ಅಸಂಬದ್ಧ ನಡವಳಿಕೆಯ ಉಪನ್ಯಾಸಕನ ವಿರುದ್ಧ ಕನ್ನಡ ಪರ ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ತುಮಕೂರು:- ನಗರದ ಸುಮಾರು ನೂರು ವರ್ಷಗಳ ಇತಿಹಾಸವಿರುವ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುತ್ತಾ ಬಂದಿದ್ದು ಹಲವಾರು ಸಾಧನೆಗೆ ಈ ಕಾಲೇಜು ಹೆಸರಾಗಿದೆ ಇಂತಹದರಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಯಾವುದೇ ವರ್ಗಾವಣೆಯಿಲ್ಲದೇ ಒಂದೆ ಕಡೆ ಇರುವ ಉಪನ್ಯಾಸಕ ಹೆಚ್ ಎಮ್ ಸದಾಶಿವಯ್ಯ ಅವರು ಹಲವಾರು ಅವ್ಯವಹಾರಗಳಲ್ಲಿ ತೊಡಗಿ ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರ ಕೊಡಮಾಡುವ ಎನ್ ಸಿ ಇಆರ್ ಟಿ ಪುಸ್ತಕವನ್ನು ಅತ್ಯಂತ ಸರಳೀಕರಣಗೊಳಿಸಿ ಪ್ರಥಮ, ದ್ವೀತಿಯ ಪಿಯು ವಿದ್ಯಾರ್ಥಿಗಳಿಗೆ ಪುಸ್ತಕವೊಂದನ್ನು ರಚಿಸಿ ಮಾರಾಟ ಮಾಡಿ ಸರ್ಕಾರಕ್ಕೆ ವಂಚಿಸುತ್ತಿರುವ ವಿರುದ್ದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಕನ್ನಡ ಪರ ಸಂಘಟನೆಗಳ ಒಕ್ಕೂಟ ವತಿಯಿಂದ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಒತ್ತಾಯಿಸಲಾಯಿತು.

 

 

 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಗೆ ತೆರಳಿದ ಕನ್ನಡ ಪರ ಸಂಘಟನೆಯ ಮುಖಂಡರು ಉಪನ್ಯಾಸಕರ ವಿರುದ್ಧ ಸೂಕ್ತ ಕ್ರಮವಹಿಸಿ ವರ್ಗಾವಣೆ ಮಾಡುವಂತೆ ಮನವಿ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಸಂಘಟನೆಯ ರಾಜ್ಯಾಧ್ಯಕ್ಷ ಕನ್ನಡ ಪ್ರಕಾಶ ಮಾತನಾಡಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರ ನೀಡಿರುವ ಪಠ್ಯಪುಸ್ತಕವನ್ನು ನಕಲು ಮಾಡಿ ಸರ್ಕಾರ ನೀಡಿರುವ ಪಠ್ಯಪುಸ್ತಕದ ವಿಷಯ ವಸ್ತು ಸರಿ ಇಲ್ಲ ಸ್ವಯಂ ನಾನೇ ತಯಾರಿಸುವ ಹೊಸ ಪುಸ್ತಕವನ್ನು ಕೊಂಡು ಓದುವಂತೆ ವಿದ್ಯಾರ್ಥಿಗಳಿಗೆ ಬ್ರೈನ್ ವಾಶ್ ಮಾಡಿ ಸುಮಾರು 20 ವರ್ಷಗಳಿಂದ ಪ್ರತಿಷ್ಠಿತ ಸರ್ಕಾರಿ ಕಾಲೇಜಿನಲ್ಲಿ ಉಳಿದುಕೊಂಡು ರಾಜಕೀಯ ಪ್ರಭಾವಿ ವ್ಯಕ್ತಿಗಳ ಹೆಸರು ಬಳಸಿಕೊಂಡು ಪಠ್ಯಪುಸ್ತಕ ಅಥವಾ ಡೈಜೆಸ್ಟನ್ನ ರಚಿಸಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಓದುವಂತೆ ಒತ್ತಾಯ ಮಾಡಿ ಸ್ಪೆಷಲ್ ಕ್ಲಾಸಿನ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ಪಾಠ ಮಾಡುವುದು ಸೇರಿದಂತೆ ಇತರೆ ಚಟುವಟಿಕೆಗಳನ್ನ ನಡೆಸುತ್ತಿರುವ ಇವರು ರಿಯಲ್ ಎಸ್ಟೇಟ್ ಚೀಟಿ ವ್ಯವಹಾರ ಬಡ್ಡಿ ವ್ಯವಹಾರ ಸೇರಿದಂತೆ ಇತರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಆರೋಪ ಮಾಡಿದರು.

