ತುಮಕೂರು:- ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಅವರು ನನಗೆ ಯಾವ ಕ್ಷೇತ್ರದಲ್ಲಿ ನಿಲ್ಲುತ್ತಿದ್ದೀರಾ ಎನ್ನುವ ಮಾಹಿತಿ ಇಲ್ಲ ಹಾಗೂ ವೈಎ ನಾರಾಯಣಸ್ವಾಮಿ ಬಗ್ಗೆ ಅವರಿಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿರುವ ವಿಧಾನಪರಿಷತ್ ಸದಸ್ಯರು ನಾನು ಸ್ಪರ್ಧಿಸುವ ಕ್ಷೇತ್ರ ತಿಳಿಯದೆ ನಾನು ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿಲ್ಲ ಅಷ್ಟೊಂದು ಅಜ್ಞಾನಿ ನಾನಲ್ಲ ಎಂದು ಕರ್ನಾಟಕ ರೂಪ್ಸಾ ಸಂಘಟನೆಯ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ವಿಧಾನಪರಿಷತ್ ಶಾಸಕ ಚಿದಾನಂದ್ ಎಂ ಗೌಡ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ತಮ್ಮ ಕಚೇರಿಯಲ್ಲಿ ಕುರಿತಾಗಿ ಮಾತನಾಡಿದ ಅವರು ಕೋವಿಡ್ ಸಮಯದಲ್ಲಿ ಸರ್ಕಾರದಿಂದ 500 ಕೋಟಿ ರೂ ಗಳನ್ನ ನಾನು ಹಾಗೂ ವೈಯನಾರಾಯಣಸ್ವಾಮಿ ಅವರು ಬಿಡುಗಡೆಗೊಳಿಸಿದ್ದೇವೆ ಎಂದು ತಿಳಿಸಿದ್ದೀರಿ ಆದರೆ ಕೋವಿಡ್ ಸಮಯದಲ್ಲಿ ಶಿಕ್ಷಕರು ತುಂಬಾ ಸಂಕಷ್ಟದಲ್ಲಿದ್ದಾಗ ಒಂದು ಬಿಡಿಗಾಸು ಕೂಡ ಅವರಿಗೆ ದಕ್ಕಲಿಲ್ಲ ರಾಜ್ಯಾದ್ಯಂತ 25000 ಶಿಕ್ಷಕರು ಸಂಕಷ್ಟದಲ್ಲಿ ಇದ್ದರೂ ತಾವು 500 ಕೋಟಿ ರೂ ಬಿಡುಗಡೆಗೊಳಿಸಿರುವುದಕ್ಕೆ ಯಾವುದಾದರೂ ಸಾಕ್ಷಿ ನೀಡಿ ಎಂದು ತಾಕಿತು ಮಾಡಿದರು.
ರಾಜ್ಯದಲ್ಲಿ ಪದವೀಧರರ ಸಂಖ್ಯೆ ಹೆಚ್ಚುತ್ತಿದ್ದು ಉದ್ಯೋಗವಿಲ್ಲದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಪದವೀಧರ ಕ್ಷೇತ್ರದಲ್ಲಿ ಗೆದ್ದಿರುವ ತಾವುಗಳು ಯಾರಿಗೆ ಎಷ್ಟು ಕೆಲಸ ಕೊಡಿಸಿದ್ದೀರಿ ಎಂಬ ದಾಖಲೆಗಳನ್ನು ನೀಡಿ ಸರ್ಕಾರದಡಿಯಲ್ಲಿ ಸುಮಾರು ಎರಡು ವರೆ ಲಕ್ಷದಷ್ಟು ಹುದ್ದೆಗಳು ಖಾಲಿ ಇದ್ದು ವಿಧಾನಪರಿಷತ್ ಸದಸ್ಯರಾದ ತಾವುಗಳು ನೇಮಕಾತಿಗಾಗಿ ಒಂದು ಆದೇಶವನ್ನು ಹೊರಡಿಸಲು ಆಗಲಿಲ್ಲ ನಮ್ಮ ಸಂಘಟನೆ ವತಿಯಿಂದ 15,000 ಪೋಸ್ಟ್ ಗಳಿಗೆ ಕಾಲ್ ಮಾಡಿ ಎಂದು ಬಿಜೆಪಿ ಸರ್ಕಾರದಲ್ಲಿದ್ದ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದೆವು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾನು ನೀಡುತ್ತೇನೆ ತಾವು ಪ್ರಯತ್ನ ಮಾಡಿರುವ ಯಾವುದಾದರೂ ದಾಖಲೆಗಳನ್ನು ನೀಡಿ ಎಂದು ಸವಾಲು ಹಾಕಿದರು.
ನಾನು ಈಗಾಗಲೇ ಕ್ಷೇತ್ರದಲ್ಲಿ 2008ರಲ್ಲಿ ಪದವೀಧರ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ದೆ ಈಗ ನಾನು ಸ್ಪರ್ಧಿಸುವ ಕ್ಷೇತ್ರ ಆಗ್ನೇಯ ಶಿಕ್ಷಕರ ಕ್ಷೇತ್ರ, ಇದಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತಿದ್ದೇನೆ ಈ ಕ್ಷೇತ್ರದ ಬಗ್ಗೆ ತಿಳಿಯದಷ್ಟು ಅಜ್ಞಾನಿ ನಾನಲ್ಲ.. ಪದವೀಧರರ ಕ್ಷೇತ್ರದಲ್ಲಿ ಗೆದ್ದಿರುವ ತಾವುಗಳು ಕೋವಿಡ್ ಸಂದರ್ಭದಲ್ಲಿ ಶಿಕ್ಷಕರಿಗೆ ಯಾವ ರೀತಿ ಸಹಾಯ ಮಾಡಿದ್ದೀರಿ ಎಂಬುದನ್ನು ಸಾಕ್ಷಿ ಸಮೇತ ಬಿಡುಗಡೆಗೊಳಿಸಿ ಎಂದರು.
ಕೋವಿಡ್ ಸಂದರ್ಭದಲ್ಲಿ ರುಪ್ಸಾ ಸಂಘಟನೆಯ ಒತ್ತಾಯದ ಮೇರೆಗೆ ಸರ್ಕಾರ ಶಿಕ್ಷಕರಿಗಾಗಿ ಶಿಕ್ಷಕರ ಕಲ್ಯಾಣ ನಿಧಿಯಿಂದ 148 ಕೋ. ರೂ.ಗಳನ್ನ ಬಿಡುಗಡೆಗೊಳಿಸಿತ್ತು ಸುಮಾರು 1.86.000 ಶಿಕ್ಷಕರಿಗೆ 98.5 ಕೋ. ರೂ.ಗಳನ್ನು ಬಿಡುಗಡೆಗೊಳಿಸಲಾಯಿತು ಇದರ ಬಗ್ಗೆ ನಮ್ಮ ಬಳಿ ದಾಖಲೆ ಇದೆ ನಿಮ್ಮ ಬಳಿ ಯಾವುದಾದರೂ ದಾಖಲೆ ಬಿಡುಗಡೆಗೊಳಿಸಿ ಎಂದರು.