ತುಮಕೂರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪರಮೇಶ್ವರ್ ಮಾತನಾಡುತ್ತಾ ಮುಂಬರುವ ಚುನಾವಣೆಯಲ್ಲಿ ಮುದ್ದಹನುಮೇಗೌಡ ಅವರನ್ನು ಅತೀ ಹೆಚ್ಚು ಮತಗಳಿಂದ ಜನರು ಗೆಲ್ಲಿಸಬೇಕಿದೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಮತ್ತು ದೇಶದಲ್ಲಿ ಒಕ್ಕೂಟ ಮತ್ತು ಪ್ರಜಾಪ್ರಭುತ್ವ ಕ್ಕೆ ಜನ ವಿರೋಧಿ ಹೇಳಿಕಗಳು ನೀಡುತ್ತಿದ್ದಾರೆ ಆದುದರಿಂದ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಿದೆ ಎಂದರು.
ಈ ಕ್ಷೇತ್ರದ ಜನರನ್ನು ಪ್ರಾಥಿಸುತ್ತೇನೆ ಅದು ಏನೆಂದರೆ ಮುದ್ದಹನುಮೇಗೌಡ ಅವರು ಸರಳ ಸಜ್ಜನಿಕೆಯ ವ್ಯಕ್ತಿ ಒಬ್ಬ ನ್ಯಾಯಧೀಶರಾಗಿ ಕೆಲಸ ಮಾಡಿ ಒಳ್ಳೆ ಜನಪರ ಕೆಲಸ ಮಾಡಿದಾರೆ ಅವರು ಸಂಸದರಾಗಿದ್ದ ಸಂದರ್ಭದಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದರು ಅವರು ಎಂದಿಗೂ ತಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿಕೊಂಡಿಲ್ಲ ಎರಡು ಬಾರಿ ಕಾಂಗ್ರೆಸ್ ಪಕ್ಷವು ಅವರನ್ನು ಅಭ್ಯರ್ಥಿ ಮಾಡಿತ್ತು ಅವರನ್ನು ಜನರು ಹರಿಸಿದ್ದರು ಅದೇ ರೀತಿಯಲ್ಲಿ ಈ ಭಾರಿ ಸಹ ಅವರನ್ನು ಹರಸಿ ಹಾರೈಸಬೇಕೆ ಎಂದು ಹೇಳಿದರು.
ಮುದ್ದಾಹನುಮೇಗೌಡರು ಕಳೆದ ಬಾರಿ ಗೆದ್ದಂತಹ ಸಂದರ್ಭದಲ್ಲಿ ಸರಿಯಾದ ವಿರೋಧ ಪಕ್ಷವು ಇರಲಿಲ್ಲ ಹಾಗೆಯೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ ಇರಲಿಲ್ಲ ಅದರೂ ಅವರು ಸಂಸದ ಸದಸ್ಯರಾಗಿ ನಮ್ಮ ಜಿಲ್ಲೆಗೆ ಅತ್ಯುತ್ತಮ ಕೆಲಸ ಮಾಡಿರುವುದು ಶ್ಲಾಘನೀಯ ಸಂಗತಿ ತುಮಕೂರು ರೈಲ್ವೆ ಯೋಜನೆಗೆ ಮುದ್ದಾಹನುಮೇಗೌಡರ ಕೊಡುಗೆ ಇದೇ ಇದಕ್ಕೆ ಸಹಕಾರ ಮಾಡಿದ್ದು ಆಂಧ್ರ ಮಂತ್ರಿಯಾಗಿದ್ದ ರಘುವೀರ ರೆಡ್ಡಿ ಸೇರಿ ಕೇಂದ್ರದ ಪಿಂಕ್ ಪುಸ್ತಕದಲ್ಲಿ ನೋಂದಾಯಿಸಿದ್ದು ನಂತರ ದಿನಗಳಲ್ಲಿ ಹಣಕಾಸು ಹೊಂದಾಣಿಕೆ ಮಾಡಿ ಯೋಜನೆ ಕಾರ್ಯರೂಪಕ್ಕೆ ತರಲಾಯಿತು ಎಂದರು.