 

 

 

ಕಾಲೇಜು ಸಮಯಕ್ಕೆ ಸರಿಯಾಗಿ ಆಗಮಿಸದೆ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ನಂತರ ಟೀ ಅಂಗಡಿ ಸೇರಿದಂತೆ ಇತರೆ ಕಡೆಗಳಿಗೆ ತೆರಳಿ ಕಾಲೇಜಿನ ಆಂತರಿಕ ವಿಚಾರಗಳನ್ನ ಚರ್ಚಿಸುತ್ತಾ ಕಾಲಹರಣ ಮಾಡಿ ಸಿಬ್ಬಂದಿಗಳನ್ನು ಎದುರಿಸಿ ಬೆದರಿಸಿ ನನಗೆ ಯಾರು ಏನು ಮಾಡುವರು ಎಂಬುದಾಗಿ ವರ್ತಿಸುತ್ತಿರುವ ಈ ಉಪನ್ಯಾಸಕರ ಪಾಠವನ್ನ ಕೇಳಲು ವಿದ್ಯಾರ್ಥಿಗಳು ಹಿಂಜರಿಯುತ್ತಿದ್ದು ಇಂತಹ ಅಸಂಬದ್ಧ ನಡವಳಿಕೆಯ ದರ್ಪತನದ ಉಪನ್ಯಾಸಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು ಜಿಲ್ಲಾಧಿಕಾರಿಗಳು ಈ ಕೂಡಲೇ ತಂಡವೊಂದನ್ನು ರಚನೆ ಮಾಡಿ ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

 

 

 

ನಾವು ಉಪನ್ಯಾಸಕನ ವಿರುದ್ಧ ಸುಖ ಸುಮ್ಮನೆ ಆರೋಪ ಮಾಡುತ್ತಿಲ್ಲ ಇತ್ತೀಚೆಗೆ ಇವರ ಆಟ ಟೋಪಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಉಪನ್ಯಾಸಕರಿಂದ ಕಾಲೇಜುಗಳಲ್ಲಿ ಕಲಿಕೆ ಹಂತದಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಲು ಸಾಧ್ಯವಿಲ್ಲ ಪ್ರತಿಷ್ಠಿತ ಕಾಲೇಜಿಗೆ ಕೆಟ್ಟ ಹೆಸರು ಬರುತ್ತಿದ್ದು ಅದ್ದರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಜರುಗಿಸದೆ ಹೋದರೆ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

 

 

 

ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಕನ್ನಡಪರ ಸಂಘಟನೆಗಳ ಒಕ್ಕೂಟ, ತುಮಕೂರು ಘಟಕ ಜಿಲ್ಲಾಧ್ಯಕ್ಷ ಯೆಲ್ಲೇಶ್ ಗೌಡ, ಉಪಾಧ್ಯಕ್ಷ ಹೇಮಂತ್ ಕುಮಾರ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಂಜನ್ ಮೂರ್ತಿ, ಆಟೋ ಘಟಕದ ಅಧ್ಯಕ್ಷ ಸುಧಾಕರ್ ಗೌಡ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಸುರೇಶ್ ಸೇರಿದಂತೆ ಸಂಘಟನೆಯ ವಿವಿಧ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

error: Content is protected !!