ಕಾರ್ಮಿಕ ಇಲಾಖೆಯಿಂದ ನಗರದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

ತುಮಕೂರು : ಇಂದು ತುಮಕೂರು ನಗರದ  ಇನ್ ಲೆದರ್ ಗಾರ್ಮೆಂಟ್ಸ್ ನಲ್ಲಿ ಹಾಗೂ ಕವಿತಾ ಕಿಚನ್ ನೀಡ್ಸ್ ವಾಣಿಜ್ಯ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಮತದಾನದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ತೇಜಾವತಿರವರಿಂದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

 

 

 

ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ವೆಂಕಟೇಶ್ ಬಾಬುರವರು ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು, ಈ ವೇಳೆ ಮಾತನಾಡಿದ ತೇಜಾವತಿ ರವರು ಪ್ರತಿಯೊಬ್ಬ ನಾಗರೀಕರು ಸಹ ಮತದಾನವನ್ನು ಮಾಡಿ ಉತ್ತಮ ನಾಯಕನನ್ನು ಆರಿಸುವುದರ ಮೂಲಕ ನಮ್ಮ ಸಂವಿಧಾನ ಬದ್ಧ ಹಕ್ಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಜಾಗೃತಿಯನ್ನು ಮೂಡಿಸಿದರು.

ಈ ವೇಳೆ ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!