ನಮ್ಮ ಜಿಲ್ಲೆಯ ಸೇರಿದಂತೆ ರಾಜ್ಯಕ್ಕೆ ಆಗಬೇಕಾಗಿದ್ದ ಕೆಲಸಗಳಿಗೆ ಸಂಸದ ಭವನದಲ್ಲಿ ಧ್ವನಿ ಎತ್ತಿ ಮಾತನಾಡಿ ಬರೀ ಜಿಲ್ಲೆಗೆ ಮಾತ್ರವಲ್ಲದೆ ರಾಜ್ಯಕ್ಕೆ ಅನುಕೂಲ ಆಗುವಂತೆ ಮಾತನಾಡಿ ನಮ್ಮ ರಾಜ್ಯಕ್ಕೆ ಅನುದಾನ ತಂದಿದ್ದಾರೆ ಏಕೆಂದರೆ ಅವರು ಸಂಸದರಾಗಿದ್ದ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮ ಸರ್ಕಾರ ಇರಲಿಲ್ಲ ಜೊತೆಗೆ ಇವರು ವಿಶ್ವ ಸಂಸ್ಥೆಯಲ್ಲಿ ಮಾತನಾಡಿ ದೇಶದ ಅಭಿವೃದ್ಧಿಗೆ ಸಹಕರಿಸಿದ್ದಾರೆ ಇಂತಹ ವ್ಯಕ್ತಿಯನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಕರ್ತವ್ಯ ಆಗಿದೆ ಎಂದು ಪರಮೇಶ್ವರ್ ಮತವನ್ನು ಕೋರಿದರು.
ಟ್ಯಾಕ್ಸ್ ಮತ್ತು ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಎಷ್ಟು ಹೋಗಬೇಕು ರಾಜ್ಯಕ್ಕೆ ಎಷ್ಟು ಹೋಗಬೇಕು ಎಂದು ಸಂವಿಧಾನದಲ್ಲಿ ತಿಳಿಸಿದ್ದಾರೆ ಆದರೆ ಪ್ರಸ್ತುತ ಕೇಂದ್ರ ಸರ್ಕಾರ ಅದನ್ನು ಬದಿಗೊತ್ತಿ ನಮ್ಮ ರಾಜ್ಯದ ಪಾಲಿನ ತೆರಿಗೆಯನ್ನು ನೀಡಿದಯೇ ಮೋಸ ಮಾಡಿದೆ ಎಂದರು. ನಮ್ಮ ಮುಖ್ಯಮಂತ್ರಿಗಳು ಹಲವಾರು ಬಾರಿ ಕೇಂದ್ರ ವಿತ್ತ ಸಚಿವರು ಹಾಗೂ ವಿತ್ತ ಸಚಿವಲಯಕ್ಕೆ ಸೇರಿದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದರೂ ಸಹ ನಮ್ಮ ಪಾಲು ನಮಗೆ ಕೊಡದೇ ಮೋಸ ಮಾಡಿದ್ದಾರೆ.
ಅದರೂ ಸಹ ನಿರ್ಮಲ ಸೀತಾರಾಮನ್ ಅವರು ರಾಜ್ಯ ಸರ್ಕಾರಕ್ಕೆ ಎನು ಕೊಡಬೇಕೋ ಅದನ್ನು
ಕೊಟ್ಟಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ನಮ್ಮ ರಾಜ್ಯ ಭರದಲ್ಲಿ ಇದೇ ಅದರೂ ಅವರು ನಮ್ಮ ರಾಜ್ಯವನ್ನು ಕಡೆಗಣಿಸಿದ್ದಾರೆ ಕೃಷ್ಣಾಭರೇಗೌಡ ಸೇರಿದಂತೆ ಹಲವಾರು ಸಚಿವರು ಕೇಂದ್ರದ ಸಚಿವರನ್ನು ಭೇಟಿ ಮಾಡಿ ನಮ್ಮ ಪ್ರಸ್ತಾವನೆ ಸಲ್ಲಿಸಿದರು ಸಹ ಬರಗಾಲ ಇರುವುದನ್ನು ಪರಿಗಣಿಸದೆ ನಮ್ಮನ್ನು ತಿರಸ್ಕರಿಸಿ ಅನ್ಯಾಯ ಮಾಡಿದ್ದಾರೆ ಎಂದರು.
