ತುಮಕೂರು : ಕಾಂಗ್ರೆಸ್ ಪಕ್ಷದವರು ಶಿಖಂಡಿ ರಾಜಕಾರಣವನ್ನು ಮಾಡುವುದು ಬಿಟ್ಟು ತಾಕತ್ತು ಇದ್ದರೆ ನೇರವಾಗಿ ಚುನಾವಣೆ ಎದುರಿಸಲಿ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸವಾಲು ಹಾಕಿದ್ದಾರೆ.
ತುಮಕೂರಿನ ಕುಂಚಿಟಿಗ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಜೆಡಿಎಸ್ ಒಕ್ಕಲಿಗ ಮುಖಂಡರ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರವರು ಭಾಷಣ ಆರಂಭಿಸಿದ ವೇಳೆಯಲ್ಲಿ ಮಫ್ತಿಯಲ್ಲಿ ಆಗಮಿಸಿದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತೆಯರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದ ಘಟನೆಯನ್ನು ತೀವ್ರವಾಗಿ ಖಂಡಿಸಿದರು.
ತುಮಕೂರು ಜಿಲ್ಲೆಯಲ್ಲಿ ಈ ತರಹದ ಘಟನೆಗಳು ನಡೆದಿರಲಿಲ್ಲ, ವಿರೋಧ ಪಕ್ಷಗಳ ಮೇಲೆ ಠೀಕೆ ಮಾಡುವುದು ಏನೇ ಇದ್ದರೂ ಸಹ ಸುದ್ಧಿಗೋಷ್ಠಿ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯ, ಕಾಂಗ್ರೆಸ್ ಪಕ್ಷದವರಿಗೆ ತಾಕತ್ ಇದ್ದರೆ ಚುನಾವಣೆಯನ್ನು ಮಾಡಲಿ ಅದನ್ನು ಬಿಟ್ಟು ಬೇರೆ ಯಾರನ್ನೋ ಛೂ ಬಿಟ್ಟು ಶಿಖಂಡಿ ರಾಜಕಾರಣ ಮಾಡಿದ್ದಾರೆ. ಇವರು ನೇರವಾಗಿ ರಾಜಕಾರಣ ಮಾಡಲಿ ಎಂದು ಹರಿಹಾಯ್ದರು.
ದೇವೇಗೌಡರ ಮೇಲೆ ಇವರು ಏನು ಮಾಡಲು ಬಂದಿದ್ದರು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗುವುದು ಈ ತರಹದ ಅಹಿತಕರ ಘಟನೆ ನಡೆಯುವ ಬಗ್ಗೆ ನಮಗೆ ಸೂಕ್ಷ್ಮತೆ ದೊರೆತಿತ್ತು, ಕಾಂಗ್ರೆಸ್ನವರಿಗೆ ತಾಕತ್ ಇದ್ದರೆ ಚುನಾವಣೆ ಮಾಡಲಿ ಅದನ್ನು ಬಿಟ್ಟು ಈ ತರಹದ ನಡವಳಿಕೆ ಪ್ರದರ್ಶನ ಮಾಡುವುದು ಗೌರವ ತರುವಂತಹದ್ದಲ್ಲ ಎಂದು ರಾಜಾರೋಷವಾಗಿ ಹೇಳಿದರು.