ತುಮಕೂರು : ಕಳೆದ 2023ರ ವಿಧಾನಸಭಾ ಚುನಾವಣೆಯ ವೇಳೆ ಜೆಡಿಎಸ್ ಪಕ್ಷದಿಂದ ಎಂ.ಎಲ್.ಎ. ಕೇಟ್ ಕೇಳಿ ಅದು ಲಭಿಸದೇ ಹೋದ ಕಾರಣ ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದರು ಜೊತೆಗೆ ಬಿಜೆಪಿ ಪಕ್ಷಕ್ಕೆ ಬರುವ ಕೆಲವು ತಿಂಗಳ ಹಿಂದೆ ತುಮಕೂರು ನಗರಕ್ಕೆ ಅಟ್ಟಿಕಾ ಬಾಬು ಎಂಬ ಬಹು ದೊಡ್ಡ ಉದ್ಯಮಿ ಮತ್ತು ನಗರಕ್ಕೆ ಹೊಸ ವ್ಯಕ್ತಿಯನ್ನು ಪರಿಚಯಿಸಿ ತುಮಕೂರು ನಗರದಲ್ಲಿ ಚುನಾವಣೆಯ ಕ್ಷಿಪ್ರ ಕ್ರಾಂತಿಯನ್ನು ಸೃಷ್ಠಿಸಿದ ಹಾಗೂ ಹಲವಾರು ಯುವಕರನ್ನು ರಾಜಕೀಯಕ್ಕೆ ಕರೆ ತಂದು ಬೆಳಿಸಿದ ವ್ಯಕ್ತಿ ನರಸೇಗೌಡರವರು ಇಂದು ಬಿಜೆಪಿ ಪಕ್ಷಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ಪಕ್ಷದ ಬತ್ತಳಿಕೆಗೆ ಸೇರ್ಪಡೆಯಾಗಿದ್ದಾರೆ.
ಕಳೆದ 2023ರ ವಿಧಾನಸಭಾ ಚುನಾವಣೆಯ ವೇಳೆ ಸ್ಥಳೀಯ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕೆಲವು ಆಯ್ದ ನಾಯಕರುಗಳ ಕಿರುಕುಳ ಮತ್ತು ಪಕ್ಷದಲ್ಲಿನ ಒಳ ಬೇಗುದಿಗೆ ಬೇಸತ್ತು ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಸ್ವಯಂ ಸ್ವತಂತ್ರ ಅಭ್ಯರ್ಥಿಯಾಗಿ 2023ರ ತುಮಕೂರು ನಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ನಂತರ ನಡೆದ ರಾಜಕೀಯ ಬದಲಾವಣೆಗಳಿಂದ ಅವರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ನರಸೇಗೌಡರವರು ತಮ್ಮ ಸ್ವಂತ ಬಲದಿಂದ ಹಲವಾರು ಯುವಕರನ್ನು ಸಂಘಟಿಸಿ ರಾಜಕೀಯವಾಗಿ ಬೆಳಸಿದ್ದಾರೆ, ಅವರು ಕೆಲವು ಪಕ್ಷಗಳಲ್ಲಿ ಉನ್ನತ ಸ್ಥಾನಗಳಲ್ಲಿ ಇರುವುದೂ ಸಹ ಸತ್ಯ, ಜೊತೆಗೆ ಅವರು ಜನಾನುರಾಗಿ, ಕನ್ನಡಪರ ಹೋರಾಟಗಾರರಾಗಿ, ಸಮಾಜ ಸೇವಕರಾಗಿ, ಒಕ್ಕಲಿಗ ಸಮುದಾಯದ ಮುಖಂಡರಾಗಿ, ಗುತ್ತಿಗೆದಾರರಾಗಿ ತುಮಕೂರು ನಗರದಲ್ಲಿ ಗುರುತಿಸಿಕೊಂಡಿದ್ದಾರೆ.
ಇದೇ ನರಸೇಗೌಡರವರು ಬಿಜೆಪಿ ಪಕ್ಷದಲ್ಲಿ ತನ್ನನ್ನು ಪರಿಗಣಿಸುತ್ತಿಲ್ಲ ಹಾಗೂ ಯಾವುದೇ ಸಭೆ, ಸಮಾರಂಭಗಳಿಗೆ, ಪ್ರಸ್ತುತ ಚುನಾವಣೆ ನಡೆಯುತ್ತಿದ್ದು ಇಂತಹ ಸಂದರ್ಭದಲ್ಲಿಯೂ ತನ್ನನ್ನು ಸೌಜನ್ಯಕ್ಕೂ ಮಾತನಾಡಿಸುತ್ತಿಲ್ಲ ಹೀಗೆ ನಾನಾ ರೀತಿಯ ಕಿರುಕುಳಗಳಿಂದ ಬಿಜೆಪಿ ಬೇಗುದಿಯಲ್ಲಿ ತಾಳಲಾರದೇ ತಾನು ಕಾಂಗ್ರೆಸ್ ಪಕ್ಷಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪಕ್ಷದ ಅಭ್ಯರ್ಥಿಯಾದ ಎಸ್.ಪಿ.ಮುದ್ದಹನುಮೇಗೌಡರವರ ಸಮ್ಮುಖದಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದೇನೆ ಎಂದು ತಿಳಿಸಿದರು.
ಉಳಿದಂತೆ ತಾನು ಒಕ್ಕಲಿಗ ಸಮುದಾಯದ ಮುಖಂಡ ಹಾಗೂ ನನಗೇ ನನ್ನದೇ ಆದ ಬಂಧು-ಬಳಗಕ್ಕೆ ನ್ಯಾಯ ದೊರಕಿಸಿಕೊಡುವ ಸಲುವಾಗಿ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ಗ್ಯಾರಂಟಿಗಳಿಗೆ ಮನಃಸೋತಿರುವುದಲ್ಲದೇ ನನ್ನ ರಾಜಕೀಯ ಅಸ್ತಿತ್ವಕ್ಕಾಗಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಹೆಬ್ಬೂರು ಬೋರೇಗೌಡರವರ ಸುಪುತ್ರ ದೀಪಕ್ (ವಕೀಲರು) ಸೇರಿದಂತೆ ಇನ್ನಿತರೆ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.