ನಾವುಗಳು ಗ್ಯಾರಂಟಿ ಯೋಜನೆ ಜಾರಿಗೆ ತಂದು ಯಶಸ್ವಿಯಾಗಿದ್ದೇವೆ ನಾವುಗಳು ಕೇಂದ್ರದ ಬಳಿ ಇವುಗಳಿಗೆ ಹಣ ಕೇಳಲಿಲ್ಲ ನಾವು ಕೇಳಿದ್ದು ಬರಗಾಲ ನಿರ್ವಹಣೆಗಾಗಿ ನಾವು ಗ್ಯಾರಂಟಿ ಯೋಜನೆ ಇದೇ ಎಂದು ಬೇರೆ ಯೋಜನೆ ಕೈ ಬಿಟ್ಟಿಲ್ಲ ಜೊತೆಗೆ ಬೇರೆ ಯೋಜನೆಯ ಸಂಪನ್ಮೂಲಗಳನ್ನು ಇದಕ್ಕೆ ಬಳಸಿಕೊಂಡಿಲ್ಲ ಇದನ್ನು ಸ್ಪಷ್ಟವಾಗಿ ಹೇಳುತ್ತಿರುವೆ ಎಂದು ಪರಮೇಶ್ವರ್ ಹೇಳಿದರು.
ಕೆ ಎನ್ ರಾಜಣ್ಣ ಮಾತನಾಡಿ ಪರಮೇಶ್ವರ್ ಅವರು ಹೇಳಿರುವಂತೆ ಕೇಂದ್ರದ ಧೋರಣೆ ಖಂಡನೀಯ ಎಂದರು ನಾವು ಕೇಂದ್ರದಿಂದ ಭಿಕ್ಷೆ ಕೇಳುತ್ತಿಲ್ಲ ನಾವು ನಮ್ಮ ಪಾಲು ಕೇಳಿದ್ದೇವೆ ನಾವು ಸಂವಿಧಾನ ಬದ್ಧ ಹಕ್ಕನ್ನು ಮಾತ್ರ ಕೇಳಿದ್ದು ಅದನ್ನು ಅವರು ಮಾಡಿರುವ ಈ ಧೋರಣೆ ಖಂಡನೀಯ ಎಂದರು
ನಮ್ಮ ರಾಜ್ಯ ಕೇಂದ್ರಕ್ಕೆ ಕಟ್ಟುವ ತೆರಿಗೆಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದ್ದೇವೆ ಆದರೆ ಪಾಲು ಹಂಚಿಕೆಯಲ್ಲಿ ಹತ್ತನೇ ಸ್ಥಾನದಲ್ಲಿರುವುದು ಶೋಚನೀಯ ಎಂದರು ನಮ್ಮ ರಾಜ್ಯದಿಂದ 25 ಜನ ಬಿಜೆಪಿ ಸಂಸದರು ಆಯ್ಕೆ ಆಗಿದ್ದರು ಯಾರೊಬ್ಬರೂ ಸಹ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಸ್ತಾಪಿಸದ ಇವರುಗಳು ಯಾವ ನೈತಿಕತೆಯಿಂದ ಮತ ಕೇಳಲು ಮುಂದಾಗಿದ್ದಾರೆ ಎಂದು ಲೇವಡಿ ಮಾಡಿದರು
ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ಸಂವಿಧಾನ ಬದ್ಧ ಸೌಲಭ್ಯ ಪಡೆಯಲು ಜನರು ನಮ್ಮ ಪಕ್ಷವನ್ನು ಬೆಂಬಲಿಸಬೇಕಿದೆ ಎಂದರು
ಮುದ್ದಹನುಮೇಗೌಡ ಮಾತನಾಡುತ್ತಾ ನಮ್ಮ ಪರಮೇಶ್ವರ್ ಮತ್ತು ರಾಜಣ್ಣ ಸಾಕಷ್ಟು ಹೇಳಿದ್ದಾರೆ ನಾನು ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ದಶಕಗಳಿಂದ ಕೆಲಸ ಮಾಡಿದ್ದೇನೆ ಅಧಿಕಾರ ಅನುಭವಿಸಿದ್ದೇನೆ ನನ್ನ ಸುಧೀರ್ಘ ಸೇವೆ ಸಲ್ಲಿಸಿರುವ ಪ್ರಯುಕ್ತ ನನ್ನನ್ನು ಆಯ್ಕೆ ಮಾಡಿರುವುದು ನನ್ನ ಸುದೈವ ನಾನು ಜಿಲ್ಲೆಯಲ್ಲಿನ ಸಂಪೂರ್ಣ ಸಮಸ್ಯೆಗಳು