ ಈವರೆಗೂ ಸಮರ್ಪಕವಾಗಿ ಹಂಚಿಕೆ ಮಾಡಿಲ್ಲ .ತುಮಕೂರಿಗೆ ಜಿಲ್ಲೆಗೆ ಹಂಚಿಕೆ ಮಾಡಿರುವ ನೀರಿನೆ ಮಾಗಡಿ ಗೂ ಹರಿಸಲು ಉದ್ದೇಶಿಸಲಾಗಿದೆ ಇದಕ್ಕೆ ನಮ್ಮ ವಿರೋಧವಿದೆ.ಕಾಮಗಾರಿನ್ನು ಕೂಡಲೆ ಸ್ಥಗಿತ ಮಾಡಬೇಕು,ಯೋಜನೆಯನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ನಿಂಗಪ್ಪ ಆಗ್ರಹಿಸಿದರು.
ತುಮಕೂರು ಶಾಖಾ ನಾಲೆಯ ಕಿ.ಮೀ 00 ಯಿಂದ 167 ಕಿ.ಮೀ ವರೆಗೆ ಹೊಸದಾಗಿ ಅಧುನೀಕರಣಗೊಂಡಿದೆ ,ಈ ನಾಲೆಯಲೇ ಯೋಜನೆಗೆ ಬೇಕಾದ ನೀರನ್ನು ಹರಿಸಬಹುದಾದ ಸಾಧ್ಯತೆ ಇದ್ದರೂ ಸಹ ಕಿ.ಮೀ 70 ರಿಂದ 167 ಕಿ .ಮೀ ಗೆ ಅವಶ್ಯಕತೆ ಇಲ್ಲದಿದ್ದರೂ ನೇರ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಮಾಡಲು ಹೊರಟಿರುವುದು ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವ ಉದ್ದೇಶ ಇದ್ದಾಗಿದೆ ಎಂದು ನಿಂಗಪ್ಪ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಕೈದಾಳ ಸತ್ಯನಾರಾಯಣ,ಲೋಕೇಶ್, ಕೃಷ್ಣಪ್ಪ,ರಾಮಣ್ಣ,ರಾಜು,ಲಕ್ಷ್ಮೀನಾರಾಯಣ, ಯೋಗಿಶ್ ಮತ್ತಿತರರು ಹಾಜರಿದ್ದರು.