ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನೇಮಿಸುವುದನ್ನು ಕೈ ಬಿಟ್ಟು ಶಾಲೆಯ ಬೋಧನಾ ಕೆಲಸಕ್ಕೆ ಮಾತ್ರ ಸೀಮಿತಗೊಳಿಸಿ- ಲೋಕೇಶ್ ತಾಳಿಕಟ್ಟೆ

ತುಮಕೂರು:- ರಾಜ್ಯದಲ್ಲಿ ಸರ್ಕಾರಿ, ಹಾಗೂ ಅನುದಾನಿತ ಶಾಲಾ ಶಿಕ್ಷಕರನ್ನು ಪ್ರತಿ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಕೆಲಸ ಮತ್ತು ಸ್ಥಳೀಯ ಬಿ.ಎಲ್.ಓ ಆಗಿ ಕೆಲಸ ಮಾಡಲು ನಿಯೋಜನೆಯ ಮೇರಿಗೆ ನೇಮಿಸುವ ಮೂಲಕ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ ಈಗಾಗಿ ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ನೇಮಕ ಮಾಡಬಾರದೆಂದು ನೊಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಮೇನೆಜ್ ಮೆಂಟ್ ಸಂಘಟನೆ ಒತ್ತಾಯಿಸಿದೆ.

 

 

ಈ ಕುರಿತು ರುಪ್ಸಾ ಸಂಘಟನೆಯ ರಾಜ್ಯಾಧ್ಯಕ್ಷ ಲೋಕೃಶ್ ತಾಳಿಕಟ್ಟೆ ಅವರು ಮಾತನಾಡಿ ಈಗಾಗಲೇ ರಾಜ್ಯದಲ್ಲಿ ಲಕ್ಷಾಂತರ ಶಿಕ್ಷಕರ ಕೊರತೆಯನ್ನು ಸರ್ಕಾರಿ, ಹಾಗೂ ಅನುದಾನಿತ ಶಾಲೆಗಳು ಅನುಭವಿಸುತ್ತಿವೆ.

 

 

 

ಸಾವಿರಾರು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಇದ್ದಾರೆ ಮತ್ತು ಅಲ್ಲಿ ಮಕ್ಕಳಿಗೆ ಪಾರ ಮಾಡುವವರೇ ಇಲ್ಲದ ಹಾಗಾಗಿದೆ.ಅಲ್ಲದೇ ಮಾನ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಶೇ 100 ಫಲಿತಾಂಶ ಬರದಿದ್ದರೆ ಕ್ರಮ ಜರುಗಿಸಲಾಗುವುದು ಎನ್ನುವ ಎಚ್ಚರಿಕೆಯ ಆದೇಶ ಶಿಕ್ಷಕರಿಗೆ ಮಾನಸಿಕ ಒತ್ತಡ ಹೆಚ್ಚಿಸಿದೆ, ಹಾಗೂ ದಿನ ಬೆಳಗಾದರೆ ಒಂದಲ್ಲ ಒಂದು ಕೆಲಸಕ್ಕೆ, ಶಿಕ್ಷಕರನ್ನು ಬಳಸಿಕೊಳ್ಳುವ ಇವರ ಕಾರ್ಯ ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುವುದಕ್ಕೆ ಪ್ರಮುಖ ಕಾರಣ ಆಗುತ್ತಿದೆ. ಆದ್ದರಿಂದ ಪ್ರಯತ ಈಗ ಪರೀಕ್ಷಾ ಸಮಯವಾಗಿರುವುದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆ ಮತ್ತು ಪುನರಾವರ್ತನೆ ಯಲ್ಲಿ ತೊಡಗುವುದಕ್ಕೆ ಅವಕಾಶ ಮಾಡಿಕೊಡುವುದರ ಜೊತೆಗೆ ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಅವಕಾಶ ಕಲ್ಪಿಸಿ ಕೊಡಬೇಕು ಮತ್ತು ಚುನಾವಣಾ ಕಾರ್ಯ ಮತ್ತು ಬಿ.ಎಲ್.ಓ. ಕಾರ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರನ್ನು ಬಿಡುಗಡೆಗೊಳಿಸಲು ತಕ್ಷಣ ಕ್ರಮ ಕೈಗೊಂಡು ಆದೇಶಿಸಲು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಬೇಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದರು.

Leave a Reply

Your email address will not be published. Required fields are marked *

error: Content is protected !!