ನನಗೆ ಅರಿವಿದೆ ಈ ಕುರಿತು ನಾನು ಲೋಕಸಭೆಯಲ್ಲಿ ಧ್ವನಿ ಎತುವೆ ಎಂದರು ಹೇಕೆಂದರೆ ನಾನು ಹೆಚ್ ಎಂ ಟಿ ಮುಚ್ಚಿಹೋಗುವ ಸಂದರ್ಭದಲ್ಲಿ ಅದನ್ನು ಇಸ್ರೋ ಪರಿವರ್ತನೆ ಮಾಡಿದ್ದೇನೆ ಅದೇ ರೀತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಏಕೆಂದರೆ ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸದಸ್ಯರು ಮಾತನಾಡದೆ ಇರುವುದೇ ಅಭಿವೃದ್ಧಿ ಕುಂಟಿತಕ್ಕ ಕಾರಣ ಎಂದರು
ನಾವು ಎಲ್ಲೋ ಮಾತನಾಡುವುದಲ್ಲ ಸದನದಲ್ಲಿ ಮಾತನಾಡಿದರೆ ಅದು ಕಾರ್ಯರೂಪಕ್ಕೆ ಬರುತ್ತದೆ ಅದನ್ನು ನಾನು ಸಾರ್ಥಕವಾಗಿ ಮಾಡಿದ್ದೇನೆ ಎಂದರು ನಾನು ವಿರೋಧ ಪಕ್ಷದಲ್ಲಿದ್ದರೂ ಸಹ ನಮ್ಮ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಶಂಕು ಸ್ಥಾಪನೆ ಮಾಡಿರುವ ಉದಾಹರಣೆ ಗಳಿವೆ ಪಾಸ್ಪೋರ್ಟ್ ಕಚೇರಿ ಹೆಚ್ ಎ ಎಲ್, ಇಸ್ರೋ, ರೈಲ್ವೆ ಯೋಜನೆ ಸೇರಿದಂತೆ ಕೇಂದ್ರದ ಮಹತ್ತರ ಯೋಜನೆ ತಂದಿರುವ ಹಗ್ಗಳಿಕೆ ನನ್ನದು ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಮೆಟ್ರೋ ತರುವುದು ರಾಷ್ಟ್ರೀಯ ಹೆದ್ದಾರೆ ಸೇರಿದಂತೆ ಮುಂತಾದ ಗುರಿಗಳನ್ನು ಇಟ್ಟುಕೊಂಡಿದ್ದೇನೆ ಎಂದರು
ನನ್ನ ಅಭಿವೃದ್ಧಿ ಕೆಲಸಗಳು ನನಗೆ ಶ್ರೀ ರಕ್ಷೆ ಆಗಲಿದೆ ನಾನು ಎಲ್ಲಿಂದನೋ ಬಂದು ರಾಜಕಾರಣ ಮಾಡುತ್ತಿಲ್ಲ ನಾನು ಸ್ಥಳೀಕ ಇಲ್ಲೇ ಶಾಸಕ ಸಂಸದ ಸೇರಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಸ್ಥಾನಗಳನ್ನು ಅಲಂಕರಿಸಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಹಾಗಾಗಿ ಮತದಾರರು ನನ್ನ ಬೆಂಬಲಿಸಿ ಎಂದು ಮತ ಯಾಚನೆ ಮಾಡಿದರು.
ಈ ಸಂಧರ್ಭದಲ್ಲಿ ಮುದ್ದಹನುಮೇಗೌ, ಪರಮೇಶ್ವರ್ , ಕೆ ಎನ್ ರಾಜಣ್ಣ, ಎಸ್ ಆರ್ ಶ್ರೀನಿವಾಸ್ , ರಫೀಕ್ ಅಹಮ್ಮದ್ , ರಾಮಕೃಷ್ಣ, ಷಫಿ ಅಹಮ್ಮದ್, ಎಕ್ಬಾಲ್ ಅಹಮ್ಮದ್, ಚಂದ್ರಶೇಖರ ಗೌಡ, ವಾಲೆ ಚಂದ್ರಯ್ಯ ಉಪಸ್ಥಿತರಿದ್ದರು